ಬೆಂಗಳೂರು/ಹೈದರಾಬಾದ್: ಅಮೆಜಾನ್ ಇಂಡಿಯಾ ಸಂಸ್ಥೆಯು ಸುಸ್ಥಿರ ನೀರಾವರಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ 'ಆರ್ಬಿಯಾ ಪ್ರೆಸಿಷನ್ ಅಗ್ರಿಕಲ್ಚರ್' ನ ಭಾಗವಾದ ನೆಟಾಫಿಮ್ ಸಂಸ್ಥೆಯ ಜೊತೆ ಸಹಯೋಗ ಮಾಡಿಕೊಂಡಿದ್ದು, ಈ ಮೂಲಕ ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ವಿನೂತನ ನೀರು ಉಳಿತಾಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ಇಂದು ಘೋಷಿಸಿದೆ.
ಸಾಂಪ್ರದಾಯಿಕ ಪದ್ಧತಿಯಾದ 'ಪ್ರವಾಹ ನೀರಾವರಿ'ಯ ಬದಲಿಗೆ 'ಹನಿ ನೀರಾವರಿ' ಯನ್ನು ಅಳವಡಿಸಿ ಕೊಳ್ಳುವ ಮೂಲಕ ವರ್ಷಕ್ಕೆ 325 ಮಿಲಿಯನ್ ಲೀಟರ್ ಗೂ ಹೆಚ್ಚು ನೀರನ್ನು ಉಳಿಸುವ ಗುರಿಯನ್ನು ಈ ಯೋಜನೆಗಳು ಹೊಂದಿವೆ.
ಹನಿ ನೀರಾವರಿ ಪದ್ಧತಿಯು ನೀರನ್ನು ನೇರವಾಗಿ ಗಿಡದ ಬೇರುಗಳಿಗೆ ತಲುಪಿಸುತ್ತದೆ, ಇದರಿಂದ ಬೆಳೆ ಇಳುವರಿಯನ್ನು ಕಾಪಾಡಿಕೊಳ್ಳುತ್ತಲೇ ನೀರು ವ್ಯರ್ಥವಾಗುವುದನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ನೀರಿನ ಅಭಾವವಿರುವ ಭಾರತದ ಪ್ರದೇಶ ಗಳಲ್ಲಿ ಈ ತಂತ್ರಜ್ಞಾನವು ಅತ್ಯಂತ ಮಹತ್ವದ್ದಾಗಿದ್ದು, ಇದು ರೈತರು ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಅನುವು ಮಾಡಿಕೊಡುತ್ತದೆ ಮತ್ತು ನಗರ ಪ್ರದೇಶದ ನೀರು ಪೂರೈಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Amazon.in ನಲ್ಲಿ ವ್ಯಾಲೆಂಟೈನ್ಸ್ ಡೇ ಸ್ಟೋರ್‌ನೊಂದಿಗೆ ಪ್ರೀತಿಯನ್ನು ಸಂಭ್ರಮಿಸಿ
ಈ ಎರಡೂ ಯೋಜನೆಗಳು 2027ರ ವೇಳೆಗೆ ಭಾರತದಲ್ಲಿ ಅಮೆಜಾನ್ ನ 'ವಾಟರ್ ಪಾಸಿಟಿವ್' ಯೋಜನೆಯ ಭಾಗವಾಗಿ ಮೂಡಿಬಂದಿವೆ. ವಾಟರ್ ಪಾಸಿಟಿವ್ ಯೋಜನೆ ಯಲ್ಲಿ ಕಂಪನಿಯು ತನ್ನ ನೇರ ಕಾರ್ಯಾಚರಣೆಗಳಿಗೆ ಬಳಸುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಸಮುದಾಯಕ್ಕೆ ಮರಳಿ ನೀಡುವ ಉದ್ದೇಶವನ್ನು ಹೊಂದಿದೆ.
