ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮವು ಕಂಪ್ಯೂಟರ್ ಸೈನ್ಸ್ ನಲ್ಲಿ ವಿದ್ಯಾರ್ಥಿನಿಯರಿಗೆ 500 ಹೊಸ ಶಿಷ್ಯವೇತನಗಳಿಂದ 2,200ಕ್ಕೆ ವಿಸ್ತರಣೆ

“ಪ್ರತಿ ವಿದ್ಯಾರ್ಥಿಗೂ ಅವರ ಸಾಮರ್ಥ್ಯ ಕಂಡುಕೊಳ್ಳುವ ಅವಕಾಶವಿರಬೇಕು. ಅಮೆಜಾನ್ ಫ್ಯೂಚರ್ ಎಂಜಿನಿಯರ್ ಸ್ಕಾಲರ್ ಶಿಪ್ ಗಳ ಮೂಲಕ ನಾವು ಭಾರತದಾದ್ಯಂತ ಸಮುದಾ ಯಗಳಲ್ಲಿ ಪ್ರತಿಭಾವಂತ, ಪರಿಶ್ರಮ ಪಡುವ ವಿದ್ಯಾರ್ಥಿಗಳ ಮೂಲಕ ಉದ್ಯೋಗದ ಭವಿಷ್ಯ ವನ್ನು ರೂಪಿಸುವ ನಾಯಕರ ಮೇಲೆ ಹೂಡಿಕೆ ಮಾಡುತ್ತಿದ್ದೇವೆ” ಎಂದು ಅಮೆಜಾನ್ ಎಕ್ಸ್ ಪೀರಿಯೆನ್ಸಸ್ ಅಂಡ್ ಅಪ್ ಸ್ಕಿಲ್ಲಿಂಗ್ ಉಪಾಧ್ಯಕ್ಷೆ ಕ್ಯಾಂಡಿ ಕ್ಯಾಸಲ್ ಬೆರ್ರಿ ಹೇಳಿದರು

ಬೆಂಗಳೂರು: ಅಮೆಜಾನ್ ಇಂದು ತನ್ನ ಅಮೆಜಾನ್ ಫ್ಯೂಚರ್ ಎಂಜಿನಿಯರ್ (ಎ.ಎಫ್.ಇ.) ಕಾರ್ಯಕ್ರಮದ ಅಡಿಯಲ್ಲಿ 2026ರ 500 ಶಿಷ್ಯವೇತನಗಳನ್ನು ಪ್ರಕಟಿಸಿದ್ದು ಇದು ಕಡಿಮೆ ಆದಾಯದ ಕುಟುಂಬಗಳ ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ಹಣಕಾಸು ಬೆಂಬಲ, ಮಾರ್ಗದರ್ಶನ ಮತ್ತು ತಂತ್ರಜ್ಞಾನದಲ್ಲಿ ವೃತ್ತಿಯ ಅವಕಾಶಗಳನ್ನು ನೀಡುತ್ತದೆ. ಅಮೆಜಾನ್ ಫ್ಯೂಚರ್ ಎಂಜಿನಿಯರ್ (ಎ.ಎಫ್.ಇ.) ತಂತ್ರಜ್ಞಾನ ಶಿಕ್ಷಣ ಮತ್ತು ವೃತ್ತಿಯ ಅವಕಾಶಗಳ ಲಭ್ಯತೆ ಹೆಚ್ಚಿಸಲು ವಿನ್ಯಾಸಗೊಳಿಸಲಾದ ಅಮೆಜಾನ್ ನ ಜಾಗತಿಕ ಕಂಪ್ಯೂಟರ್ ವಿಜ್ಞಾನ ಶಿಕ್ಷಣ ಕಾರ್ಯಕ್ರಮವಾಗಿದೆ. ಈ ವಿಸ್ತರಣೆಯಿಂದ ಈ ಕಾರ್ಯ ಕ್ರಮವು 2,000 ಸಕ್ರಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ಬೆಂಬಲಿಸುತ್ತಿದೆ.

