ಬೆಂಗಳೂರು: ಬೆಂಗಳೂರು ಈಗ ಕೇವಲ ತಂತ್ರಜ್ಞಾನದ ಹಬ್ ಮಾತ್ರವಲ್ಲದೆ, ದೇಶದ ಅತ್ಯಾಧು ನಿಕ ಹೃದಯ ಚಿಕಿತ್ಸಾ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ವೈದ್ಯಕೀಯ ಲೋಕದ ಇತ್ತೀಚಿನ ಆವಿಷ್ಕಾರಗಳು ಹೃದಯ ಚಿಕಿತ್ಸೆಯ ಸ್ವರೂಪವನ್ನೇ ಬದಲಿಸಿದ್ದು, ವಾರ ಗಟ್ಟಲೆ ಆಸ್ಪತ್ರೆಯಲ್ಲಿ ಕಳೆಯಬೇಕಿದ್ದ ರೋಗಿಗಳು ಈಗ ಕೇವಲ ಕೆಲವೇ ದಿಗಳಲ್ಲಿ ಮನೆಗೆ ಮರಳುವಂತಾಗಿದೆ. ಈ ಚಿಕಿತ್ಸೆಗಳು ಹಿಂದೆ ಶಸ್ತ್ರಚಿಕಿತ್ಸೆ ಮಾಡುವುದು ಬಹಳ ಅಪಾಯಕಾರಿ ಎಂದೇ ಭಾವಿಸಿದ್ದ ರೋಗಿಗಳಲ್ಲೂ ಹೊಸ ಭರವಸೆ ಮೂಡಿಸಿವೆ.
ವೈದ್ಯರು ಈಗ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಾದ ಟಿಎವಿಆರ್ (ಟ್ರಾನ್ಸ್ ಕ್ಯಾತಿಟರ್ ಅಯೋ ರ್ಟಿಕ್ ವಾಲ್ವ್ ರಿಪ್ಲೇಸ್‌ಮೆಂಟ್) ಮತ್ತು ಟಿಎಂವಿಆರ್ (ಟ್ರಾನ್ಸ್‌ಕ್ಯಾತಿಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್‌ಮೆಂಟ್) ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಈ ವಿಧಾನಗಳು ಹಳೆಯ ಸಾಂಪ್ರದಾಯಿಕ ವಿಧಾನವಾದ ತೆರೆದ ಹೃದಯ ಚಿಕಿತ್ಸೆಗಳಿಲ್ಲದೆ, ಸಂಕೀರ್ಣ ಸಮಸ್ಯೆಗಳನ್ನೂ ಪರಿಹರಿಸುತ್ತಿವೆ.
ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ನ ಹಿರಿಯ ಹೃದ್ರೋಗ ತಜ್ಞರಾದ ಡಾ. ಸಂಜಯ್ ಮೆಹ್ರೋತ್ರಾ ಅವರ ಪ್ರಕಾರ, ಭಾರತದಲ್ಲಿ ಹೃದಯ ಚಿಕಿತ್ಸಾ ಕ್ಷೇತ್ರವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅವರು, "ಈ ಹೊಸ ತಂತ್ರಜ್ಞಾನಗಳು ಅತ್ಯಂತ ಸಂಕೀರ್ಣವಾದ ಹೃದಯ ಸಂಬಂಧಿ ಸಮಸ್ಯೆಗಳನ್ನು ಸಹ ಹೆಚ್ಚು ಸುರಕ್ಷಿತವಾಗಿ ಗುಣಪಡಿಸಲು ನಮಗೆ ನೆರವಾಗು ತ್ತಿವೆ. ಇವು ಕೇವಲ ಉತ್ತಮ ಫಲಿತಾಂಶ ನೀಡುವುದಲ್ಲದೆ, ರೋಗಿಗಳು ಅತಿ ಶೀಘ್ರವಾಗಿ ಗುಣಮುಖ ರಾಗುವಂತೆ ಮಾಡುತ್ತವೆ," ಎಂದು ವಿವರಿಸುತ್ತಾರೆ.