ಈ ಕುರಿತು ಆರ್ಬಿಯಾ ನೆಟಾಫಿಮ್ ನ ಇನ್ನೋವೇಶನ್ ಮತ್ತು ಕ್ಲೈಮೇಟ್ ಸೊಲ್ಯೂಷನ್ಸ್ ವಿಭಾಗದ ನಿರ್ದೇಶಕ ಮ್ಯಾಕ್ಸ್ ಮೊಲ್ಡಾವ್ಸ್ಕಿ ಅವರು ಮಾತನಾಡಿ, "ಈ ಪ್ರಮುಖ ಯೋಜನೆಯಲ್ಲಿ ಅಮೆಜಾನ್ ಜೊತೆ ಸಹಯೋಗ ಮಾಡಿಕೊಳ್ಳಲು ನಮಗೆ ಹೆಮ್ಮೆಯಿದೆ. ನಿಖರ ನೀರಾವರಿಯು ರೈತರು ಮತ್ತು ಸಮಾಜದ ಮೇಲೆ ಹೇಗೆ ಪ್ರಭಾವ ಬೀರಬಲ್ಲದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ರೈತರು ಹನಿ ನೀರಾವರಿಗೆ ಬದಲಾಗಲು ಸಹಾಯ ಮಾಡುವ ಮೂಲಕ ನಾವು ನೀರಿನ ಬಳಕೆಯನ್ನು ಸುಧಾರಿಸುತ್ತಿದ್ದೇವೆ, ಜೀವನೋಪಾಯ ಕ್ರಮವನ್ನು ಬಲಪಡಿಸುತ್ತಿದ್ದೇವೆ ಮತ್ತು ಜಲ ಸಂರಕ್ಷಣೆಯ ಪ್ರಯತ್ನಗಳಿಗೆ ಕೊಡುಗೆ ನೀಡುತ್ತಿದ್ದೇವೆ. ಈ ಯೋಜನೆಯು ಜಲ ಸಂರಕ್ಷಣೆ ಮತ್ತು ಹವಾಮಾನಕ್ಕೆ ಪೂರಕವಾದ ಕೃಷಿಯನ್ನು ಸಾಧ್ಯಗೊಳಿಸುವ ನೆಟಾ ಫಿಮ್ ಸಂಸ್ಥೆಯ ಬದ್ಧತೆಯನ್ನು ಸಾರುತ್ತದೆ" ಎಂದು ತಿಳಿಸಿದರು.
ಬೆಂಗಳೂರು
ಬೆಂಗಳೂರಿನ ಪಶ್ಚಿಮ ಕೃಷಿ ವಲಯದ ಸುಮಾರು 80 ಹೆಕ್ಟೇರ್ ಪ್ರದೇಶದಲ್ಲಿರುವ ಸೋರೆ ಕಾಯಿ ಮತ್ತು ಟೊಮೆಟೋ ಫಾರ್ಮ್ ಗಳಲ್ಲಿ ಸಾಂಪ್ರದಾಯಿಕ ಪ್ರವಾಹ ನೀರಾವರಿಯ ಬದಲಿಗೆ ಹನಿ ನೀರಾವರಿಯನ್ನು ಅಳವಡಿಸಲಾಗುತ್ತಿದೆ. ಇದರಿಂದ ವಾರ್ಷಿಕವಾಗಿ 175 ಮಿಲಿಯನ್ ಲೀಟರ್ ಗೂ ಹೆಚ್ಚು ನೀರನ್ನು ಉಳಿಸುವ ನಿರೀಕ್ಷೆಯಿದೆ. ಈ ಪ್ರಯತ್ನವು ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಇರುವ ತೀವ್ರ ಜಲಕ್ಷಾಮಕ್ಕೆ ಪೂರಕವಾಗಿ ನಡೆಯಲಿದ್ದು, ಬೆಂಗಳೂರಿನ ಪಶ್ಚಿಮ ಕೃಷಿ ಪಟ್ಟಿಯ ಸುಮಾರು 70 ಸ್ವತಂತ್ರ ರೈತರಿಗೆ ಬೆಂಬಲ ನೀಡಲಿದೆ. ಈ ಯೋಜನೆಯಲ್ಲಿ ಭಾಗವಹಿಸುವ ರೈತರು ಪ್ರಸ್ತುತ ಸ್ಥಳೀಯ ಜಲಮೂಲಗಳನ್ನು ಅವಲಂಬಿಸಿದ್ದು, ಇವು ಬೆಂಗಳೂರಿನ ಪಶ್ಚಿಮ ಮತ್ತು ಉತ್ತರ ಭಾಗಗಳಿಗೆ ನೀರು ಪೂರೈಸುವ ಟಿ.ಜಿ. ಹಳ್ಳಿ (ತಿಪ್ಪಗೊಂಡನಹಳ್ಳಿ) ಜಲಾಶಯಕ್ಕೆ ಸಂಪರ್ಕ ಹೊಂದಿವೆ.