ಎ.ಎಫ್.ಒ. ಸ್ಕಾಲರ್ ಶಿಪ್ ₹2 ಲಕ್ಷ ಹಣಕಾಸು ನೆರವನ್ನು ಕಡಿಮೆ ಆದಾಯದ ಕುಟುಂಬ ಗಳ ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ವಿಭಾಗಗಳಲ್ಲಿ ಬಿ.ಇ. ಅಥವಾ ಬಿ.ಟೆಕ್. ಪದವಿಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ನೀಡುತ್ತದೆ. ಹಣಕಾಸು ಬೆಂಬಲ ಮಾತ್ರವಲ್ಲದೆ ಈ ವಿದ್ಯಾರ್ಥಿನಿಯರು ಲ್ಯಾಪ್ ಟಾಪ್, ಬೂಟ್ ಕ್ಯಾಂಪ್ ಗಳ ಮೂಲಕ ತಾಂತ್ರಿಕ ತರಬೇತಿ, ಅಮೆಜಾನ್ ವಿಮೆನ್ ಆಫ್ ದಿ ವರ್ಲ್ಡ್ (ಡಬ್ಲ್ಯೂಒಡಬ್ಲ್ಯೂ) ಮೂಲಕ ವೆಬಿನಾರ್ ಗಳು, ಅಮೆಜಾನ್ ಎಂಜಿನಿಯರ್ ಗಳಿಂದ ಒನ್-ಆನ್-ಒನ್ ಮೆಂಟರ್ ಶಿಪ್ ಪಡೆಯುತ್ತಾರೆ ಮತ್ತು ಅವರ ಎರಡನೇ ವರ್ಷದ ನಂತರ ಎಂಟು ವಾರ ಪಾವತಿಸಿದ ಇಂಟರ್ನ್ ಶಿಪ್ ಅವಕಾಶಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ: Bangalore News: ರಿಯಾ ಡೈಮಂಡ್ಸ್ ಬೆಂಗಳೂರಿನಲ್ಲಿ ಭಾರತದ ಮೊದಲ ಪ್ರಯೋಗಾಲಯದಲ್ಲಿ ಬೆಳೆದ ವಜ್ರ ನಿಶ್ಚಿತಾರ್ಥ ಉಂಗುರ ಸ್ಟುಡಿಯೋ ಪ್ರಾರಂಭ

“ಪ್ರತಿ ವಿದ್ಯಾರ್ಥಿಗೂ ಅವರ ಸಾಮರ್ಥ್ಯ ಕಂಡುಕೊಳ್ಳುವ ಅವಕಾಶವಿರಬೇಕು. ಅಮೆಜಾನ್ ಫ್ಯೂಚರ್ ಎಂಜಿನಿಯರ್ ಸ್ಕಾಲರ್ ಶಿಪ್ ಗಳ ಮೂಲಕ ನಾವು ಭಾರತದಾದ್ಯಂತ ಸಮುದಾ ಯಗಳಲ್ಲಿ ಪ್ರತಿಭಾವಂತ, ಪರಿಶ್ರಮ ಪಡುವ ವಿದ್ಯಾರ್ಥಿಗಳ ಮೂಲಕ ಉದ್ಯೋಗದ ಭವಿಷ್ಯವನ್ನು ರೂಪಿಸುವ ನಾಯಕರ ಮೇಲೆ ಹೂಡಿಕೆ ಮಾಡುತ್ತಿದ್ದೇವೆ” ಎಂದು ಅಮೆಜಾನ್ ಎಕ್ಸ್ ಪೀರಿಯೆನ್ಸಸ್ ಅಂಡ್ ಅಪ್ ಸ್ಕಿಲ್ಲಿಂಗ್ ಉಪಾಧ್ಯಕ್ಷೆ ಕ್ಯಾಂಡಿ ಕ್ಯಾಸಲ್ ಬೆರ್ರಿ ಹೇಳಿದರು . “2026ರ ಸ್ಕಾಲರ್ ಶಿಪ್ ಪಡೆದವರು ನಾವು ಒಟ್ಟಿಗೆ ಅಪ್ ಸ್ಕಿಲ್ಲಿಂಗ್ ಮಾರ್ಗಗಳನ್ನು ಸೃಷ್ಟಿಸಿದಾಗ ಮತ್ತು ಯುವಜನರು ಹಾಗೂ ಅವರ ಕನಸುಗಳ ನಡುವೆ ಇರುವ ಅಡೆತಡೆಗಳನ್ನು ನಿವಾರಿಸಿದಾಗ ಏನು ಸಾಧ್ಯ ಎನ್ನುವುದನ್ನು ನಿರೂಪಿಸಿದ್ದಾರೆ” ಎಂದರು.

