ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru News: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ

Akhila Bhartiya Brahman Mahasangh: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಹೊಸ ಹುದ್ದೆದಾರರ ಪದಗ್ರಹಣ ಮತ್ತು ನೇಮಕಾತಿ ಪತ್ರ ವಿತರಣೆ ನೆರವೇರಿತು. ಸಂಘಟನೆಯ ವಿಸ್ತರಣೆ, ಯುವ ನಾಯಕತ್ವಕ್ಕೆ ಪ್ರೋತ್ಸಾಹ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಜಿಲ್ಲಾ ಅಧ್ಯಕ್ಷೆಯಾಗಿ ಪೂರ್ಣಿಮಾ ಜಿ.ಎಲ್. ಅವರನ್ನು ನೇಮಿಸಲಾಯಿತು.

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಪದಾಧಿಕಾರಿಗಳ ಪದಗ್ರಹಣ

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. -

Ramesh B
Ramesh B Nov 9, 2025 6:40 PM

ಬೆಂಗಳೂರು, ನ. 9: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (Akhila Bhartiya Brahman Mahasangh), ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಹೊಸ ಹುದ್ದೆದಾರರ ಪದಗ್ರಹಣ ಮತ್ತು ನೇಮಕಾತಿ ಪತ್ರ ವಿತರಣೆ ಭಾನುವಾರ (ನವೆಂಬರ್‌ 9) ನೆರವೇರಿತು (Bengaluru News). ಸಂಘಟನೆಯ ವಿಸ್ತರಣೆ, ಯುವ ನಾಯಕತ್ವಕ್ಕೆ ಪ್ರೋತ್ಸಾಹ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ, ರಾಜ್ಯಾಧ್ಯಕ್ಷರ ಮಾರ್ಗದರ್ಶನದ ಮೇರೆಗೆ ಜಿಲ್ಲಾ ಅಧ್ಯಕ್ಷೆಯಾಗಿ ಪೂರ್ಣಿಮಾ ಜಿ.ಎಲ್. ಅವರನ್ನು ನೇಮಿಸಲಾಯಿತು.

ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಾಥ್ ಟಿ.ಆರ್., ಆರ್.ಎನ್. ವೇಣುಗೋಪಾಲ್ ಮತ್ತು ಅಮರನಾಥ್ ಎಂ., ಖಜಾಂಚಿಯಾಗಿ ನಾರಾಯಣ ಎಸ್.ಎಸ್., ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ಎ., ಮಾಧ್ಯಮ ವಕ್ತಾರರಾಗಿ ದ್ವಾರಕಾನಾಥ್ ಎಲ್. ಹಾಗೂ ನಿರ್ದೇಶಕರಾಗಿ ವೈ.ಎಸ್. ರಾಮಪ್ರಸಾದ್ ಅವರನ್ನು ನೇಮಕ ಮಾಡಲಾಯಿತು.

ಈ ಸುದ್ದಿಯನ್ನೂ ಓದಿ: Bengaluru News: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಬೆಂಗಳೂರು ಉತ್ತರ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

ಮಹಿಳಾ ವಿಭಾಗದ ಬಲವರ್ಧನೆಗಾಗಿ ನೇಮಿಸಲಾದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಜಯಶ್ರೀ ಎಸ್. ಅವರ ನೇಮಕವು ವಿಶೇಷ ಗಮನ ಸೆಳೆಯಿತು. ಮಹಿಳಾ ಘಟಕದಲ್ಲಿ ಉಪಾಧ್ಯಕ್ಷೆಯಾಗಿ ರಾಧಿಕಾ, ಪ್ರಧಾನ ಕಾರ್ಯದರ್ಶಿಗಳಾಗಿ ಭಾರತಿ ಆರ್. ಶಂಕರ್ ಮತ್ತು ಸುಮಾ ಎಚ್.ಎಲ್., ಕಾರ್ಯದರ್ಶಿಯಾಗಿ ವಿದ್ಯಾ ವಿ., ಉಪಾಧ್ಯಕ್ಷೆಯಾಗಿ ಶ್ರೀಮತಿ ನಾಗರಾಜ್ ಹಾಗೂ ನಿರ್ದೇಶಕರಾಗಿ ಸೌಮ್ಯ ಬಿ.ಎಸ್. ಅವರನ್ನು ಆಯ್ಕೆ ಮಾಡಲಾಯಿತು.

ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿವಿಶ್ವನಾಥ್ ಜೋಶಿ ಎಲ್ಲ ನೇಮಕಾತಿ ಪತ್ರಗಳನ್ನು ಅಧಿಕೃತವಾಗಿ ವಿತರಿಸಿದರು. ಹೊಸ ಪದಾಧಿಕಾರಿಗಳು ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ನಿಷ್ಠೆ, ಜವಾಬ್ದಾರಿ ಮತ್ತು ಸೇವಾ ಮನೋಭಾವದೊಂದಿಗೆ ಕಾರ್ಯ ನಿರ್ವಹಿಸುವುದಾಗಿ ಪ್ರತಿಜ್ಞೆ ಕೈಗೊಂಡರು. ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸೇವಾ ಕಾರ್ಯಕ್ರಮಗಳ ಮೂಲಕ ಸಮಾಜದ ಒಗ್ಗಟ್ಟನ್ನು ಬಲಪಡಿಸುವ ನಿಟ್ಟಿನಲ್ಲಿ ಸತತ ಕಾರ್ಯನಿರ್ವಹಿಸುವ ನಿರ್ಧಾರವನ್ನು ಪುನರುಚ್ಚರಿಸಿದೆ.