ವಾರಗಳ ವಿಶ್ರಾಂತಿಗೆ ಬ್ರೇಕ್: 3 ದಿನಗಳಲ್ಲಿ ಮನೆಗೆ
ಈ ಚಿಕಿತ್ಸಾ ಪದ್ಧತಿಯ ಅತಿದೊಡ್ಡ ಲಾಭವ ಎಂದರೆ ಚೇತರಿಸಿಕೊಳ್ಳುವಿಕೆಯ ವೇಗ. ಸಾಂಪ್ರ ದಾಯಿಕ ಮುಕ್ತ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು ವಾರಗಟ್ಟಲೆ ಆಸ್ಪತ್ರೆಯಲ್ಲಿ ಕಳೆಯ ಬೇಕಾಗಿತ್ತು. ಆದರೆ, ಟಿಎವಿಆರ್ ಚಿಕಿತ್ಸೆಗೆ ಒಳಗಾದವರು ಕೇವಲ 24 ರಿಂದ 72 ಗಂಟೆಗಳ ಒಳಗೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶಕ್ತರಾಗುತ್ತಿದ್ದಾರೆ. ಇದು ರೋಗಿಗಳ ಸಮಯ ಮತ್ತು ವೆಚ್ಚ ಎರಡನ್ನೂ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಜಾಗತಿಕ ಅಂಕಿಅಂಶಗಳ ಪ್ರಕಾರ, ಈ ಆಧುನಿಕ ಚಿಕಿತ್ಸೆಗಳು ದೀರ್ಘಾವಧಿಯಲ್ಲಿ ಅತ್ಯಂತ ವಿಶ್ವಾಸಾರ್ಹ ವಿಧಾನಗಳಾಗಿವೆ. ಟಿಎವಿಆರ್ ಅಥವಾ ಕವಾಟು ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ಶೇ. 73ಕ್ಕೂ ಹೆಚ್ಚು ರೋಗಿಗಳು, ಚಿಕಿತ್ಸೆ ಮುಗಿದ 7 ವರ್ಷಗಳ ನಂತರವೂ ಯಾವುದೇ ತಾಂತ್ರಿಕ ವೈಫಲ್ಯವಿಲ್ಲದೆ ಆರೋಗ್ಯವಾಗಿರುವುದು ಎಂಬುದು ಸಾಬೀತಾಗಿದೆ.
ಈ ತಂತ್ರಜ್ಞಾನಗಳು ವಿಶೇಷವಾಗಿ ಎರಡನೇ ಬಾರಿ ಹೃದಯ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ವರದಾನವಾಗಿವೆ. ಹಿಂದೆ, ಪುನರಾವರ್ತಿತ ಶಸ್ತ್ರಚಿಕಿತ್ಸೆಗಳು ಅತ್ಯಂತ ಅಪಾಯಕಾರಿಯಾಗಿದ್ದವು. ಆದರೆ ಈಗ ವೈದ್ಯರು ಎದೆಯನ್ನು ಮತ್ತೆ ಸೀಳುವ ಅಗತ್ಯವಿಲ್ಲದೆಯೇ ಇಂತಹ ಸಂಕೀರ್ಣ ಪ್ರಕರಣ ಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ.
ಉದಾಹರಣೆಗೆ, ಈ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಹೃದಯದ ಕವಾಟು ಚಿಕಿತ್ಸೆ ವಿಫಲ ವಾಗಿದ್ದ ರೋಗಿಯೊಬ್ಬರಿಗೆ, ಈ ಹೊಸ ಕನಿಷ್ಠ ಆಕ್ರಮಣಕಾರಿ ವಿಧಾನದ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು. ಇದರಿಂದ ಅವರು ಮತ್ತೊಂದು ಓಪನ್-ಹಾರ್ಟ್ ಸರ್ಜರಿಗೆ ಒಳಗಾಗು ವುದು ಸಂಪೂರ್ಣವಾಗಿ ತಪ್ಪಿದಂತಾಯಿತು. ಈ ಸರಳ ಮತ್ತು ಸುರಕ್ಷಿತ ಆಯ್ಕೆಗಳು ಲಭ್ಯವಿರುವು ದರಿಂದ, ಹೆಚ್ಚಿನ ರೋಗಿಗಳು ಈಗ ಯಾವುದೇ ಭಯವಿಲ್ಲದೆ ಚಿಕಿತ್ಸೆಗೆ ಮುಂದೆ ಬರುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಹಿರಿಯರಲ್ಲಿ ಸದ್ದೇ ಮಾಡದೆ ಹೆಚ್ಚುತ್ತಿದೆ ಸಮಸ್ಯೆ
ವೈದ್ಯಕೀಯ ಕ್ಷೇತ್ರದಲ್ಲಿ ಇಷ್ಟೆಲ್ಲಾ ಮುನ್ನಡೆ ಸಾಧಿಸಲಾಗಿದ್ದರೂ, ವೈದ್ಯರು ಒಂದು ಗಂಭೀರ ಸಮಸ್ಯೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ದೇಶದಲ್ಲಿ ಅನೇಕ ಹೃದಯ ಸಂಬಂಧಿ ಸಮಸ್ಯೆಗಳು ಆರಂಭಿಕ ಹಂತದಲ್ಲಿ ಪತ್ತೆಯಾಗುತ್ತಿಲ್ಲ ಎಂಬುದು ಆತಂಕಕಾರಿ ವಿಷಯವಾಗಿದೆ.