ಹೈದರಾಬಾದ್
ಹೈದರಾಬಾದ್ ನ ಉತ್ತರ ಕೃಷಿ ವಲಯದ ಸುಮಾರು 40 ಹೆಕ್ಟೇರ್ ಮೆಕ್ಕೆಜೋಳ ಮತ್ತು ತರಕಾರಿ ಫಾರ್ಮ್ ಗಳಲ್ಲಿ ಹನಿ ನೀರಾವರಿ ಅಳವಡಿಸುವ ಮೂಲಕ ವರ್ಷಕ್ಕೆ 150 ಮಿಲಿಯನ್ ಲೀಟರ್ ನೀರನ್ನು ಉಳಿಸುವ ನಿರೀಕ್ಷೆಯಿದೆ. ಇದು ನೀರಿನ ಸಂಪನ್ಮೂಲಗಳ ಕೊರತೆ ಎದುರಿಸುತ್ತಿರುವ ಹೈದರಾಬಾದ್ ನ ಉತ್ತರದ ಕೃಷಿ ಪ್ರದೇಶದ ಸುಮಾರು 40 ಸ್ವತಂತ್ರ ರೈತರಿಗೆ ನೆರವಾಗಲಿದೆ. ಈ ಭಾಗದ ಫಾರ್ಮ್‌ಗಳು ಕೊಂಡಪೋಚಮ್ಮ ಸಾಗರ್ ಜಲಾಶಯಕ್ಕೆ ಸಂಪರ್ಕ ಹೊಂದಿರುವ ಮೂಲಗಳಿಂದ ನೀರನ್ನು ಪಡೆಯುತ್ತವೆ. ಇದು ಕಾಳೇಶ್ವರಂ ಎತ್ತಿನ ನೀರಾವರಿ ಯೋಜನೆಯ ಭಾಗವಾಗಿದ್ದು, ನಗರದ ಭವಿಷ್ಯದ ಜಲ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಈ ಕುರಿತು ಅಮೆಜಾನ್ ಇಂಡಿಯಾ ಮತ್ತು ಆಸ್ಟ್ರೇಲಿಯಾದ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಅಭಿನವ್ ಸಿಂಗ್ ಅವರು ಮಾತನಾಡಿ, "ಈ ಯೋಜನೆಗಳು ಪ್ರಾಯೋಗಿಕ ಪರಿಹಾರಗಳ ಮೇಲೆ ಕೇಂದ್ರೀಕೃತವಾಗಿದ್ದು, ಪರಿಣಾಮಕಾರಿ ಬದಲಾವಣೆಯನ್ನು ಉಂಟು ಮಾಡುತ್ತದೆ. ಇದು ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಜಲ ಸಂರಕ್ಷಣೆಗೆ ಕೊಡುಗೆ ನೀಡುವ ಜೊತೆಗೆ, ರೈತರು ತಮ್ಮ ನೀರಾವರಿ ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಭಾರತದಲ್ಲಿ ಜವಾಬ್ದಾರಿಯುತ ನೀರಿನ ಬಳಕೆಯನ್ನು ಬೆಂಬಲಿ ಸುವ ಪ್ರಯತ್ನದ ಭಾಗವಾಗಿ ಇಂತಹ ಸಹಯೋಗ ನಡೆಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.
ಅಮೆಜಾನ್ ವಾಟರ್ ಪಾಸಿಟಿವ್ 2027
2027ರ ವೇಳೆಗೆ ಭಾರತದಲ್ಲಿ ತನ್ನ ನೇರ ಕಾರ್ಯಾಚರಣೆಗಳಿಗೆ ಬಳಸುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಸಮಾಜಕ್ಕೆ ಮರಳಿ ನೀಡುವ ಗುರಿಯನ್ನು ಅಮೆಜಾನ್ 2024ರಲ್ಲಿ ಘೋಷಿಸಿತ್ತು. ತನ್ನ ಕೇಂದ್ರಗಳಲ್ಲಿ ಕಳೆದ ಹಲವು ವರ್ಷಗಳಿಂದ ಕೈಗೊಂಡ ನೀರಿನ ದಕ್ಷತೆಯ ಸುಧಾರಣೆಗಳು ಮತ್ತು ನೀರಿನ ಅಭಾವವಿರುವ ಸಮುದಾಯಗಳಲ್ಲಿ ನಡೆಸಿದ ಸುಸ್ಥಿರ ಹೂಡಿಕೆಗಳ ಆಧಾರದ ಮೇಲೆ ಈ ಘೋಷಣೆ ಮಾಡಲಾಗಿತ್ತು. ಭಾರತ ದಾದ್ಯಂತ ಜಲ ಮರುಪೂರಣ ಪ್ರಯತ್ನಗಳಿಗಾಗಿ ಕಂಪನಿಯು ₹42 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದ್ದು, ಈ ಹೂಡಿಕೆಗಳಿಂದ ವಾರ್ಷಿಕವಾಗಿ 3 ಬಿಲಿಯನ್ ಲೀಟರ್ ಗಿಂತಲೂ ಹೆಚ್ಚು ನೀರನ್ನು ಪುನಃಸ್ಥಾಪಿಸುವ ನಿರೀಕ್ಷೆಯಿದೆ.
