ಸ್ವಯಂ ತಪಾಸಣೆಯ ನೆನಪಿಗಾಗಿ ಸಿಹಿ ಕ್ಷಣ ಮಹಿಳೆಯರ ಆರೋಗ್ಯ ರಕ್ಷಣೆಗೆ ಹೊಸ ಹೆಜ್ಜೆ
ಬೆಂಗಳೂರು: ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಅಪೋಲೊ ಕ್ಯಾನ್ಸರ್ ಸೆಂಟರ್‌ಗಳು (ಎಸಿಸಿ) ಮಹಿಳೆಯರ ಆರೋಗ್ಯದತ್ತ ಸಿಹಿಯಾದ ಸಂದೇಶವನ್ನು ನೀಡುವ ವಿಶಿಷ್ಟ ಅಭಿಯಾನ ಪ್ರಾರಂಭಿಸಿವೆ. ‘ಚೆಕ್-ಒಲೇಟ್’ (‘Check-Olate’) ಎಂಬ ಹೆಸರು ಪಡೆದ ಈ ಅಭಿಯಾನದ ಮೂಲಕ ಸ್ತನ ಕ್ಯಾನ್ಸರ್ ಸ್ವಯಂ ತಪಾಸಣೆಯ ಅಗತ್ಯತೆಯನ್ನು ನೆನಪಿಸುವ ಪ್ರಯತ್ನ ಮಾಡಲಾಗಿದೆ.
ಗ್ಲೋಬೋಕ್ಯಾನ್ (GLOBOCAN) ವರದಿಯ ಪ್ರಕಾರ, ಭಾರತದಲ್ಲಿ ಸ್ತನ ಕ್ಯಾನ್ಸರ್ ಮಹಿಳೆಯ ರಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದ್ದು, ಎಲ್ಲಾ ಹೊಸ ಕ್ಯಾನ್ಸರ್ ಪ್ರಕರಣಗಳ ೧೩.೫% ಮತ್ತು ಒಟ್ಟು ಕ್ಯಾನ್ಸರ್ ಮರಣದ ೧೦.೬% ಈ ಕಾಯಿಲೆಯಿಂದ ಆಗುತ್ತಿವೆ. ಆದರೆ, ತಪಾಸಣೆ ಪ್ರಮಾಣ ಕೇವಲ ೧.೬% ಮಹಿಳೆಯರಷ್ಟೇ ಎನ್ನುವುದು ಆತಂಕಕಾರಿ ಅಂಶವಾಗಿದೆ (NCBI)
ಅಪೋಲೊ ಆಸ್ಪತ್ರೆಗಳ ಗುಂಪು ಆಂಕಾಲಜಿ ಮತ್ತು ಇಂಟರ್‌ನ್ಯಾಷನಲ್ ವಿಭಾಗದ ಅಧ್ಯಕ್ಷ ಶ್ರೀ ದಿನೇಶ್ ಮಧವನ್ ಅವರು ಮಾತನಾಡಿ, ಮಹಿಳೆಯರು ಆರೋಗ್ಯವಾಗಿದ್ದರೆ ದೇಶ ಬಲವಾ ಗುತ್ತದೆ. ಮಹಿಳೆಯರ ಆರೋಗ್ಯ ರಾಷ್ಟ್ರದ ಶಕ್ತಿ ಮತ್ತು ಸಮೃದ್ಧಿಯ ಮೂಲ. ಸ್ತ್ರೀ ಆರೋಗ್ಯದ ಅಂತರವನ್ನು ಕಡಿಮೆ ಮಾಡಿದರೆ ೨೦೪೦ರೊಳಗೆ ವಿಶ್ವ ಆರ್ಥಿಕತೆಯಲ್ಲಿ ವರ್ಷಕ್ಕೆ ೧ ಟ್ರಿಲಿಯನ್ ಡಾಲರ್ ಹೆಚ್ಚುವರಿ ಲಾಭ ಉಂಟಾಗಬಹುದು. ‘ಚೆಕ್-ಒಲೇಟ್’ ಅಭಿಯಾನವು ಮಹಿಳೆಯರಲ್ಲಿ ಸ್ವಯಂ ತಪಾಸಣೆಯ ಪ್ರೇರಣೆಯನ್ನು ನೀಡುವ ಉದ್ದೇಶ ಹೊಂದಿದೆ. ಸ್ವಯಂ ಆರೈಕೆ ಒಂದು ಐಶಾರಾಮಿ ವಿಷಯವಲ್ಲ, ಅದು ಶಕ್ತಿ.”
