ಬೆಂಗಳೂರು: ಜೂ.20ರಂದು ನಡೆದ ವಿಶ್ವ ಶಾಂತಿ ವಿಶ್ವವಿದ್ಯಾಲಯ (WPU ಗೋವಾದ ಓಪನ್ ಹೌಸ್‌ನಲ್ಲಿ ಮಾತನಾಡಿದ ಭಾಷಣಕಾರರ ಪ್ರಕಾರ, ಕೃತಕ ಬುದ್ಧಿಮತ್ತೆ ಹಾಗೂ ಕ್ಷಿಪ್ರಗತಿಯ ತಂತ್ರಜ್ಞಾನ ಬದಲಾವಣೆಯು ವಿಶ್ವವ್ಯಾಪಿಯಾಗಿ ಉದ್ದಿಮೆಗಳನ್ನು ಮರುರೂಪಿಸುತ್ತಿರುವಂತೆಯೇ, ವಿಶ್ವವಿದ್ಯಾಲಯಗಳು, ತನ್ನ ವಿದ್ಯಾರ್ಥಿಗಳನ್ನು ಅವರ ಮೊದಲ ಉದ್ಯೋಗಕ್ಕಾಗಿ ತಯಾರು ಗೊಳಿಸುವ ಬದಲು, ಅವರು ಜೀವನಪರ್ಯಂತ ಅನೇಕ ವೃತಿ ಪರಿವರ್ತನೆಗಳನ್ನು ಮಾಡಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಸಜ್ಜುಗೊಳಿಸುವ ಅಗತ್ಯವಿದೆ.
ಈ ಕಾರ್ಯಕ್ರಮವು, ಹೆಚ್ಚು ಹೆಚ್ಚು ಅನಿಶ್ಚಿತಗೊಳ್ಳುತ್ತಿರುವ ಜಗತ್ತಿನಲ್ಲಿ ಉನ್ನತ ಶಿಕ್ಷಣದ ಭವಿಷ್ಯ ತ್ತಿನ ಕುರಿತು ಸಂಭಾವ್ಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರೊಡನೆ ಚರ್ಚೆಗಳನ್ನೂ ವಿಶ್ವವಿದ್ಯಾಲಯಗಳಿಂದ ಬದಲಾಗುತ್ತಿರುವ ನಿರೀಕ್ಷೆಗಳನ್ನೂ ಚರ್ಚಿಸಿತು. ವಿವಿಧ ಕ್ಷೇತ್ರಗಳಾಚೆ ಆಲೋಚಿಸುವ ಸಾಮರ್ಥ್ಯ, ಬದಲಾವಣೆಯ ಅಳವಡಿಕೆಯ ಸಾಮರ್ಥ್ಯ ಮತ್ತು ಸಂಕೀರ್ಣವಾದ ವಾಸ್ತವ ಜಗತ್ತಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯದೊಂದಿಗೆ ವಿಷಯದ ಆಳವನ್ನು ಸಂಯೋಜಿಸಲು ಉದ್ದೇಶಿಸಿದ WPU ಗೋವಾದ ಬಹುವಿಷಯ ಶಿಕ್ಷಣ ಮಾದರಿಯು ಸಂವಾದಗಳ ಕೇಂದ್ರಬಿಂದುವಾಗಿತ್ತು.
“WPU ಗೋವಾ, ಒಂದೇ ವಿಷಯದ ಗಡಿಯಾಚೆ ನಡೆಯುವ ದೃಷ್ಟಿಕೋನಗಳೊಂದಿಗೆ ತೊಡಗಿ ಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಒಂದು ಬಹುವಿಷಯ ದೃಷ್ಟಿಕೋನದ ಸುತ್ತ ಸ್ಥಾಪಿತಗೊಂಡಿದೆ. ತಲ್ಲೀನ ಕಲಿಕೆ, ಉದ್ದಿಮೆ ಸಂಯೋಜನೆ, ಜಾಗತಿಕ ತೆರೆದುಕೊಳ್ಳುವಿಕೆ ಹಾಗೂ ಸಕ್ರಿಯ ಕಲಿಕೆಯ ಮೂಲಕ ವಿಶ್ವವಿದ್ಯಾಲಯವು ಪದವೀಧರರನ್ನು ಜೀವನಪರ್ಯಂತದ ಕಲಿಕೆ, ಅಳವಡಿಕೆ ಮತ್ತು ನಾಯಕತ್ವಕ್ಕೆ ಸಿದ್ಧಗೊಳಿಸುವುದು ಮಾತ್ರವಲ್ಲದೆ ಅವರು ತಾವು ಕಲಿತುದನ್ನು ಖಾಸಗಿ ಹಾಗೂ ಸಾರ್ವಜನಿಕ ಕ್ಷೇತ್ರದ ಅತ್ಯುತ್ತಮ ಉದ್ಯೋಗಗಳಲ್ಲಿ ಪ್ರಯೋಗಿಸುವಂತಹ ಅವಕಾಶವನ್ನೂ ಒದಗಿಸುವ ಗುರಿ ಹೊಂದಿದೆ.” ಎಂದು ಉಪಕುಲಪತಿ ವಾಲ್ಟರ್ ಲೀಲ್ (Walter Leal) ಹೇಳಿದರು.
