ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇನ್‌ಸ್ಟಾಮಾರ್ಟ್‌ನಲ್ಲಿ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಬರೋಬ್ಬರಿ 17.78 ಲಕ್ಷ ರೂ. ಖರ್ಚು: ಇನ್‌ಸ್ಟಾಮಾರ್ಟ್‌ ಮಾರ್ಷಿಕ ವರದಿ ಬಿಡುಗಡೆ

ಒಬ್ಬನೇ ವ್ಯಕ್ತಿ ಐಫೋನ್‌ ಸೇರಿದಂತೆ ಇತರೆ ದೈನಂದಿನ ಪದಾರ್ಥಗಳಿಗಾಗಿ ಒಂದು ವರ್ಷದಲ್ಲಿ ಬರೋ ಬ್ಬರಿ 17.78 ಲಕ್ಷ ರೂ.ಗಳನ್ನು ವ್ಯಹಿಸಿದ್ದಾರೆ. ಇನ್ನು, ಡೆಲಿವರಿ ಬಾಯ್‌ ಗಳಿಗೆ ಟಿಪ್‌ ನೀಡುವ ವಿಷಯ ದಲ್ಲೂ ಬೆಂಗಳೂರಿಗರು ದಾರಳರು ಎಂಬುದನ್ನು ಸಾಬೀತು ಮಾಡಿದ್ದು, ಒಮ್ಮೆಲೆ ಬರೋಬ್ಬರಿ 68,600 ರೂ.ಗಳನ್ನು ಟಿಪ್‌ ರೂಪದಲ್ಲಿ ನೀಡಿದ್ದಾರೆ, ಇದು ಚೆನ್ನೈನಲ್ಲಿ ಒಬ್ಬ ವ್ಯಕ್ತಿ 59,505 ಟಿಪ್ ನೀಡಿದ ಸರದಿಯನ್ನು ಮೀರಿಸಿದೆ.

ಬೆಂಗಳೂರು: ಕ್ವಿಕ್‌ ಕಾಮರ್ಸ್‌ ಇನ್‌ಸ್ಟಾಮಾರ್ಟ್‌ “ಹೌ ಇಂಡಿಯಾ ಇನ್‌ಸ್ಟಾ ಮಾರ್ಟೆಡ್‌ 2025” ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, ಈ ವರದಿ ಪ್ರಕಾರ, ಒಬ್ಬನೇ ವ್ಯಕ್ತಿ ಬರೋಬ್ಬರಿ ವರ್ಷದಲಿ 17.78 ಲಕ್ಷ ರೂ.ಗಳನ್ನು ಐಫೋನ್‌ ಸೇರಿದಂತೆ ಇತರೆ ದೈನಂದಿನ ಬಳಕೆಗೆ ಇನ್‌ ಸ್ಟಾಮಾರ್ಟ್‌ನಲ್ಲಿ ವ್ಯಹಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿದ ಸ್ವಿಗ್ಗಿ ಮುಖ್ಯ ವ್ಯವಹಾರ ಅಧಿಕಾರಿ ಹರಿ ಕುಮಾರ್ ಗೋಪಿನಾಥನ್, ಬ್ಯುಸಿ ಜೀವನ ನಡೆಸುತ್ತಿರುವ ಬೆಂಗಳೂರಿಗರ ದೈನಂದಿನ ಅಗತ್ಯತೆಗಳನ್ನು ಪೂರೈಸಲು ಕ್ವಿಕ್‌ ಕಾರ್ಮ್‌ ಕಾಮದೇನು ಆಗಿದೆ. ಇನ್‌ಸ್ಟಾಮಾರ್ಟ್‌ ಬಳಕೆ ದಾರರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಈ ವರ್ಷದಲ್ಲಿ ಯಾವೆಲ್ಲಾ ವಸ್ತುಗಳನ್ನು ಜನ ಹೆಚ್ಚು ಖರೀದಿಸಿದ್ದಾರೆ, ಯಾರು ಹೆಚ್ಚು ವ್ಯಹಿಸಿದ್ದಾರೆ? ಯಾವ ಪದಾರ್ಥಗಳಿಗೆ ಹೆಚ್ಚು ಬೇಡಿಕೆ ಇತ್ತು ಎಂಬ ವರದಿಯನ್ನು ಬಿಡುಗಡೆ ಮಾಡಿದ್ದೇವೆ.

