ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಎಆರ್‌ಸಿ ಆಸ್ಪತ್ರೆಯಿಂದ ‘ಕ್ಯಾನ್ಸರ್‌ ಭೀತಿಯಿಂದ ಹೊರಬನ್ನಿ’ ಉಪಕ್ರಮ

40 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರಿಗಾಗಿ ಕ್ಯಾನ್ಸರ್‌ ತಡೆಗಟ್ಟುವಿಕೆ ಕುರಿತು ಸಮಾ ಲೋಚನೆ, ವೈದ್ಯಕೀಯ ಮೌಲ್ಯಮಾಪನ, ಜೀವನಶೈಲಿ ಮತ್ತು ಕ್ಯಾನ್ಸರ್‌ ಅಪಾಯದ ಮೌಲ್ಯಮಾಪನ, ಪ್ರಯೋಗಾಲಯ ಪರೀಕ್ಷೆಗಳು, ಪ್ಯಾಪ್‌ ಸ್ಮಿಯರ್‌, ಕ್ಲಿನಿಕಲ್‌ ಸ್ತನ ಪರೀಕ್ಷೆ ಹಾಗೂ ವಯಸ್ಸಿಗೆ ಅನುಗುಣ ವಾದ ಸ್ತನದ ಇಮೇಜಿಂಗ್‌ ಪರೀಕ್ಷೆಗಳನ್ನು ನಡೆಸಲಾಗುವುದು. ಎಂದು ತಿಳಿಸಿದ್ದಾರೆ.

ಬೆಂಗಳೂರು: ಕ್ಯಾನ್ಸರ್‌ ಕುರಿತು ಜನರಲ್ಲಿರುವ ಭೀತಿಯನ್ನು ಕಡಿಮೆಗೊಳಿಸಿ ಮುಂಜಾಗ್ರತೆಯ ಪ್ರಾಮುಖ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಲ್ಲಿನ ಹೊಂಬೇಗೌಡನಗರದಲ್ಲಿರುವ ಎಆರ್‌ಸಿ ಕ್ಯಾನ್ಸರ್‌ ಆಸ್ಪತ್ರೆಯು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ಕ್ಯಾನ್ಸರ್‌ ಭೀತಿಯಿಂದ ಹೊರಬನ್ನಿ’ ಎಂಬ ವೈಯಕ್ತೀಕರಿಸಿದ ಕ್ಯಾನ್ಸರ್‌ ತಪಾಸಣಾ ಉಪಕ್ರಮಕ್ಕೆ ಚಾಲನೆ ನೀಡಿದೆ.

ಇದರ ಭಾಗವಾಗಿ, 40 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗಾಗಿ ಒಂದೇ ಸೂರಿನಡಿ ವಿವಿಧ ತಪಾಸಣೆಗಳನ್ನು ನಡೆಸಲಾಗುವುದು ಎಂದು ಎಆರ್‌ಸಿ ಕ್ಯಾನ್ಸರ್‌ ಆಸ್ಪತ್ರೆಯ ಸಹ-ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಹರಿ ಆರ್. ಶಾಪುರ್ ಶನಿವಾರ ಹೇಳಿದ್ದಾರೆ.

