ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಕಿ ಬಿಲ್‌ ಪಾವತಿಸಿ ಸಿಎಂಗೆ ಮತ್ತೆ ಮನವಿ

ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕಾಮಗಾರಿಗಳ ಬಿಲ್‌ಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಗುತ್ತಿಗೆದಾರರು ಎದುರಿಸುತ್ತಿರುವ ವಿವಿಧ ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂದಿದ್ದಾರೆ. ಇದಕ್ಕೆ ಸೂಕ್ತ ಕ್ರಮ ವಹಿಸುವ ಭರವಸೆ ಯನ್ನು ಡಿಕೆಶಿ ನೀಡಿದ್ದಾರೆ. ಕಳೆದ ಮಾರ್ಚ್ 6ರಂದು ಫ್ರೀಡಂ ಪಾರ್ಕ್‌ನಲ್ಲಿ ನಡೆದ ರಾಜ್ಯಮಟ್ಟದ ಬೃಹತ್ ಪ್ರತಿಭಟನೆಯ ವೇಳೆ ಸರಕಾರ ಸಮಸ್ಯೆ ಗಳನ್ನು ಬಗೆಹರಿಸುವ ಭರವಸೆ ನೀಡಿತ್ತು

37 ಸಾವಿರ ಕೋಟಿ ರು. ಬಿಡುಗಡೆಗೆ ಗುತ್ತಿಗೆದಾರರ ಸಂಘ ಮನವಿ

ಮಾರ್ಚ್ 6ರ ಪ್ರತಿಭಟನೆಯ ಹೊರತಾಗಿಯೂ ಈಡೇರದ ಸಮಸ್ಯೆ

ಬೆಂಗಳೂರು: ರಾಜ್ಯದಲ್ಲಿ ಪದೇಪದೆ ಮುನ್ನೆಲೆಗೆ ಬರುತ್ತಿರುವ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದೆ ಮತ್ತೊಮ್ಮೆ ಬಂದಿದ್ದು, ಶೀಘ್ರವೇ ಬಾಕಿ ಮೊತ್ತ ಪಾವತಿಸುವಂತೆ ‘ಮನವಿ’ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಗುತ್ತಿಗೆ ದಾರರ ಸಂಘದ ಪದಾಧಿಕಾರಿಗಳು ಡಿಕೆಶಿ ಅವರನ್ನು ಭೇಟಿಯಾಗಿ, ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯದ ವಿವಿಧ ಇಲಾಖೆಯಲ್ಲಿ ಬಾಕಿಯಿರುವ 37 ಸಾವಿರ ಕೋಟಿ ರು.ಗಳ ಬಿಲ್ ಅನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದೆ.

ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕಾಮಗಾರಿಗಳ ಬಿಲ್‌ಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಗುತ್ತಿಗೆದಾರರು ಎದುರಿಸುತ್ತಿರುವ ವಿವಿಧ ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸ ಬೇಕು ಎಂದಿದ್ದಾರೆ. ಇದಕ್ಕೆ ಸೂಕ್ತ ಕ್ರಮ ವಹಿಸುವ ಭರವಸೆ ಯನ್ನು ಡಿಕೆಶಿ ನೀಡಿದ್ದಾರೆ. ಕಳೆದ ಮಾರ್ಚ್6ರಂದು ಫ್ರೀಡಂ ಪಾರ್ಕ್‌ನಲ್ಲಿ ನಡೆದ ರಾಜ್ಯಮಟ್ಟದ ಬೃಹತ್ ಪ್ರತಿಭಟನೆಯ ವೇಳೆ ಸರಕಾರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿತ್ತು. ಆದರೆ, ಸಮಸ್ಯೆ ಬಗೆಹರಿಸಲು ಯಾವ ರೀತಿಯ ಕ್ರಮವಹಿಸಲಾಗಿದೆ ಎನ್ನುವ ಬಗ್ಗೆ ಈವರೆಗೆ ಸ್ಪಷ್ಟನೆ ನೀಡಿಲ್ಲ. ಆದ್ದರಿಂದ ಇದೀಗ ಹೊಸ ಮುಖ್ಯಮಂತ್ರಿಗಳ ಮುಂದೆ ನಮ್ಮ ಮನವಿಯನ್ನು ಮಂಡಿಸಲಾಗುತ್ತಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ: Bangalore News: ಮತ್ತೊಮ್ಮೆ ಎಲ್‌ಪಿಜಿ ಬೆಲೆ ಏರಿಕೆ: ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ: ಡಾ.ಆನಂದ ಕುಮಾರ್

2021-22ರಿಂದ 2023-24ರವರೆಗೆ ವಿವಿಧ ಇಲಾಖೆಗಳಲ್ಲಿ ಸುಮಾರು 37,370.76 ಕೋಟಿ ಮೊತ್ತದ ಕಾಮಗಾರಿ ಬಿಲ್‌ಗಳು ಬಾಕಿ ಉಳಿದಿವೆ. ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ನಗರಾಭಿವೃದ್ಧಿ, ವಸತಿ, ಕಾರ್ಮಿಕ ಹಾಗೂ ಜಿಬಿಎ ಸೇರಿದಂತೆ ಹಲವು ಇಲಾಖೆಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು.

