ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಾಯುಮಾಲಿನ್ಯ ತಪಾಸಣೆ ದರ ಹೆಚ್ಚಳ!

ಕರ್ನಾಟಕದಲ್ಲಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿಸಿ) ಪಡೆಯಲು ಇನ್ನು ಮುಂದೆ ವಾಹನ ಮಾಲೀಕರು ಹೆಚ್ಚಿನ ಶುಲ್ಕ ತೆರಬೇಕಾಗಿದೆ. ಕಾರ್ಯಾಚರಣೆಯ ವೆಚ್ಚ ಹೆಚ್ಚಿರುವು ದನ್ನು ಉಲ್ಲೇಖಿಸಿ ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರ ಸಂಘ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಸಾರಿಗೆ ಇಲಾಖೆ, ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಿದೆ.

ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್

ಬೆಂಗಳೂರು: ಇಂಧನ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾ ಗಿರುವ ಸಾರ್ವಜನಿಕರಿಗೆ ರಾಜ್ಯ ಸರಕಾರ ಮತ್ತೊಂದು ಶಾಕ್ ನೀಡಿದೆ. ಕರ್ನಾಟಕದಲ್ಲಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿಸಿ) ಪಡೆಯಲು ಇನ್ನು ಮುಂದೆ ವಾಹನ ಮಾಲೀಕರು ಹೆಚ್ಚಿನ ಶುಲ್ಕ ತೆರಬೇಕಾಗಿದೆ. ಕಾರ್ಯಾಚರಣೆಯ ವೆಚ್ಚ ಹೆಚ್ಚಿರುವುದನ್ನು ಉಲ್ಲೇಖಿಸಿ ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರ ಸಂಘ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಸಾರಿಗೆ ಇಲಾಖೆ, ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಿದೆ.

ಇದನ್ನೂ ಓದಿ: Delhi Air Pollution: ದೆಹಲಿ ವಾಯು ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ; ಪ್ರತಿಭಟನಾಕಾರರನ್ನೇ ಬಂಧಿಸಿದ ಪೊಲೀಸರು!

ರಾಜ್ಯದಲ್ಲಿ ಕೊನೆಯ ಬಾರಿಗೆ 2022ರ ಏಪ್ರಿಲ್ ನಲ್ಲಿ ಪಿಯುಸಿಸಿ ಶುಲ್ಕವನ್ನು ಪರಿಷ್ಕರಿಸಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಬಾಡಿಗೆ, ವಿದ್ಯುತ್ ಬಿಲ್ ಮತ್ತು ಇಂಟರ್‌ನೆಟ್ ವೆಚ್ಚ ಏರಿಕೆ ಯಾಗಿದೆ. ಪರೀಕ್ಷಾ ಉಪಕರಣಗಳ ನಿರ್ವಹಣೆ ಹಾಗೂ ಸಿಬ್ಬಂದಿ ವೇತನ ಗಣನೀಯ ವಾಗಿ ಹೆಚ್ಚಾಗಿದೆ. ಪ್ರಿಂಟರ್ ಕಾರ್ಟ್ರಿಡ್ಜ್ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿದೆ. ಈ ಎಲ್ಲ ಕಾರ್ಯಾಚರಣೆ ವೆಚ್ಚಗಳನ್ನು ಸರಿದೂಗಿಸಲು ಶುಲ್ಕ ಏರಿಕೆ ಅನಿವಾರ್ಯ ಎಂದು ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳ ಮಾಲೀಕರು ಇಲಾಖೆಗೆ ಮನವಿ ಮಾಡಿದ್ದರು.

ಕಟ್ಟುನಿಟ್ಟಿನ ಷರತ್ತು: ಶುಲ್ಕ ಏರಿಕೆಯ ಜತೆಗೆ ಸಾರ್ವಜನಿಕರಿಗೆ ಸರಿಯಾದ ಸೇವೆ ಸಿಗುವಂತೆ ಮಾಡಲು ಮತ್ತು ಅಕ್ರಮಗಳನ್ನು ತಡೆಯಲು ಸಾರಿಗೆ ಇಲಾಖೆ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ತಜ್ಞ ಸಿಬ್ಬಂದಿ ನೇಮಕ, ಸಾಧನಗಳ ಮರುಮಾಪನ, ಪರೀಕ್ಷೆಗೆ ಬಳಸುವ ಗ್ಯಾಸ್ ಅನಾಲೈಸರ್‌ಗಳನ್ನು ನಿಯಮಿತವಾಗಿ ಕಡ್ಡಾಯವಾಗಿ ಕ್ಯಾಲಿಬ್ರೇಷನ್ ಮಾಡಿಸಬೇಕು. ಅಲ್ಲದೆ, ಕೊನೆಯ ಕ್ಯಾಲಿಬ್ರೇಷನ್ ಮಾಡಿದ ದಿನಾಂಕವನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಪಿಯುಸಿಸಿ ಪ್ರಮಾಣಪತ್ರದಲ್ಲಿ ಕೈಯಿಂದ ಬರೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗಣಕೀಕೃತ ಪ್ರಮಾಣಪತ್ರವನ್ನು ಮಾತ್ರ ನೀಡಬೇಕು. ಕೇಂದ್ರ ಮೋಟಾರು ವಾಹನ ನಿಯಮ ಗಳು-1989ರ ‘ರೂಲ್ 115’ರ ಪ್ರಕಾರ ನಿಗದಿತ ಮಿತಿಯೊಳಗೆ ವಾಹನದ ಹೊರಸೂಸುವಿಕೆ ಇದ್ದರೆ ಮಾತ್ರ ಪ್ರಮಾಣಪತ್ರ ವಿತರಿಸಬೇಕು.

*

ದ್ವಿಚಕ್ರ ವಾಹನಗಳು: 65 ರಿಂದ 80 ರು.ಗೆ ಏರಿಕೆ

ತ್ರಿಚಕ್ರ ವಾಹನಗಳು: 75 ರಿಂದ 80ರು.ಗೆ ಏರಿಕೆ

ಪೆಟ್ರೋಲ್/ಸಿಎನ್‌ಜಿ/ ಎಲ್‌ಪಿಜಿ ಕಾರುಗಳು: 115 ರಿಂದ 150 ರು.ಗೆ ಏರಿಕೆ

ಎಲ್ಲ ಮಾದರಿಯ ಡೀಸೆಲ್ ವಾಹನಗಳು: 160 ರಿಂದ ರು. 200 ರು.ಗೆ ಏರಿಕೆ