ಬೆಂಗಳೂರು: ಐಸಿಎಫ್ಎಐ ಲಾ ಸ್ಕೂಲ್‌ನಲ್ಲಿ 1ನೇ ಎನ್. ಜೆ. ಯಶಸ್ವಿ ಸ್ಮಾರಕ ಅಣಕು ನ್ಯಾಯಾ ಲಯ ಸ್ಪರ್ಧೆಯಲ್ಲಿ ಅಲ್-ಅಮೀನ್ ಲಾ ಕಾಲೇಜಿನ ಅಮೈರ್ ಸಯೀದ್, ಶರೀಫ್ ಬಿ.ಎಂ.ಎ ಮತ್ತು ಆರ್ಮಾನ್ ಶೇಖ್ ಸದಸ್ಯರ ತಂಡವು ವಿಜೇತರಾಗಿದ್ದು, ರೂ. 30,000 ನಗದು ಬಹುಮಾನವನ್ನು ಪಡೆದಿತು.
ರನ್ನರ್-ಅಪ್ ತಂಡವಾಗಿ ಸೇಂಟ್ ಜೋಸೆಫ್ ಲಾ ಕಾಲೇಜಿನ ಸಾವನ್ನಾ ಮೇರಿ ಅಲೆಕ್ಸಾಂಡರ್, ನೆಹಾಲ್ ಬಿ.ವಿ. ಮತ್ತು ಮನಸ್ವಿ ಎಂ. ಶೆಟ್ಟಿ ಸದಸ್ಯರ ತಂಡವು ರೂ. 20,000 ಬಹುಮಾನ ಪಡೆಯಿತು.
ಉತ್ತಮ ಮೆಮೋರಿಯಲ್ ಪ್ರಶಸ್ತಿಯನ್ನು ಬೆಂಗಳೂರು ಕೆಎಲ್‌ಇ ಲಾ ಕಾಲೇಜಿನ ಚಂದನಾ ಎಂ., ಎಸ್. ಯೋಗಿನಾಥ್ ಮತ್ತು ವಿನಯ್ ಕೆ.ಎಸ್. ಸದಸ್ಯರ ತಂಡವು ಪಡೆದು ರೂ. 5,000 ಬಹುಮಾನ ವನ್ನು ಗಳಿಸಿತು.
ಉತ್ತಮ ಪುರುಷ ಮೂಟರ್ ಪ್ರಶಸ್ತಿಯನ್ನು ಎಸ್. ಯೋಗಿನಾಥ್ (ಕೆಎಲ್‌ಇ ಲಾ ಕಾಲೇಜು) ರೂ. 2,500 ನಗದು ಬಹುಮಾನ ಸಹಿತವಾಗಿ ಪಡೆದರು. ಉತ್ತಮ ಮಹಿಳಾ ಮೂಟರ್ ಪ್ರಶಸ್ತಿಯನ್ನು ಸೇಂಟ್ ಜೋಸೆಫ್ ಲಾ ಕಾಲೇಜಿನ ಸಾವನ್ನಾ ಮೇರಿ ಅಲೆಕ್ಸಾಂಡರ್ ಅವರಿಗೆ ರೂ. 2,500 ನಗದು ಬಹುಮಾನ ಸಹಿತವಾಗಿ ನೀಡಲಾಯಿತು.
ಇದನ್ನೂ ಓದಿ: Bangalore News: ಐಸಿಎಫ್ಐ ಲಾ ಸ್ಕೂಲ್. ನಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆಗೆ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಚಾಲನೆ
ಎರಡು ದಿನಗಳ ಕಾಲ ನಡೆದ ಹಲವು ಸುತ್ತುಗಳ ಬಳಿಕ, ಎರಡು ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿ ತಮ್ಮ ವಾದಗಳನ್ನು ಗಣ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ಮಂಡಿಸಿದವು. ಈ ಪೀಠದಲ್ಲಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಆದಿ, ಐಸಿಎಫ್ಎಐ ವಿಶ್ವವಿದ್ಯಾಲಯ ಮಿಜೋರಂನ ಕುಲಪತಿಗಳಾದ ಪ್ರೊ. ಡಾ. ವೈ. ಆರ್. ಹರಗೋಪಾಲ್ ರೆಡ್ಡಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕಾರ್ಯನಿರ್ವಹಣಾ ಕುಲಪತಿಗಳಾದ ಪ್ರೊ. ಡಾ. ವಿ. ಸುಧೇಶ್ ಉಪಸ್ಥಿತರಿದ್ದರು.