40 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರಿಗಾಗಿ ಕ್ಯಾನ್ಸರ್‌ ತಡೆಗಟ್ಟುವಿಕೆ ಕುರಿತು ಸಮಾಲೋಚನೆ, ವೈದ್ಯಕೀಯ ಮೌಲ್ಯಮಾಪನ, ಜೀವನಶೈಲಿ ಮತ್ತು ಕ್ಯಾನ್ಸರ್‌ ಅಪಾಯದ ಮೌಲ್ಯಮಾಪನ, ಪ್ರಯೋಗಾಲಯ ಪರೀಕ್ಷೆಗಳು, ಪ್ಯಾಪ್‌ ಸ್ಮಿಯರ್‌, ಕ್ಲಿನಿಕಲ್‌ ಸ್ತನ ಪರೀಕ್ಷೆ ಹಾಗೂ ವಯಸ್ಸಿಗೆ ಅನುಗುಣವಾದ ಸ್ತನದ ಇಮೇಜಿಂಗ್‌ ಪರೀಕ್ಷೆಗಳನ್ನು ನಡೆಸಲಾಗುವುದು. ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bangalore News: ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿ ಕಾರ್ಯಕ್ರಮ: ಡಾ.ಟಿ.ಎಸ್.ಸತ್ಯವತಿ ಅವರಿಗೆ ಸನ್ಮಾನ ಹಾಗೂ ಕೈಲಾಸ ಮಾನಸ ಸರೋವರ ದರ್ಶನ

ವೈದ್ಯಕೀಯ ಮೌಲ್ಯಮಾಪನ, ಪ್ರಯೋಗಾಲಯ ಪರೀಕ್ಷೆಗಳು, ಇಮೇಜಿಂಗ್‌ ಪರೀಕ್ಷೆಗಳು, ಕ್ಯಾನ್ಸರ್‌ಗೆ ಸಂಬಂಧಿಸಿದ ನಿರ್ದಿಷ್ಟ ತಪಾಸಣೆಗಳು, ಟ್ಯೂಮರ್‌ ಮಾರ್ಕರ್‌ಗಳು, ವೈಯಕ್ತೀಕರಿಸಿದ ಕ್ಯಾನ್ಸರ್‌ ಅಪಾಯದ ಮೌಲ್ಯಮಾಪನ ಹಾಗೂ ಆನುವಂಶಿಕ ಸಮಾಲೋಚನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕ್ಯಾನ್ಸರ್‌ನ ಲಕ್ಷಣಗಳು ಕಾಣಿಸಿಕೊಂಡ ನಂತರ ಜಾಗೃತಿ ಮೂಡಿಸಿಕೊಳ್ಳುವ ಬದಲಿಗೆ ವೈಯಕ್ತಿಕ ಅಪಾಯಗಳನ್ನು ಮುಂಚಿತವಾಗಿಯೇ ಅರ್ಥಮಾಡಿ ಕೊಳ್ಳುವುದು, ಕುಟುಂಬದ ಕ್ಯಾನ್ಸರ್‌ ಸಂಬಂಧಿತ ಇತಿಹಾಸವನ್ನು ತಿಳಿದುಕೊಳ್ಳುವುದು ಹಾಗೂ ಸೂಕ್ತ ವೈದ್ಯಕೀಯ ಸಲಹೆಯೊಂದಿಗೆ ಅಗತ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಇದರಲ್ಲಿ ಸೇರಿರುತ್ತದೆ.

“ಕುಟುಂಬದಲ್ಲಿ ಕ್ಯಾನ್ಸರ್‌ನ ವೈದ್ಯಕೀಯ ಇತಿಹಾಸವಿರುವುದು ಭಯಕ್ಕೆ ಕಾರಣವಾಗಬಾರದು; ಬದಲಾಗಿ ಜಾಗೃತಿಗೆ ಕಾರಣವಾಗಬೇಕು. ಕುಟುಂಬದ ಇತಿಹಾಸ, ವೈಯಕ್ತಿಕ ಅಪಾಯ ಮತ್ತು ಸೂಕ್ತ ತಪಾಸಣೆಯ ಬಗ್ಗೆ ತಿಳಿದುಕೊಂಡು ಮಾಹಿತಿ ಆಧಾರಿತ ನಿರ್ಧಾರಗಳನ್ನು ಕೈಗೊಳ್ಳುವುದು ಮುಖ್ಯವಾಗುತ್ತದೆ,” ಎಂದು ಶಾಪುರ್ ಅಭಿಪ್ರಾಯಪಟ್ಟಿದ್ದಾರೆ.