ಟುಗೆದರ್ ಇಂಡಿಯಾ ಸಮಿಟ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರಕಟಿಸಲಾದ ವಿಸ್ತರಣೆ ಯು ಕಲಿಯಲು ಮತ್ತು ತಂತ್ರಜ್ಞಾನದಲ್ಲಿ ವೃತ್ತಿಗಳನ್ನು ನಿರ್ಮಿಸಿಕೊಳ್ಳಲು ಮಾರ್ಗ ಗಳನ್ನು ಸೃಷ್ಟಿಸಲು ಅಮೆಜಾನ್ ನ ಮುಂದುವರಿದ ಆದ್ಯತೆ ತೋರುತ್ತಿದ್ದು ಅದರಿಂದ ನಾವು ಭವಿಷ್ಯ ಸನ್ನದ್ಧವಾಗಬಹುದು. ಆಂತರಿತ ಸಮ್ಮೇಳನ ಟುಗೆದರ್ ಅಟ್ ಅಮೆಜಾನ್ ಭಾಗವಾಗಿ ಉದ್ಯೋಗಿಗಳಿಗೆ ಬೆಳೆಯಲು, ವರ್ಧಿಸಲು ಮತ್ತು ಕೌಶಲ್ಯಾಭಿವೃದ್ಧಿ, ಉದ್ಯೋಗ ದ ಸ್ಥಳದ ಬೆಂಬಲ ಮತ್ತು ಸಮುದಾಯ ಸಕ್ರಿಯತೆಯ ಮೂಲಕ ಸಂಪರ್ಕದಲ್ಲಿರಲು ನೆರವಾಗುವ ಉಪಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿನ ಇನ್ ದಿಸ್ ಟುಗೆದರ್ ಉಪ ಕ್ರಮವು ವಿದ್ಯಾರ್ಥಿಗಳು, ಗ್ರಾಹಕರು, ಸಮುದಾಯಗಳು, ಪಾಲುದಾರರು ಮತ್ತು ಉದ್ಯಮ ಮಾಲೀಕರಿಗೆ ಅಮೆಜಾನ್ ನಲ್ಲಿ ಮಾರ್ಗಗಳನ್ನು ಅನ್ವೇಷಿಸಿಕೊಳ್ಳಲು ನೆರವಾಗುತ್ತದೆ.

