ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Encroachment: ಕೋಗಿಲು ಬಳಿಕ ಥಣಿಸಂದ್ರದಲ್ಲೂ ಜೆಸಿಬಿ ಗರ್ಜನೆ, ಬಿಡಿಎ ಜಾಗ ಒತ್ತುವರಿ ತೆರವು

ಬೆಂಗಳೂರಿನ ನಾಗವಾರದ ಥಣಿಸಂದ್ರ (Thanisandra) ಬಳಿಯ ಸಾರಾಯಿ ಪಾಳ್ಯದಲ್ಲಿ ಬಿಡಿಎಗೆ (BDA) ಸೇರಿದ ಸರ್ವೆ ಸಂಬರ್ 28 ರ 2 ಎಕರೆ ಜಾಗವನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿದ್ದ 30ಕ್ಕೂ ಹೆಚ್ಚು ಮನೆ, ಶೆಡ್ ಹಾಗೂ ಗ್ಯಾರೇಜ್​ಗಳನ್ನು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿ ಕೆಡವಲಾಗಿದೆ.

ಥಣಿಸಂದ್ರ ಒತ್ತುವರಿ ತೆರವು

ಬೆಂಗಳೂರು, ಜ.9: ಕೋಗಿಲು ಲೇಔಟ್​ನಲ್ಲಿ (Kogilu Layout) ಸರ್ಕಾರದ ಭೂಮಿ ಒತ್ತುವರಿ ಮಾಡಿದ್ದವರಿಗೆ ಬಿಗ್ ಶಾಕ್ ನೀಡಿದ ಬೆನ್ನಲ್ಲೇ ನಾಗವಾರದಲ್ಲೂ ಒತ್ತುವರಿ ತೆರವು (encroachment eviction) ಕಾರ್ಯಾಚರಣೆ ತೀವ್ರಗೊಂಡಿದೆ. ನಾಗವಾರದ ಥಣಿಸಂದ್ರ (Thanisandra) ಬಳಿಯ ಸಾರಾಯಿ ಪಾಳ್ಯದಲ್ಲಿ ಬಿಡಿಎಗೆ (BDA) ಸೇರಿದ ಸರ್ವೆ ಸಂಬರ್ 28 ರ 2 ಎಕರೆ ಜಾಗವನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿದ್ದ 30ಕ್ಕೂ ಹೆಚ್ಚು ಮನೆ, ಶೆಡ್ ಹಾಗೂ ಗ್ಯಾರೇಜ್​ಗಳನ್ನು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿ ಕೆಡವಲಾಗಿದೆ.

ಬಿಡಿಎ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸ್ಥಳೀಯ ನಿವಾಸಿಗಳು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಸುಮಾರು 20 ವರ್ಷಗಳಿಂದ ಇಲ್ಲೇ ವಾಸ ಮಾಡುತ್ತಿರುವುದಾಗಿ ಹೇಳುತ್ತಿರುವ ನಿರಾಶ್ರಿತರು ಅಗತ್ಯ ದಾಖಲೆಗಳನ್ನ ಹೊಂದಿದ್ದರೂ, ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೇ ಅಮಾನವೀಯತೆ ತೋರಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ, ನಿಯಮಾನುಸಾರ ಮತ್ತು ಕೋರ್ಟ್ ಆದೇಶನಕ್ಕನುಗುಣವಾಗಿಯೇ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೇಲ್ನೋಟಕ್ಕೆ ಕೋಗಿಲು ಲೇಔಟ್ ರೀತಿಯಲ್ಲಿಯೇ ಸರ್ಕಾರಿ ಜಾಗವನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲಾಗಿರುವ ಆರೋಪಗಳೂ ಇವೆ. ಆದರೆ ಇದು ಸರ್ಕಾರಿ ಜಾಗ ಎಂಬುದು ಗೊತ್ತಿದ್ದರೂ ಒಂದಷ್ಟು ಮಂದಿಗೆ ಇ ಖಾತಾ, ರಿಜಿಸ್ಟ್ರೇಷನ್ ಪತ್ರಗಳನ್ನು ಮಾಡಿಕೊಟ್ಟವರು ಯಾರು? ಇಷ್ಟು ಮನೆಗಳು ತಲೆ ಎತ್ತುವ ತನಕ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ವಿಚಾರವೂ ಗೊತ್ತಾಗಬೇಕಿದೆ.

Kogilu Encroachment: ಕೋಗಿಲು ಸರ್ಕಾರಿ ಜಾಗ ಒತ್ತುವರಿ; ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲು

ಹರೀಶ್‌ ಕೇರ

View all posts by this author