ಇದನ್ನೂ ಓದಿ: Bangalore News: ಚೀನಾ ಫ್ರೆಂಡ್ ಶಿಪ್ ಅಸೋಸಿಯೇಷನ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಭಾಗಿ
ನಟಿ ಪೂಜಾ ಗಾಂಧಿ ಅವರು ಮಾತನಾಡಿ, ಎಲ್ಲರಿಗೂ ಚಾಕೊಲೇಟ್ ಇಷ್ಟ. ಅದು ಸಂತೋಷ ಕೊಡುತ್ತದೆ. ‘ಚೆಕ್-ಒಲೇಟ್’ ಇದರ ಮೂಲಕ ಚಾಕೊಲೇಟ್ ಒಂದು ಸಿಹಿ ನೆನಪಾಗಿ ಮಹಿಳೆಯರಿಗೆ ಸ್ವಯಂ ಆರೈಕೆಯ ಮಹತ್ವವನ್ನು ನೆನಪಿಸುತ್ತದೆ. ಇದು ಅರಿವನ್ನು ಕ್ರಿಯೆಯಾಗಿ ಪರಿವರ್ತಿಸುವ ಕ್ರಿಯಾತ್ಮಕ ಹಾಗೂ ಮನಮುಟ್ಟುವ ವಿಧಾನ.”
ಅಪೋಲೊ ಕ್ಯಾನ್ಸರ್ ಸೆಂಟರ್ ಬೆಂಗಳೂರು ಬ್ರೆಸ್ಟ್ ಆಂಕಾಲಜಿ ವಿಭಾಗದ ಡಾ. ಜಯಂತಿ ತುಮ್ಸಿ ಮಾತನಾಡಿ, ಸ್ತನ ಕ್ಯಾನ್ಸರ್‌ನ ತ್ವರಿತ ಪತ್ತೆ ಜೀವ ಉಳಿಸುತ್ತದೆ. ತಿಂಗಳಿಗೆ ಕೆಲವೇ ನಿಮಿಷ ತೆಗೆದು ಸ್ವಯಂ ತಪಾಸಣೆ ಮಾಡಿದರೆ ಅದು ಜೀವದಾನದ ಸಮಾನ. ‘ಚೆಕ್-ಒಲೇಟ್’ ಒಂದು ಸಿಹಿ ತಿನಿಸಿನ ಮುಖಾಂತರ ಈ ಸಂದೇಶವನ್ನು ನೆನಪಿಸುತ್ತದೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಮತ್ತು ಫ್ಲಾವನಾಯ್ಡ್‌ಗಳು ಹೃದಯ, ಚರ್ಮ ಮತ್ತು ಮನೋಸ್ಥಿತಿ ಸುಧಾರಿಸಲು ಸಹಕಾರಿ.”
ಪ್ರತಿ ‘ಚೆಕ್-ಒಲೇಟ್’ ಬಾರ್‌ನಲ್ಲೂ QR ಕೋಡ್ ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿ ದಾಗ ಸ್ತನ ಸ್ವಯಂ ತಪಾಸಣೆ ಮಾಡುವ ವಿಧಾನವನ್ನು ಹಂತ ಹಂತವಾಗಿ ತೋರಿಸುವ ಆನಿಮೇ ಟೆಡ್ ವಿಡಿಯೋ ತೆರೆದುಕೊಳ್ಳುತ್ತದೆ.ಈ ಅಭಿಯಾನವು ಕೇವಲ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯ ಕ್ರಮವಲ್ಲ ? ಇದು ಮಹಿಳೆಯರಲ್ಲಿ ಸ್ವಯಂ ಆರೈಕೆಯ ಅಭ್ಯಾಸವನ್ನು ರೂಢಿಸುವ ಚಳವಳಿ ಯಾಗಿದೆ ಎಂದು ಹೇಳಿದರು.
'ಚೆಕ್-ಓಲೇಟ್' ಕೇವಲ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳ ಉಪಕ್ರಮಕ್ಕಿಂತ ಹೆಚ್ಚಿನದಾಗಿದೆ; ಇದು ಸರಳ, ಅರ್ಥಪೂರ್ಣ ಆಚರಣೆಗಳ ಮೂಲಕ ಮಹಿಳೆಯರು ತಮ್ಮ ಯೋಗಕ್ಷೇಮದ ಮೇಲೆ ನಿಯಂತ್ರಣವನ್ನು ಮರಳಿ ಪಡೆಯಲು ಸಹಾಯ ಮಾಡುವ ಒಂದು ಆಂದೋಲನವಾಗಿದೆ. ಭೋಗದ ಕ್ಷಣವನ್ನು ಸ್ವ-ಆರೈಕೆಗಾಗಿ ಪ್ರಚೋದನೆಯಾಗಿ ಪರಿವರ್ತಿಸುವ ಮೂಲಕ, ಅಪೊಲೊ ಕ್ಯಾನ್ಸರ್ ಸೆಂಟರ್‌ಗಳು ಆರೋಗ್ಯ ಸಂವಹನವು ಸಹಾನುಭೂತಿ, ಸೃಜನಶೀಲತೆ ಮತ್ತು ಉದ್ದೇಶ ದೊಂದಿಗೆ ಹೇಗೆ ಸಂಪರ್ಕ ಸಾಧಿಸಬಹುದು ಎಂಬುದನ್ನು ಮರು ವ್ಯಾಖ್ಯಾನಿಸುತ್ತದೆ.