ಮೊದಲ ಪದವೀಧರರ ಸಮೂಹದಲ್ಲಿ ಶೇ.89ರಷ್ಟು ನೇಮಕಾತಿ

2022ರಲ್ಲಿ 200 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವು ವರ್ಷದಿಂದ ವರ್ಷಕ್ಕೆ ಗನಾರ್ಹವಾಗಿ ವಿಸ್ತಾರಗೊಳ್ಳುತ್ತಿದ್ದು 2023ರ ನಂತರ 500 ವಾರ್ಷಿಕ ಶಿಷ್ಯ ವೇತನಗಳಿಗೆ ಹೆಚ್ಚಿಸಿದೆ. ವಿದ್ಯಾರ್ಥಿಗಳನ್ನು ಶೈಕ್ಷಣಿಕ ಸಾಧನೆ, ಹಣಕಾಸಿನ ಅಗತ್ಯ ಮತ್ತು ನಾಯಕತ್ವ ಸಾಮರ್ಥ್ಯ ಆಧರಿಸಿ ಕಠಿಣ ಮೌಲ್ಯಮಾಪನ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಕಾರ್ಯಕ್ರಮದ ಮೊದಲ ಪದವೀಧರರಾದ ಸಮೂಹವು 2025ರಲ್ಲಿ ಶೇ.89ರಷ್ಟು ನೇಮಕಾತಿ ಪಡೆದಿದ್ದು ಅಮೆಜಾನ್ ಒಳಗೊಂಡು ಫಾರ್ಚೂನ್ 500 ಕಂಪನಿ ಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಇಲ್ಲಿಯವರೆಗೆ 400 ವಿದ್ಯಾರ್ಥಿಗಳು ಅಮೆಜಾನ್ ನಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಲ್ಲಿ ಇಂಟರ್ನ್ಶಿಪ್ ಗನ್ನು ಪೂರೈಸಿದ್ದು ಹೊಸ ಸಮೂಹ ಗಳು ಅರ್ಹತೆ ಪಡೆಯುತ್ತಿದ್ದಂತೆ ನೂರಾರು ಮಂದಿ ಇತರೆ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.

ಹಲವು ವಿದ್ಯಾರ್ಥಿಗಳು ಟೈಯರ್-2 ಮತ್ತು ಟೈಯರ್-4 ನಗರಗಳ ಮೊದಲ ತಲೆಮಾರಿನ ಕಾಲೇಜು ಪದವೀಧರರಾಗಿದ್ದು ಈ ಕಾರ್ಯಕ್ರಮವು ಭಾರತದಲ್ಲಿ ಅತ್ಯಂತ ಅಗತ್ಯವಿರುವ ಪ್ರದೇಶಗಳಿಗೆ ತಲುಪಿರುವುದನ್ನು ಬಿಂಬಿಸುತ್ತದೆ. ತೆಲಂಗಾಣದ ಶ್ರೇಯ ಮೂಲ ಈಗ ಸಾಫ್ಟ್ ವೇರ್ ಡೆವಲಪ್ಮೆಂಟ್ ಎಂಜಿನಿಯರ್, ಆಂಧ್ರ ಪ್ರದೇಶದ ಕೀರ್ತಿ ಶಂಕರ ಈಗ ಕ್ಲೌಡ್ ಸಪೋರ್ಟ್ ಅಸೋಸಿಯೇಟ್ ಮತ್ತು ಮಹಾರಾಷ್ಟ್ರದ ನಾಗಪುರದ ಅಂಜಲಿ ಅಷ್ಟಕೆ ಈಗ ಡ್ಯೂಷ್ ಬ್ಯಾಂಕ್ ನಲ್ಲಿ ಗ್ರಾಜುಯೇಟ್ ಅನಲಿಸ್ಟ್ ಎನ್ನುವುದು ತಂತ್ರಜ್ಞಾನದಲ್ಲಿ ತಮ್ಮ ವೃತ್ತಿಗಳನ್ನು ರೂಪಿಸಿಕೊಂಡವರನ್ನು ತೋರಿಸುತ್ತಿದ್ದು ಇದು ದೀರ್ಘಾವಧಿ ಅವಕಾಶಗಳಿಗೆ ಕಾರ್ಯಕ್ರಮದ ಪರಿಣಾಮವನ್ನು ತೋರುತ್ತದೆ.