ಭಾರತದಲ್ಲಿ ಹೃದಯದ ಕವಾಟುಗಳಿಗೆ ಸಂಬಂಧಿಸಿದ ಕಾಯಿಲೆಗಳು ಬಹಳ ಹೆಚ್ಚಾಗಿ ಕಂಡು ಬರುತ್ತಿವೆ. ರುಮಾಟಿಕ್ ಹಾರ್ಟ್ ಡಿಸೀಸ್ ಇಂದಿಗೂ ಬಹಳ ಕಾಡುತ್ತಿವೆ. ಜೊತೆಗೆ, ನಗರ ಪ್ರದೇಶದ ಹಿರಿಯ ನಾಗರಿಕರಲ್ಲಿ 'ಅಯೋರ್ಟಿಕ್ ಸ್ಟೆನೋಸಿಸ್' ನಂತಹ ಸಮಸ್ಯೆಗಳು ಹೆಚ್ಚುತ್ತಿವೆ.
ಅತ್ಯಂತ ಕಳವಳಕಾರಿ ಸಂಗತಿಯೆಂದರೆ, 60 ವರ್ಷ ಮೇಲ್ಪಟ್ಟವರಲ್ಲಿ ಇಂತಹ ಕಾಯಿಲೆಗಳು ಕೊನೆಯ ಹಂತದಲ್ಲಿ ಪತ್ತೆಯಾಗುತ್ತಿವೆ. ಚಿಕಿತ್ಸೆ ಕಷ್ಟಸಾಧ್ಯವಾದ ಹಂತದಲ್ಲಿ ರೋಗಿಗಳು ಆಸ್ಪತ್ರೆಗೆ ಬರುತ್ತಿರುವುದು ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ನಿಯಮಿತ ಆರೋಗ್ಯ ತಪಾಸಣೆ ಮತ್ತು ರೋಗಲಕ್ಷಣಗಳ ಬಗ್ಗೆ ಜಾಗೃತಿ ಹೊಂದುವ ಮೂಲಕ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯು ವುದು ಅತ್ಯಗತ್ಯ ಎಂದು ವೈದ್ಯರು ಒತ್ತಿ ಹೇಳಿದ್ದಾರೆ.
ಮುಂದಿನ 20-30 ವರ್ಷಗಳ ಆರೋಗ್ಯ ಯೋಜನೆ
ವೈದ್ಯರು ಈಗ ಹೃದಯ ಚಿಕಿತ್ಸೆಯಲ್ಲಿ ಕೇವಲ ಇಂದಿನ ಅಗತ್ಯವನ್ನಷ್ಟೇ ನೋಡದೆ, ದೀರ್ಘಕಾಲದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಭಾರತೀಯ ರೋಗಿಗಳು ಸಾಮಾನ್ಯವಾಗಿ ಈಗೀಗ ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಮತ್ತು ಚಿಕಿತ್ಸೆಯ ನಂತರ ದೀರ್ಘಕಾಲ ಬದುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ವೈದ್ಯರು ಮುಂದಿನ 20 ರಿಂದ 30 ವರ್ಷಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸಾ ಯೋಜನೆಯನ್ನು ರೂಪಿಸುತ್ತಿದ್ದಾರೆ.