"ವಿದ್ಯಾರ್ಥಿಗಳನ್ನು ಅವರ ಮೊದಲ ಉದ್ಯೋಗಕ್ಕೆ ತಯಾರುಗೊಳಿಸಿರೆ ಸಾಲದು ಎಂಬುದನ್ನು ಈಗ ವಿಶ್ವವಿದ್ಯಾಲಯಗಳಿಗೆ ಮನವರಿಕೆಯಾಗಿದೆ.” ಎಂದು ಹೇಳಿದ WPU ಗೋವಾದ ಪ್ರೊ ಉಪಕುಲಪತಿ ಡಾ.ಆಶೀಶ್ ಭಾರದ್ವಾಜ್, “ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ ನಾವು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎದುರಿಸಬಹುದಾದ ಅನೇಕ(ಬಹು) ಬದಲಾವಣೆಗಳು, ಪರಿವರ್ತನೆಗಳು ಮತ್ತು ಅವಕಾಶಗಳಿಗೆ ಅವರನ್ನು ತಯಾರುಗೊಳಿಸುತ್ತಿದ್ದೇವೆಯೇ ಎಂಬುದು. ಭವಿಷ್ಯತ್ತು ಕೇವಲ ತಜ್ಞರಿಗೆ ಮಾತ್ರ ಸೇರಿದುದಲ್ಲ. ಆದರೆ ನಿರಂತರವಾಗಿ ಕಲಿಯಬಲ್ಲ, ವಿವಿಧ ಕ್ಷೇತ್ರಗಳಾದ್ಯಂತ್ ಪರಿಕಲ್ಪನೆ ಗಳನ್ನು ಸಂಪರ್ಕಗೊಳಿಸಬಲ್ಲ ಮತ್ತು ಸಾಂಪ್ರದಾಯಿಕ ವರ್ಗಗಳಲ್ಲಿ ಸರಿಯಾಗಿ ಹೊಂದಿಕೊಳ್ಳದ ಸವಾಲುಗಳಿಗೆ ಪ್ರತಿಕ್ರಿಯೆ ನೀಡುವ ವ್ಯಕ್ತಿಗಳಿಗೂ ಸೇರಿದೆ.” ಎಂದರು.
ಉದ್ದಿಮೆಗಳು ಸಾಂಪ್ರದಾಯಿಕ ಶೈಕ್ಷಣಿಕ ಚಕ್ರಗಳಿಗಿಂತ ವೇಗವಾಗಿ ಬದಲಾಗುತ್ತಿರುವ ಹಿನ್ನೆಲೆ ಯಲ್ಲಿ, ಉನ್ನತ ಶಿಕ್ಷಣದ ಬಗ್ಗೆ ದೀರ್ಘಕಾಲದಿಂದ ಇದ್ದ ಅನೇಕ ಊಹೆಗಳು ಹೇಗೆ ಸವಾಲಿಗೆ ಒಳಗಾಗುತ್ತಿವೆ ಎಂಬುದನ್ನು ಈ ಚರ್ಚೆ ಪರಿಶೀಲಿಸಿತು. ಹೊಸ ವೃತ್ತಿಗಳು ಉದಯಿಸುತ್ತಿವೆ, ಈಗಿರುವ ಅನೇಕ ಉದ್ಯೋಗಗಳ ಸ್ವರೂಪ ಬದಲಾಗುತ್ತಿದೆ, ಮತ್ತು ಸ್ಪರ್ಧೆಯು ಹೆಚ್ಚಾಗಿ ಒಂದೇ ಕ್ಷೇತ್ರ ದಲ್ಲಿ ಪರಿಣತಿ ಹೊಂದಿರುವವರಿಗಿಂತ ಹಲವಾರು ಕ್ಷೇತ್ರಗಳ ಪರಿಣತಿಯನ್ನು ಸಂಯೋಜಿಸಿ ಕೆಲಸ ಮಾಡುವ ವ್ಯಕ್ತಿಗಳಿಂದ ಬರುತ್ತಿದೆ.