ಅಂತಿಮ ಮೂಟ್ ಸಮಸ್ಯೆ ಭೂಸ್ವಾಧೀನ ಕಾನೂನಿನ ಅನ್ವಯತೆ, ವರ್ಗೀಕರಣದ ವಿವಾದಗಳು ಹಾಗೂ ನ್ಯಾಯಾಧಿಕಾರದ ಸವಾಲುಗಳಂತಹ ಸಂಕೀರ್ಣ ಕಾನೂನು ಪ್ರಶ್ನೆಗಳನ್ನು ಒಳಗೊಂಡಿ ತ್ತು. ಇದರಿಂದ ಸ್ಪರ್ಧಿಗಳ ಉನ್ನತ ಮಟ್ಟದ ವಿವರಣೆ ಹಾಗೂ ವಾದನಾ ಕೌಶಲ್ಯಗಳನ್ನು ಪರೀಕ್ಷಿಸ ಲಾಯಿತು.
ಸಮಾರೋಪ ಸಮಾರಂಭದಲ್ಲಿ ಐಎಫ್‌ಹೆಚ್‌ಇ ಬೆಂಗಳೂರು ಕ್ಯಾಂಪಸ್‌ನ ಪ್ರೊ-ವೈಸ್ ಚಾನ್ಸಲರ್ ಹಾಗೂ ಕ್ಯಾಂಪಸ್ ಮುಖ್ಯಸ್ಥರಾದ ಪ್ರೊ. ಡಾ. ಮುದ್ದು ವಿನಯ್ ಅವರು ಐಸಿಎಫ್ಎಐ ಲಾ ಸ್ಕೂಲ್‌ನ ಶೈಕ್ಷಣಿಕ ಪರಂಪರೆ ಮತ್ತು ಉಪಕ್ರಮಗಳನ್ನು ವಿವರಿಸಿದರು. ಐಸಿಎಫ್ಎಐ ಲಾ ಸ್ಕೂಲ್ ವಿಭಾಗದ ಮುಖ್ಯಸ್ಥರಾದ ಡಾ. ರಾಜಶ್ರೀ ಪಾಟೀಲ ಅವರು ಸಂಸ್ಥೆಯ ಶೈಕ್ಷಣಿಕ ಮತ್ತು ವೃತ್ತಿಪರ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನ್ಯಾಯಾಧೀಶರು ತಮ್ಮ ನ್ಯಾಯಾಂಗ ಅನುಭವಗಳನ್ನು ಹಂಚಿಕೊಂಡು ಸ್ಪರ್ಧಿಗಳೊಂದಿಗೆ ಸಂವಾದ ನಡೆಸಿದರು.
ಅಂತಿಮ ಸುತ್ತು ಹಲವು ವಾರಗಳ ಸಿದ್ಧತೆಯ ಬೌದ್ಧಿಕ ಶಿಖರವಾಗಿದ್ದು, ಭೂಸ್ವಾಧೀನ ವಿಷಯ ಗಳಲ್ಲಿ ನ್ಯಾಯಾಂಗ ಪರಿಶೀಲನೆಯ ಅಡಿಯಲ್ಲಿ ನಡೆಯುವ ವಾಸ್ತವ ಮಾನದಂಡಗಳ ಪರಿಚಯ ವನ್ನು ವಿದ್ಯಾರ್ಥಿಗಳಿಗೆ ಒದಗಿಸಿತು.
ಕರ್ನಾಟಕದ ವಿವಿಧ ಪ್ರಮುಖ ಕಾನೂನು ಶಿಕ್ಷಣ ಸಂಸ್ಥೆಗಳನ್ನು ಪ್ರತಿನಿಧಿಸುವ 10 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಈ ಕಾರ್ಯಕ್ರಮವನ್ನು ಡಾ. ರಾಜಶ್ರೀ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪ್ರೊ. ಶಿವಾನಿ ಪುರೋಹಿತ್ ಸಂಯೋಜಿಸಿದರು.
ಈ ಸ್ಪರ್ಧೆ ಭೂಸ್ವಾಧೀನ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ಭವಿಷ್ಯದ ವೃತ್ತಿಪರರನ್ನು ರೂಪಿಸುವಲ್ಲಿ ವಿಶೇಷ ಮೂಟಿಂಗ್‌ಗಳ ಮಹತ್ವವನ್ನು ಮತ್ತೊಮ್ಮೆ ಪ್ರತಿಪಾದಿಸಿತು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವಾದನಾ ಅನುಭವ ಮತ್ತು ಸಮಕಾಲೀನ ಭೂಸ್ವಾಧೀನ ವಿವಾದಗಳ ಪರಿಚಯವನ್ನು ಇದು ಒದಗಿಸಿತು.