ಈ ವರದಿಯ ಪ್ರಕಾರ, ಒಬ್ಬನೇ ವ್ಯಕ್ತಿ ಐಫೋನ್‌ ಸೇರಿದಂತೆ ಇತರೆ ದೈನಂದಿನ ಪದಾರ್ಥಗಳಿಗಾಗಿ ಒಂದು ವರ್ಷದಲ್ಲಿ ಬರೋಬ್ಬರಿ 17.78 ಲಕ್ಷ ರೂ.ಗಳನ್ನು ವ್ಯಹಿಸಿದ್ದಾರೆ. ಇನ್ನು, ಡೆಲಿವರಿ ಬಾಯ್‌ ಗಳಿಗೆ ಟಿಪ್‌ ನೀಡುವ ವಿಷಯದಲ್ಲೂ ಬೆಂಗಳೂರಿಗರು ದಾರಳರು ಎಂಬುದನ್ನು ಸಾಬೀತು ಮಾಡಿದ್ದು, ಒಮ್ಮೆಲೆ ಬರೋಬ್ಬರಿ 68,600 ರೂ.ಗಳನ್ನು ಟಿಪ್‌ ರೂಪದಲ್ಲಿ ನೀಡಿದ್ದಾರೆ, ಇದು ಚೆನ್ನೈ ನಲ್ಲಿ ಒಬ್ಬ ವ್ಯಕ್ತಿ 59,505 ಟಿಪ್ ನೀಡಿದ ಸರದಿಯನ್ನು ಮೀರಿಸಿದೆ.

ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಇನ್ನು, ಇತರೆ ಆಹಾರ ಗಳಿಗೆ ಹೋಲಿಸಿದರೆ, ಕೊರಿಯನ್‌ ಆಹಾರವನ್ನೇ ಜನ ಹೆಚ್ಚು ಆರ್ಡರ್‌ ಮಾಡಿಕೊಂಡಿದ್ದಾರೆ, ಬೆಂಗಳೂರಿಗರು ನೂಡಲ್ಸ್‌ಗೆ 4.36 ಲಕ್ಷ ರೂ. ಖರ್ಚು ಮಾಡಿದ್ದಾರೆ, ಎಲೆಕ್ಟ್ರಾ ನಿಕ್ಸ್ ಮತ್ತು ಆಟಿಕೆಗಳು ಕ್ರಮವಾಗಿ 59 ಪಟ್ಟು ಮತ್ತು 23 ಪಟ್ಟು ಹೆಚ್ಚು ಆರ್ಡರ್‌ ಆಗಿವೆ. ಆದರೆ ಪ್ರೇಮಿಗಳ ದಿನದಂದು ಫೆರೆರೊ ರೋಚರ್ ಚಾಕೊಲೇಟ್‌ಗಳ ಇದ್ದ ಬೇಡಿಕೆಯ ಪೈಕಿ ಈ ವರ್ಷ 25,000 ರೂ ಕುಸಿತ ಕಂಡಿದೆ.

ಮತ್ತೊಬ್ಬ ಗ್ರಾಹಕ, 1.97 ಲಕ್ಷ ರೂ. ಮೌಲ್ಯದ 1 ಕೆಜಿ ಬೆಳ್ಳಿಯನ್ನು ಇನ್‌ಸ್ಟಾಮಾರ್ಟ್‌ನಲ್ಲಿ ಆರ್ಡರ್‌ ಮಾಡಿದ್ದಾರೆ. ಇನ್ನು, ದೇಶದಲ್ಲೇ ಅತಿಯಾಗಿ ಆರ್ಡರ್‌ ಆಗುವ ವಸ್ತುಗಳ ಪೈಕಿ ಹಾಲು ಮೊದಲ ಸ್ಥಾನದಲ್ಲಿದ್ದು, ಪ್ರತಿ ಸೆಕೆಂಡಿಗೆ 4 ಪ್ಯಾಕೆಟ್ ಹಾಲು ಆರ್ಡರ್ ಆಗುತ್ತಿದೆ. ಇದಷ್ಟೆ ಅಲ್ಲದೆ, ಮನೆಗೆ ಬೇಕಾದ ದಿನಸಿಗಳ ಬೇಡಿಕೆಯೂ ಹೆಚ್ಚು ಮುಂಚೂಣಿಯಲ್ಲಿದ್ದು, ರಾತ್ರಿ ಸಮಯದಲ್ಲಿ ಖಾರ, ಮಿಕ್ಚರ್‌ನಂತಹ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿವೆ. ಒಟ್ಟಾರೆ, ಇನ್‌ಸ್ಟಾಮಾರ್ಟ್‌ ಕೆಲವೇ ನಿಮಿಷ ಗಳಲ್ಲಿ ಜನರ ಅಗತ್ಯತೆ ಪೂರೈಕೆಗೆ ನಿಂತಿದೆ.