ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿ.ಜೆ. ರಾಯ್‌ ಸಾವಿಗೆ ಕೇರಳದ ಆ ಐಟಿ ಅಧಿಕಾರಿಯೇ ಹೊಣೆ: ಸಹೋದರ ಬಾಬು ಸಿ.ಜೋಸೆಫ್ ಆರೋಪ

ನನಗೆ ಗೊತ್ತಿರುವಂತೆ 3 ದಿನಗಳಿಂದ ಐಟಿ ಅಧಿಕಾರಿಗಳು, ಸಿಜೆ ರಾಯ್‌ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಕೇರಳ ಐಟಿ ಅಧಿಕಾರಿಯೊಬ್ಬರು ಒತ್ತಡ ಹೇರಿದ್ದಾರೆ. ನನ್ನ ಸಹೋದರನ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಬಾಬು ಸಿ. ಜೋಸೆಫ್ ಹೇಳಿದ್ದಾರೆ.

ಬಾಬು ಸಿ. ಜೋಸೆಫ್‌ ಮತ್ತು ಸಿ.ಜೆ.ರಾಯ್‌

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಆತ್ಮಹತ್ಯೆ (C.J. Roy Suicide Case) ಕೇಸ್‌ಗೆ ಸಂಬಂಧಿಸಿ ಸಿ.ಜೆ.ರಾಯ್ ಸಹೋದರ ಹಾಗೂ ವೈಟ್ ಗೋಲ್ಡ್ ಕಂಪನಿಯ ಮಾಲೀಕ ಬಾಬು ಸಿ.ಜೋಸೆಫ್ (Babu C. Joseph) ಪ್ರತಿಕ್ರಿಯೆ ನೀಡಿದ್ದು, ನನ್ನ ಸಹೋದರನ ಸಾವಿಗೆ ಐಡಿ ಅಧಿಕಾರಿಗಳೇ ಕಾರಣ ಎಂದು ಆರೋಪ ಮಾಡಿದ್ದಾರೆ.

ನನಗೆ ಗೊತ್ತಿರುವಂತೆ 3 ದಿನಗಳಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು. ಸಿ.ಜೆ.ರಾಯ್‌ ಮೇಲೆ ಕೇರಳ ಐಟಿ ಅಧಿಕಾರಿ ಕೃಷ್ಣಪ್ರಸಾದ್ ಒತ್ತಡ ಹೇರಿದ್ದಾರೆ. ನನ್ನ ಸಹೋದರನ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಬಾಬು ಸಿ. ಜೋಸೆಫ್ ಹೇಳಿದ್ದಾರೆ.

ವ್ಯಾಪಾರದಲ್ಲಿ ಏನೂ ತೊಂದರೆ ಇರಲಿಲ್ಲ. ಬೆಳಗ್ಗೆ 11 ಗಂಟೆಗೆ ನನ್ನ ಜತೆ ಮಾತನಾಡಿದ್ದಾನೆ. ನನಗೆ ಕರೆ ಮಾಡಿದ್ದಾಗ ಕಚೇರಿಯಲ್ಲಿದ್ದ. ಯಾವಾಗ ಬರ್ತಿಯಾ ಅಂತ ಕೇಳಿದ್ದ. ಇವತ್ತು ನನ್ನ ಜತೆಗೆ ನಾರ್ಮಲ್ ಆಗಿಯೇ ಮಾತಾಡಿದ್ದ. ಅವರಿಗೆ ಯಾವುದೇ ಸಾಲ ಇರಲಿಲ್ಲ. ನನ್ನ ಸಹೋದರನ ಸಾವಿಗೆ ಐ.ಟಿ. ಇಲಾಖೆಯ ಅಧಿಕಾರಿ ಕೃಷ್ಣಪ್ರಸಾದ್ ಕಾರಣ. ನನ್ನ ಸಹೋದರ ನನ್ನ ಬಳಿ ಎಲ್ಲಾ ಹಂಚಿಕೊಳ್ಳುತ್ತಿದ್ದ ಎಂದಿದ್ದಾರೆ.

ಈ ದೇಶದಲ್ಲಿ ಶೇ.6 ಮಂದಿ ಆದಾಯ ತೆರಿಗೆ ಕಟ್ಟುತ್ತಾರೆ. ಉದ್ಯಮಿಗಳಿಗೆ ಈ ದೇಶದಲ್ಲಿ ವ್ಯವಸ್ಥೆ ಸರಿ ಇಲ್ಲ. ಸಹೋದರನ ಕೇಸ್ ವಿಚಾರವಾಗಿ ಐಟಿ ಅಧಿಕಾರಿಗಳು ನನ್ನ ಮನೆಗೂ ಬಂದಿದ್ದರು. ನನ್ನ ಮನೆಗೂ ಬಂದಿದ್ದರು. ರಿಯಲ್ ಎಸ್ಟೇಟ್​ ವಿಚಾರಕ್ಕೆ ಐಟಿ ಪರಿಶೀಲನೆ ಇತ್ತು. ಕಳೆದ 20 ವರ್ಷದ ಹಿಂದೆಯೇ ಗನ್ ಖರೀದಿಸಿದ್ದ. ಇನ್​ಕಮ್​ ಟ್ಯಾಕ್ಸ್ ಒತ್ತಡ ವಿಚಾರ ನನಗೆ ಹೇಳಿದ್ದರು. 1 ತಿಂಗಳ ಹಿಂದಿನಿಂದಲೂ ನನ್ನ ಬಳಿ ಹೇಳುತ್ತಿದ್ದರು.

C.J. Roy: ಕೋಟ್ಯಂತರ ಆಸ್ತಿ, ಐಷಾರಾಮಿ ಕಾರುಗಳಿದ್ರೂ ಹಳೆಯ ಮಾರುತಿ 800 ಖರೀದಿಸಿದ್ದ ಉದ್ಯಮಿ ಸಿ.ಜೆ. ರಾಯ್‌!

ಐಟಿ ಇಲಾಖೆ ಹೆಚ್ಚುವರಿ ಆಯುಕ್ತ ಕೃಷ್ಣಪ್ರಸಾದ್ ಅವರೇ ಸಿ.ಜೆ.ರಾಯ್ ಸಾವಿಗೆ ಹೊಣೆ. ನಾನು ಬೆಳಗ್ಗೆ ಬೆಂಗಳೂರು ತಲುಪಲಿದ್ದೇನೆ ಎಂದು ಬಾಬು ಸಿ.ಜೆ. ಹೇಳಿದ್ದಾರೆ. ಸಿ.ಜೆ. ರಾಯ್ ಅವರ ಕುಟುಂಬ ಬೆಳಗಿನ ಜಾವ 3 ಗಂಟೆಗೆ ಬರುತ್ತಾರೆ ಎಂದು ಬಾಬು ಸಿ. ಜೋಸೆಫ್ ಹೇಳಿದ್ದಾರೆ.