ಇದರೊಂದಿಗೆ 2017-18 ರಿಂದ 2019-20ರ ಅವಧಿಯ ಕಾಮಗಾರಿಗಳಿಗೆ ಸಂಬಂಧಿಸಿದ ಜಿಎಸ್‌ಟಿ ವ್ಯತ್ಯಾಸದ ಶೇ.8ರ ಮೊತ್ತ ವನ್ನು ಏಳು ವರ್ಷಗಳಿಂದ ಪಾವತಿಸದಿರುವುದು, ಇ- ಸಂಗ್ರಹಣಾ ವೇದಿಕೆಯ ಒಪ್ಪಂದ ನಿರ್ವಹಣಾ ಮಾಡ್ಯೂಲ್ ಕಡ್ಡಾಯಗೊಳಿಸಿರುವ ಆದೇಶವನ್ನು ರದ್ದುಪಡಿಸು ವುದು, ಲೈಸನ್ಸ್ ನವೀಕರಣದ ವೇಳೆ ವರ್ಕ್ ಡನ್ ಮತ್ತು ಟರ್ನ್ ಒವರ್ ಮಾನದಂಡವನ್ನು 10 ವರ್ಷಗಳಿಗೆ ವಿಸ್ತರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘ ಮುಂದಿಟ್ಟಿದೆ. ಬೆಂಗಳೂರು ಮಹಾನಗರ ಪಾಲಿಕೆ ಜಿಬಿಎ ಆಗಿರುವ ಬಳಿಕ ಗುತ್ತಿಗೆದಾರರಿಗೆ ಹಲವು ಸಮಸ್ಯೆಗಳು ಎದುರಾಗಿದ್ದು, ಭದ್ರತಾ ಠೇವಣಿಯಾಗಿ ಕಡಿತಗೊಳಿಸಿದ ಶೇ.10ರಷ್ಟು ಹಣ ಹಾಗೂ ಕೆಲವು ಕಾಮಗಾರಿಗಳ ಶೇ.25 ರಷ್ಟು ಬಾಕಿ ಮೊತ್ತ ಇನ್ನೂ ಪಾವತಿಯಾಗಿಲ್ಲ ಎಂದು ಸಂಘ ಆರೋಪಿಸಿದೆ. ಅಲ್ಲದೆ, ಕಾಮಗಾರಿ ಗಳನ್ನು ಪ್ಯಾಕೇಜ್ ಪದ್ಧತಿಯಲ್ಲಿ ನೀಡುತ್ತಿರುವುದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆ ದಾರರಿಗೆ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಬೇಡಿಕೆಗಳೇನು?

? ವಿವಿಧ ಇಲಾಖೆಯಲ್ಲಿ ಬಾಕಿಯಿರುವ 37 ಸಾವಿರ ಕೋಟಿ ಬಿಲ್ ಪಾವತಿಸಿ

? 2017-18, 19-20ರ ಜಿಎಸ್‌ಟಿ ವ್ಯತ್ಯಾಸದ ಸಮಸ್ಯೆಗೆ ಪರಿಹಾರ

? ವರ್ಕ್ ಡನ್, ಟರ್ನ್ ಓವರ್ ಮಾನದಂಡ 10 ವರ್ಷಕ್ಕೆ ವಿಸ್ತರಿಸಿ

? ಬೆಂಗಳೂರು ವ್ಯಾಪ್ತಿಯ ಭದ್ರತಾ ಠೇವಣಿ ಕಡಿತಗೊಳಿಸಿದ ಅನುದಾನ ವಾಪಸಾಗಿಲ್ಲ

? ಪ್ಯಾಕೇಜ್ ಪದ್ಧತಿ ರದ್ದತಿಯಿಂದ ಸಣ್ಣ, ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಸಮಸ್ಯೆ

image

ಬಾಕಿ ಉಳಿದಿರುವ ಕಾಮಗಾರಿಗಳ ಬಿಲ್‌ಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಸಂಘದ ಪದಾ ಧಿಕಾರಿಗಳೊಂದಿಗೆ ಸರಕಾರ, ಅಧಿಕಾರಿಗಳು ತುರ್ತಾಗಿ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕು.

- ಆರ್.ಮಂಜುನಾಥ್ ಗುತ್ತಿಗೆದಾರರ ಸಂಘ ಅಧ್ಯಕ್ಷ