ಕಂಪನಿಯ ಹೂಡಿಕೆಗಳು ಮಹಾರಾಷ್ಟ್ರದ ವೈತರ್ಣ ಹೈಡ್ರೋಬೇಸಿನ್ ನಲ್ಲಿ ₹10 ಕೋಟಿ ವೆಚ್ಚದ ಯೋಜನೆಯನ್ನು ಒಳಗೊಂಡಿದ್ದು, ಇದು ವಾರ್ಷಿಕವಾಗಿ 1.3 ಬಿಲಿಯನ್ ಲೀಟರ್ ನೀರನ್ನು ಮರುಪೂರಣ ಮಾಡುವ ನಿರೀಕ್ಷೆಯಿದೆ ಮತ್ತು 700ಕ್ಕೂ ಹೆಚ್ಚು ರೈತ ಕುಟುಂಬ ಗಳಿಗೆ ಪ್ರಯೋಜನಕಾರಿಯಾಗಲಿದೆ.
ಯಮರೆ ಮತ್ತು ಸಾಯಿ ರೆಡ್ಡಿ ಕೆರೆಗಳನ್ನು ಪುನಶ್ಚೇತನಗೊಳಿಸಲು ಸೇಟ್ರೀಸ್ ಸಂಸ್ಥೆ ಯೊಂದಿಗೆ ಸಹಯೋಗ ಮಾಡಿಕೊಂಡಿದ್ದು, ಇವುಗಳಿಂದ ವಾರ್ಷಿಕವಾಗಿ ಒಟ್ಟಾಗಿ 570 ಮಿಲಿಯನ್ ಲೀಟರ್ ಗಿಂತಲೂ ಹೆಚ್ಚು ನೀರು ಮರುಪೂರಣವಾಗುವ ನಿರೀಕ್ಷೆಯಿದೆ; ಮತ್ತು ನವದೆಹಲಿಯಲ್ಲಿ ಯಮುನಾ ನದಿಯ ಜಲಾನಯನ ಪ್ರದೇಶದ ಯೋಜನೆಯು ವಾರ್ಷಿಕವಾಗಿ ಮತ್ತೊಂದು 400 ಅಮೆಜಾನ್ ವೆಬ್ ಸರ್ವಿಸಸ್ (ಎಡಬ್ಲ್ಯೂಎಸ್) ಮೂಲಕ, ಅಮೆಜಾನ್ ಹೈದರಾಬಾದ್ ಸುತ್ತಮುತ್ತ ವಾರ್ಷಿಕ 640 ಮಿಲಿಯನ್ ಲೀಟರ್ ನೀರು ಪೂರೈಸಲು ವಾಟರ್ ಏಯ್ಡ್ ನೊಂದಿಗೆ ಜಲ ಮರುಪೂರಣ ಕಾರ್ಯವನ್ನು ನಡೆಸು ತ್ತಿದೆ. ಮುಂಬೈ ಮತ್ತು ಹೈದರಾಬಾದ್ ಸುತ್ತಮುತ್ತಲಿನ ಸಮುದಾಯಗಳಿಗೆ ವಾರ್ಷಿಕ 500 ಮಿಲಿಯನ್ ಲೀಟರ್ ಗಿಂತಲೂ ಹೆಚ್ಚು ನೀರನ್ನು ತಲುಪಿಸಲು ವಾಟರ್.ಆರ್ಗ್ ನೊಂದಿಗೆ ಸಹಯೋಗ ಹೊಂದಿದೆ ಮತ್ತು ಹೈದರಾಬಾದ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ (ಎಲ್ಲಿ ಎಡಬ್ಲ್ಯೂಎಸ್ ಕಾರ್ಯಾಚರಣೆ ಇದೆಯೋ ಅಲ್ಲಿ) ರೈತರಿಗೆ ಹೆಚ್ಚು ಸ್ಥಿರವಾದ ನೀರು ಪೂರೈಕೆಯನ್ನು ಒದಗಿಸಲು ಸರ್ಚ್ ಸಂಸ್ಥೆಯೊಂದಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ.