ಬೆಂಗಳೂರು: ಭಾರತ್ ಮಾತಾ ಅಭಿನಂದನ್ ಸಂಘಟನೆ ( ರಿ) ಹರಿಯಾಣ ಕರ್ನಾಟಕ ಘಟಕ ಮತ್ತು ಆಲ್ ರೌಂಡ್ ಸೋಶಿಯಲ್ ಡೆವಲಪ್ಮೆಂಟ್ ಅಸೋಸಿಯೇಷನ್ ಆರ್ಟ್ ಅಂಡ್ ಕಲ್ಚರ್ (ರಿ) ದೆಹಲಿ ಸಂಯೋಗದೊಂದಿಗೆ ಕಡಬಗೆರೆ ಕ್ರಾಸ್ ನ ಗಾಂಧಿ ವೃದ್ಧಾಶ್ರಮ ದಲ್ಲಿ, ಬೆಂಗಳೂರು ನಾರಿ ಶಕ್ತಿ ರಾಷ್ಟ್ರೀಯ ಪ್ರಶಸ್ತಿ 2026 ಮತ್ತು ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಪ್ರತಿಷ್ಠಿತ ಸಾಹಿತ್ಯ. ಶೈಕ್ಷಣಿಕ. ವೈದ್ಯಕೀಯ ಹಾಗೂ ಚಲನಚಿತ್ರ. ಸಂಗೀತ ವಿವಿಧ ಕ್ಷೇತ್ರದ ಸಾಧಕರಿಗೆ ಸಂಘಟನೆಯ ಅಧ್ಯಕ್ಷರಾದ ಡಾ.ಮಲಕಪ್ಪ ಮಹೇಶ್ ಪ್ರಶಸ್ತಿ ನೀಡಿ ಗೌರವಿಸಿ ದರು.
ಇದನ್ನೂ ಓದಿ:Bangalore News: ಬಿಎಂಎಸ್.ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
ಹೋಟೆಲ್ ಉದ್ಯಮಿ ಸುರೇಂದ್ರನಾಥ, ಜಾನ್ವಿ ಅಕಾಡೆಮಿ ಸಂಸ್ಥಾಪಕರಾದ ಡಾ.ಶಿಲ್ಪಾ ಕೆ., ಇಎಸ್ಐ ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ.ಗಿರೀಶ್ ಎಂ.ಎಸ್, ಡಾ. ಜೈನ್ ಸಾಂಗ್ವಿ ಮತ್ತಿತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಹೆಚ್.ವಿ, ಆದಾಯ ತೆರಿಗೆ ಇಲಾಖೆಯಾ ಆಯುಕ್ತರಾದ ಶಿವಾನಂದ ಎಚ್ ಕಲಕೇರಿ, ನಿವೃತ್ತ ಐಪಿಎಸ್ ಅಧಿಕಾರಿ ಬಸವರಾಜ್ ಮಾಲಗತ್ತಿ ಮತ್ತಿತರರು ಪಾಲ್ಗೊಂಡಿದ್ದರು.