ತಾಂತ್ರಿಕ ಪರಿಣತಿಯಷ್ಟೇ ಕಲಿಯುವ ಸಾಮರ್ಥ್ಯ, ಬದಲಾವಣೆಗಳಿಗೆ ಹೊಂದಿಕೊಳ್ಳುವ ಗುಣ ಹಾಗೂ ವಿವಿಧ ಕ್ಷೇತ್ರಗಳ ನಡುವೆ ಕಾರ್ಯನಿರ್ವಹಿಸುವ ಕೌಶಲ್ಯವೂ ಭವಿಷ್ಯದಲ್ಲಿ ಅತ್ಯಂತ ಮಹತ್ವದ್ದಾಗಬಹುದು ಎಂಬುದನ್ನು ಭಾಗವಹಿಸಿದವರು ತಿಳಿದುಕೊಂಡರು. ಭವಿಷ್ಯದ ವೃತ್ತಿಜೀವನಕ್ಕೆ ಕುತೂಹಲ, ಸವಾಲುಗಳನ್ನು ಎದುರಿಸುವ ದೃಢತೆ ಮತ್ತು ಜೀವಮಾನಪೂರ್ತಿ ಕಲಿಯುವ ಮನೋಭಾವ ಅತ್ಯಗತ್ಯ ಸಾಮರ್ಥ್ಯಗಳಾಗುತ್ತಿವೆ ಎಂಬುದನ್ನೂ ಈ ಸಂವಾದ ಪರಿಶೀಲಿಸಿತು.
ಭಾಷಣಕಾರರು, ಉನ್ನತ ಶಿಕ್ಷಣ ಸಂಸ್ಥೆಗಳು ಈಗಿರುವ ವೃತ್ತಿಗಳಿಗೆ ಮಾತ್ರ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವುದಕ್ಕಿಂತ, ಇನ್ನೂ ಊಹಿಸಲಾಗದ ಭವಿಷ್ಯದ ಅವಕಾಶಗಳಿಗೆ ಅವರನ್ನು ಸಿದ್ಧಗೊಳಿಸುವತ್ತ ಹೆಚ್ಚು ಗಮನಹರಿಸಬೇಕೆಂದು ಒತ್ತಿ ಹೇಳಿದರು.
WPU ಗೋವಾ ಪ್ರಸ್ತುತ, ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್()CSE ನಲ್ಲಿ ಬಿ.ಟೆಕ್, ಬ್ಯಾಚಲರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (Hons.), ಇಂಟಿಗ್ರೇಟೆಡ್ ಪ್ರಾಡಕ್ಟ್ ಡಿಸೈನ್‌ನಲ್ಲಿ B.Des. ಕಮ್ಯುನಿಕೇಶನ್ ಡಿಸೈನ್‌ನಲ್ಲಿ B.Des. ಮನೋವಿಜ್ಞಾನ ಶಾಸ್ತ್ರದಲ್ಲಿ B.Sc. (Hons.) ಪದವಿಗಳನ್ನು ಒದಗಿಸುತ್ತಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರು ಕೆಲಸದ ಭವಿಷ್ಯತ್ತಿನ ಬಗ್ಗೆ ಸ್ಪಷ್ಟತೆ ಬಯಸುತ್ತಿರುವಂತಹ ಸಮಯದಲ್ಲಿ, ಈ ಚರ್ಚೆಗಳು ಉನ್ನತ ಶಿಕ್ಷಣ ಸಂಸ್ಥೆಗಳು, ಕೇವಲ ಉದ್ಯೋಗಶೀಲತೆಯ ಮೇಲೆ ಮಾತ್ರವಲ್ಲದೆ, ಕಲಿಯುವವರು ತಮ್ಮ ವೃತ್ತಿಪರ ಜೀವನದುದ್ದಕ್ಕೂ ನಿರಂತರ ಬದಲಾವಣೆ ಯೊಂದಿಗೆ ನಡೆಯಲು ತಯಾರುಗೊಳಿಸುವುದರ ಮೇಲೂ ಗಮನ ಕೇಂದ್ರೀಕರಿಸುವ ಅಗತ್ಯವನ್ನು ಒತ್ತಿ ಹೇಳಿದವು.