ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್ ಹಾಗೂ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಅಷ್ಟಾಂಗ ಹೃದಯ ಪಠಣ

2nd Ayurveda World Summit: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಸಹಸ್ರಾರು ಜನರು ಏಕಕಾಲಕ್ಕೆ 'ಅಷ್ಟಾಂಗ ಹೃದಯ ಸಂಹಿತೆ' ಯ 'ದಿನಚರ್ಯೆ' ಅಧ್ಯಾಯವನ್ನು ಪಠಿಸುವ ಮೂಲಕ, ಈ ಪಠಣವು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಹಾಗೂ ಏಷಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಯಿತು.‌

ಡಾ. ಗಿರಿಧರ ಕಜೆ ಅವರಿಗೆ ಏಷಿಯಾ ಬುಕ್‌ ಆಫ್ ರೆಕಾರ್ಡ್ಸ್‌ ಪ್ರಮಾಣ ಪತ್ರ ನೀಡಲಾಯಿತು.

ಬೆಂಗಳೂರು, ಡಿ.27: ಆಯುರ್ವೇದದಲ್ಲಿ ಮಹತ್ತರವಾದ ಸ್ಥಾನ ಪಡೆದಿರುವ 'ಅಷ್ಟಾಂಗ ಹೃದಯ ಸಂಹಿತೆ' ಯ 'ದಿನಚರ್ಯೆ' ಅಧ್ಯಾಯವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನದ (2nd Ayurveda World Summit) ಪ್ರಧಾನ ವೇದಿಕೆಯಲ್ಲಿ ಸಹಸ್ರಾರು ಜನರು ಏಕಕಾಲಕ್ಕೆ ಪಠಿಸಲಾಗಿದ್ದು, ಈ ಕಾರ್ಯಕ್ರಮವು ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ ಹಾಗೂ ಏಷಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

ಮಹರ್ಷಿ ವಾಗ್ಭಟಾಚಾರ್ಯರಿಂದ ಅಷ್ಟಾಂಗ ಹೃದಯ ರಚಿತವಾಗಿದ್ದು, ದಿನಚರ್ಯೆ ಅಧ್ಯಾಯವು ಪ್ರತಿಯೊಬ್ಬ ಮನುಷ್ಯನು ಕಾಲ ಹಾಗೂ ದೇಶಗಳಿಗೆ ಅನುಗುಣವಾಗಿ ಯಾವ ರೀತಿಯಾದ ದಿನಚರಿಯನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸುವ ಅಧ್ಯಾಯವಾಗಿದ್ದು, ಆರೋಗ್ಯಪೂರ್ಣವಾದ ಜೀವನ ನಿರ್ವಹಣೆಗೆ ಅಷ್ಟಾಂಗ ಹೃದಯದ ದಿನಚರ್ಯೆ ಅಧ್ಯಾಯವು ಸಮಗ್ರ ಚಿತ್ರವನ್ನು ಕಟ್ಟಿಕೊಡುತ್ತದೆ.

Indian Books of Records

ಇಂದು ಸಹಸ್ರಾರು ಕಂಠಗಳಿಂದ ಒಂದೇ ಸಮಯಕ್ಕೆ ಈ ಅಧ್ಯಾಯವನ್ನು ಪಠಿಸುವ ಮೂಲಕ ಆಯುರ್ವೇದ ವಿಶ್ವ ಸಮ್ಮೇಳನವು ದಾಖಲೆಯನ್ನು ಬರೆದಿದ್ದು, ಈ ದಾಖಲೆಯು ಆಯುರ್ವೇದ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಪ್ರಥಮ ದಾಖಲೆಯೂ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಯುವಕರು ಕಾಯಕದ ಕಡೆ ಮುಖ‌ ಮಾಡಿದರೆ ನಾಯಕರಾಗಲು ಸಾಧ್ಯ: ಡಾ.ಮಹಾಂತಪ್ರಭು ಸ್ವಾಮೀಜಿ

ಉತ್ಥಾನ ಕಥಾಸ್ಪರ್ಧೆ 2025ರ ಫಲಿತಾಂಶ ಪ್ರಕಟ; ಬೆಂಗಳೂರಿನ ಡಾ. ಶೈಲೇಶ್ ಕುಮಾರ್ ಪ್ರಥಮ

ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ್ದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ 2025ರ (Utthana Katha Sparde 2025) ಫಲಿತಾಂಶ ಬಿಡುಗಡೆಯಾಗಿದ್ದು, ಬೆಂಗಳೂರಿನ ಡಾ. ಶೈಲೇಶ್ ಕುಮಾರ್ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಈ ಕಥಾಸ್ಪರ್ಧೆಯಲ್ಲಿ ಕನ್ನಡದ ಖ್ಯಾತ ಕಥೆಗಾರರೂ ಸೇರಿ ಒಟ್ಟು 494 ಕಥೆಗಳು ಭಾಗವಹಿಸಿದ್ದವು. ಲೇಖಕ, ಕವಿ ದಿವಾಕರ ಹೆಗಡೆ ಕೆರೆಹೊಂಡ ಅವರು ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದ್ದಾರೆ.