ಇದರರ್ಥ, ಮೊದಲ ಬಾರಿಗೆ ಚಿಕಿತ್ಸೆ ನೀಡುವಾಗಲೇ ಭವಿಷ್ಯದಲ್ಲಿ ಅಗತ್ಯವಿರುವ ಚಿಕಿತ್ಸೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅತ್ಯುತ್ತಮ ಮಾರ್ಗವನ್ನು ಆಯ್ಕೆ ಮಾಡಲಾಗುತ್ತದೆ. ಇದರಿಂದ ರೋಗಿಗಳಿಗೆ ಅವರ ಜೀವಿತಾವಧಿಯುದ್ದಕ್ಕೂ ನಿರಂತರ ಮತ್ತು ಪರಿಣಾಮಕಾರಿ ಚಿಕಿತ್ಸೆ ಸಿಗುವುದನ್ನು ಖಚಿತಪಡಿಸಿಕೊಳ್ಳಬಹುದು.
'ಹಾರ್ಟ್ ಟೀಮ್' ಎಂಬ ಹೊಸ ಪರಿಕಲ್ಪನೆ
ಅತ್ಯಂತ ನಿಖರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಸ್ಪತ್ರೆಗಳು ಈಗ 'ಹಾರ್ಟ್ ಟೀಮ್' ವಿಧಾನವನ್ನು ಅನುಸರಿಸುತ್ತಿವೆ. ಈ ತಂಡದಲ್ಲಿ ಹೃದ್ರೋಗ ತಜ್ಞರು, ಶಸ್ತ್ರಚಿಕಿತ್ಸಕರು (ಸರ್ಜನ್ ಗಳು), ಇಮೇಜಿಂಗ್ ತಜ್ಞರು ಮತ್ತು ಅರಿವಳಿಕೆ ತಜ್ಞರು ಒಟ್ಟಾಗಿ ಕೆಲಸ ಮಾಡುತ್ತಾರೆ. ಪ್ರತಿ ರೋಗಿಯ ಸ್ಥಿತಿಯನ್ನು ಈ ಎಲ್ಲಾ ತಜ್ಞರು ಚರ್ಚಿಸಿ, ಅವರಿಗೆ ಅತ್ಯಂತ ಸೂಕ್ತವಾದ ಮತ್ತು ಸುರಕ್ಷಿತವಾದ ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ.
ಹೃದಯ ಚಿಕಿತ್ಸೆಯಲ್ಲಿ ಬೆಂಗಳೂರು ಹೊಸ ಮೈಲಿಗಲ್ಲು
ಅತ್ಯಾಧುನಿಕ ಆಸ್ಪತ್ರೆಗಳು, ಅನುಭವೀ ವೈದ್ಯರು ಮತ್ತು ನವೀನ ತಂತ್ರಜ್ಞಾನದ ಲಭ್ಯತೆಯಿಂದ ಬೆಂಗಳೂರು ಇಂದು ಭಾರತದ ಹೃದಯ ಚಿಕಿತ್ಸಾ ಕ್ಷೇತ್ರಕ್ಕೆ ಮಾದರಿಯಾಗಿ ಬೆಳೆಯುತ್ತಿದೆ.
ದೇಶದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ವಿಶೇಷವಾಗಿ ವಯಸ್ಸಾದ ಜನಸಂಖ್ಯೆಯಲ್ಲಿ ಹೆಚ್ಚು ತ್ತಿರುವ ಈ ಸಂದರ್ಭದಲ್ಲಿ, ಅತ್ಯಂತ ವೇಗವಾದ, ಸುರಕ್ಷಿತವಾದ ಮತ್ತು ಸುಧಾರಿತ ಚಿಕಿತ್ಸೆಯನ್ನು ನೀಡುವ ಬೆಂಗಳೂರಿನ ಸಾಮರ್ಥ್ಯವು ಭಾರತದ ಹೃದ್ರೋಗ ಚಿಕಿತ್ಸಾ ಕ್ಷೇತ್ರದ ಭವಿಷ್ಯವನ್ನೇ ರೂಪಿಸುತ್ತಿದೆ.