ಸರ್ಕಾರಿ ಶಾಲೆಗಳಲ್ಲಿ 4.8 ಮಿಲಿಯನ್ ವಿದ್ಯಾರ್ಥಿಗಳನ್ನು ತಲುಪಿದೆ

ಅಮೆಜಾನ್ 2022ರಿಂದ ಎ.ಎಫ್.ಇ. ಕಾರ್ಯಕ್ರಮದಲ್ಲಿ ₹ 50 ಕೋಟಿ (ಸುಮಾರು 6 ಮಿಲಿ ಯನ್ ಡಾಲರ್) ಮೀರಿ ಹೂಡಿಕೆ ತಂತ್ರಜ್ಞಾನದಲ್ಲಿ ಬಾಲಕಿಯರಿಗೆ ವೃತ್ತಿ ರೂಪಿಸಿ ಕೊಳ್ಳಲು ರಚನಾತ್ಮಕ ಮಾರ್ಗವನ್ನು ಶಿಷ್ಯವೇತನದ ಮೂಲಕ ರೂಪಿಸಿದೆ. ಈ ಶಿಷ್ಯವೇತನ ಕಾರ್ಯಕ್ರಮವನ್ನು ಫೌಂಡೇಷನ್ ಫಾರ್ ಎಕ್ಸೆಲೆನ್ಸ್ ಸಹಯೋಗದಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದ್ದು ನವ್ ಗುರುಕುಲ್ ವಿದ್ಯಾರ್ಥಿಗಳಿಗೆ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ನಿರ್ಮಿಸಿಕೊಳ್ಳಲು ಮತ್ತು ಇಂಟರ್ನ್ಶಿಪ್ ಗಳಿಗೆ ಸಿದ್ಧರಾಗಲು ತಾಂತ್ರಿಕ ತರಬೇತಿ ನೀಡುತ್ತದೆ. ಶಿಷ್ಯವೇತನಗಳ ಆಚೆಗೂ ಈ ಕಾರ್ಯ‍ಕ್ರಮವು ಭಾರತದಾದ್ಯಂತ 2021 ಮತ್ತು 2025ರ ನಡುವೆ 50,000 ಸರ್ಕಾರಿ ಶಾಲೆಗಳನ್ನು ತಲುಪಿದ್ದು ಕಂಪ್ಯೂಟರ್ ಸೈನ್ಸ್ ಮತ್ತು ಎಐ ಶಿಕ್ಷಣ ನೀಡುತ್ತಿದೆ.

*

ಅಮೆಜಾನ್ ಕಡಿಮೆ ಆದಾಯದ ಕುಟುಂಬದ ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ನಾಲ್ಕು ವರ್ಷಗಳಿಗೆ ₹2 ಲಕ್ಷ ಹಣಕಾಸು ನೆರವನ್ನು ನೀಡುತ್ತದೆ

  • ಅಮೆಜಾನ್ ಈ ಕಾರ್ಯಕ್ರಮದಲ್ಲಿ 2022ರಿಂದ ~₹50 ಕೋಟಿ (ಸುಮಾರು 6 ಮಿಲಿಯನ್ ಡಾಲರ್) ಹೂಡಿಕೆ ಮಾಡಿದೆ; ಕಂಪ್ಯೂಟರ್ ಸೈನ್ಸ್ ಶಿಕ್ಷಣ ಉಪಕ್ರಮಗಳು 50,000+ ಸರ್ಕಾರಿ ಶಾಲೆಗಳ 4.8 ಮಿಲಿಯನ್ ವಿದ್ಯಾರ್ಥಿಗಳಿಗೆ ತಲುಪಿವೆ
  • 2025ರಲ್ಲಿ ಪದವಿ ಪಡೆದ ಮೊದಲ ಸಮೂಹವು ಅಮೆಜಾನ್ ಮತ್ತು ಇತರೆ ಮುಂಚೂಣಿಯ ಕಂಪನಿಗಳಲ್ಲಿ ಶೇ.89 ನೇಮಕಾತಿ ಪ್ರಮಾಣ ಹೊಂದಿದೆ