ಈ ಬಗ್ಗೆ ಉತ್ಥಾನ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕಥಾಸ್ಪರ್ಧೆಯಲ್ಲಿ ಮೊದಲನೆ ಬಹುಮಾನವನ್ನು (15,000 ರೂ.) ಡಾ. ಶೈಲೇಶ್ ಕುಮಾರ್ ಅವರ ‘ಒತ್ತುವರಿ’ ಎಂಬ ಕಥೆ ಪಡೆದಿದೆ. ಎರಡನೆಯ ಬಹುಮಾನವನ್ನು (12,000 ರೂ.) ರಾಧಿಕಾ ವಿ. ಗುಜ್ಜರ್ ಅವರ ‘ಮಂಥ’ ಕಥೆ ಪಡೆದಿದ್ದು, ಮೂರನೆಯ ಬಹುಮಾನವನ್ನು (10,000 ರೂ.) ರೋಹಿತ್ ಚಕ್ರತೀರ್ಥ ಅವರ ‘ಪ್ಲುಟೋ’ ಕಥೆ ಪಡೆದಿದೆ.

ರಾಜ್ಯದಲ್ಲಿ ಮತ್ತಷ್ಟು ಚಳಿ, ಕನಿಷ್ಠ ತಾಪಮಾನ ದಾಖಲು, 19 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಇನ್ನು 5 ಕಥೆಗಳು ಮೆಚ್ಚುಗೆ ಬಹುಮಾನವನ್ನು (ತಲಾ 2000 ರೂ.) ಪಡೆದಿವೆ. ಬೆಂಗಳೂರಿನ ಕಾಂಚನಾ ಕರ್ಕಿ ಅವರ ‘ದೂರದ ಪಯಣ’, ಅನಸೂಯಾ ಸಿದ್ಧರಾಮ ಅವರ ‘ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ’, ಕೊಡಗಿನ ಸ್ಮಿತಾ ಅಮೃತರಾಜ್ ಸಂಪಾಜೆ ಅವರ ‘ಪರಿಹಾರ’, ಧಾರವಾಡದ ಶಂಕರ ಪಾಗೋಜಿ ಅವರ ಪುಣ್ಯಭೂಮಿ’ ಹಾಗೂ ಶಿವಮೊಗ್ಗದ ಟಿ.ಎಸ್. ಶ್ರವಣಕುಮಾರಿ ಅವರ ‘ಬಿದ್ದವರೆದ್ದಾಗ’ – ಈ ಕಥೆಗಳು ತೀರ್ಪುಗಾರರ ಮೆಚ್ಚುಗೆ ಬಹುಮಾನಕ್ಕೆ ಪಾತ್ರವಾಗಿವೆ.

ಬಹುಮಾನ ವಿಜೇತರ ವಿವರ ಹೀಗಿದೆ:

ಪ್ರಥಮ ಬಹುಮಾನ (15,000 ರೂ.)

ಕಥೆ-ಒತ್ತುವರಿ, ಕಥೆಗಾರ-ಡಾ. ಶೈಲೇಶ್ ಕುಮಾರ್, ಬೆಂಗಳೂರು

ಎರಡನೆಯ ಬಹುಮಾನ (12,000 ರೂ.)

ಕಥೆ-ಮಂಥ, ಕಥೆಗಾರರು- ರಾಧಿಕಾ ವಿ. ಗುಜ್ಜರ್, ಬೆಂಗಳೂರು

ಮೂರನೆಯ ಬಹುಮಾನ (10,000 ರೂ.)

ಕಥೆ-ಪ್ಲುಟೋ, ಕಥೆಗಾರ- ರೋಹಿತ್ ಚಕ್ರತೀರ್ಥ, ಬೆಂಗಳೂರು

ಮೆಚ್ಚುಗೆ ಬಹುಮಾನ (ತಲಾ 2000 ರೂ.)

  • ದೂರದ ಪಯಣ- ಕಾಂಚನಾ ಕರ್ಕಿ, ಬೆಂಗಳೂರು
  • ವ್ಯಾಪ್ತಿಪ್ರದೇಶದ ಹೊರಗಿದ್ದಾರೆ- ಅನಸೂಯಾ ಸಿದ್ಧರಾಮ, ಗೋಕಾಕ
  • ಪರಿಹಾರ- ಸ್ಮಿತಾ ಅಮೃತರಾಜ್, ಕೊಡಗು
  • ಪುಣ್ಯದ ಭೂಮಿ-ಶಂಕರ ಪಾಗೋಜಿ, ಧಾರವಾಡ
  • ಬಿದ್ದವರೆದ್ದಾಗ-ಟಿ.ಎಸ್. ಶ್ರವಣಕುಮಾರಿ, ಶಿವಮೊಗ್ಗ.