ಬೆಂಗಳೂರು: ನಗರದಾದ್ಯಂತ ಪಟಾಕಿ ಸಿಡಿತದ ಘಟನೆಗಳನ್ನು ಪತ್ತೆಹಚ್ಚಲು ಮತ್ತು ಗುರುತಿಸಲು ಬೆಂಗಳೂರು ಪೊಲೀಸರು ಕೃತಕ ಬುದ್ಧಿಮತ್ತೆಯ (AI) ಮೊರೆ ಹೋಗಿದ್ದಾರೆ. ನಿಯಮ ಮೀರಿ ಪಟಾಕಿ (Bengaluru city police) ಹೊಡೆದರೆ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾ ಪತ್ತೆ ಹಚ್ಚಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕಳುಹಿಸಲಿದೆ. ರಾತ್ರಿ 10 ಗಂಟೆಯ ಬಳಿಕ ಜನರು ಪಟಾಕಿ ಹೊಡೆಯುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ವ್ಯಾಪಕ ದೂರುಗಳ ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳಲ್ಲಿ ಪೊಲೀಸರು ಎಐ ಸಾಫ್ಟ್ವೇರ್ ಸೇರಿಸಿದ್ದಾರೆ.
ಇದು ನಿಯಮ ಮೀರಿ ಪಟಾಕಿ ಹೊಡೆಯುವುದನ್ನು ಸೆರೆಹಿಡಿದು ನೇರವಾಗಿ ನಗರ ಪೊಲೀಸ್ ಕಂಟ್ರೋಲ್ ರೂಮ್ಗೆ ರವಾನಿಸಲು ನೆರವಾಗಲಿದೆ. ಸದ್ಯ ಇದು ಪ್ರಾಯೋಗಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಜಾರಿ ತರಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೂ ಪಟಾಕಿ ಸಿಡಿಲು ನಿಷೇಧವಿದೆ. ಆದರೂ ಜನ ಅದನ್ನು ಗಾಳಿಗೆ ತೂರಿ ಪಟಾಕಿ ಸಿಡುತ್ತಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಐ ಕ್ಯಾಮೆರಾಗಳು ಸಹಾಯಕಾರಿಯಾಗಲಿದೆ.
ಪಟಾಕಿ ಪತ್ತೆ ವೀಡಿಯೊ AI ಅಪ್ಲಿಕೇಶನ್, ಶ್ರೀರಾಂಪುರಂ, ಕೆಆರ್ ಮಾರುಕಟ್ಟೆ, ಎಚ್‌ಎಸ್‌ಆರ್ ಲೇಔಟ್, ಹರಳೂರು ಮತ್ತು ಮಾರತಹಳ್ಳಿಯಂತಹ ಹೆಚ್ಚಿನ ಜನ ಸಾಂದ್ರತೆಯ ಪ್ರದೇಶಗಳಲ್ಲಿರುವ 200 ಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. "ದೂರುಗಳು ಬಂದ ತಕ್ಷಣ ಹೊಯ್ಸಳ ತಂಡಗಳು ಸ್ಥಳಕ್ಕೆ ಆಗಮಿಸುತ್ತವೆ. ನಮ್ಮ ಕ್ಯಾಮೆರಾಗಳೊಂದಿಗೆ AI ಮಾಡ್ಯೂಲ್ ಅನ್ನು ಸಂಯೋಜಿಸಲಾಗಿರುವುದರಿಂದ, ಅಂತಹ ಘಟನೆ ಗುರುತಿಸಲ್ಪಟ್ಟ ತಕ್ಷಣ ಹೊಯ್ಸಳ ತಂಡಗಳಿಗೆ ಎಚ್ಚರಿಕೆ ಸಿಗುತ್ತದೆ. ಇದು ನಮಗೆ ತ್ವರಿತವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಇಲಾಖೆ ತಿಳಿಸಿದೆ. ಈ ಉಪಕ್ರಮವು ರಾತ್ರಿ 10 ಗಂಟೆಯ ನಂತರ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸುವುದನ್ನು ತಡೆಯಲು ಪೊಲೀಸರಿಗೆ ಸಹಾಯ ಮಾಡಿದೆ ಮತ್ತು ಶಬ್ದ ಮತ್ತು ವಾಯು ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Bengaluru Robbery Case: ಬೆಂಗಳೂರು ದರೋಡೆ ಪ್ರಕರಣ; ಶಂಕಿತ ಆರೋಪಿಗಳ ಪೋಟೊ ಬಿಡುಗಡೆ ಮಾಡಿದ ಪೊಲೀಸರು
ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ಕ್ಯಾಮೆರಾಗಳಿಗೆ ಹೊಸ ಸಾಫ್ಟ್ವೇರ್ ಅಳವಡಿಸಿ ರಾಜಧಾನಿಯ ವಿವಿಧೆಡೆಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಪ್ರಾಯೋಗಿಕ ಪರೀಕ್ಷೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿದೆ. ಪಟಾಕಿ ಸಿಡಿಸುವುದನ್ನು ಎಐ ಮೂಲಕ ಸ್ವಯಂಪ್ರೇರಿತವಾಗಿ ಪೊಲೀಸ್ ಕಮಾಂಡ್ ಸೆಂಟರ್ ಎಚ್ಚರಿಕೆ ಸಂದೇಶ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗುವುದು" ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಟ್ರಾಫಿಕ್‌ನಲ್ಲಿಯೂ AI
ಬೆಂಗಳೂರು ನಗರದಲ್ಲಿ ಸುಮಾರು 9 ಸಾವಿರ ಕಣ್ಗಾವಲು ಕ್ಯಾಮೆರಾ ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು 50ಕ್ಕಿಂತ ಹೆಚ್ಚು ಕಡೆಗಳಲ್ಲಿ ಎಐ ಕ್ಯಾಮೆರಾ ಹಾಕಲಾಗಿದೆ. ಈಗಿರುವ ಕ್ಯಾಮೆರಾಗಳಿಗೆ ಎಐ ಸಾಫ್ಟ್ವೇರ್ ಅಳವಡಿಸಲಾಗಿದೆ.