ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BT Shreedhar: ಬೆಂಗಳೂರು- ಮೈಸೂರು ಹೈವೇ ರೂವಾರಿ BT ಶ್ರೀಧರ್‌ ಕರ್ನಾಟಕದ ರೀಜನಲ್ ಆಫೀಸರ್ ಆಗಿ ನೇಮಕ

Bengaluru- Mysore National Highway: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾಗಿದ್ದ ಬಿಟಿ ಶ್ರೀಧರ್ ಅವರು ರಾಷ್ಟ್ರೀಯ ಹೆದ್ದಾರಿಗಳ ಕರ್ನಾಟಕದ ರೀಜನಲ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೈವೇ ನಿರ್ಮಾಣಗಳಲ್ಲಿ ಅಪಾರ ಅನುಭವವನ್ನು ಹೊಂದಿರುವ ಬಿಟಿ ಶ್ರೀಧರ್‌ ರಾಜ್ಯದ ಹಲವು ಮುಖ್ಯ ಹೆದ್ದಾರಿ ಯೋಜನೆಗಳಿಗೆ ತಮ್ಮ ಕೊಡುಗೆ ನೀಡಿದ್ದಾರೆ.

ಬಿಟಿ ಶ್ರೀಧರ್‌

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (Bengaluru- Mysore National Highway) ಪ್ರಾಧಿಕಾರದ ಯೋಜನಾ ನಿರ್ದೇಶಕರಾಗಿದ್ದ ಬಿಟಿ ಶ್ರೀಧರ್ (BT Shreedhar) ಅವರು ರಾಷ್ಟ್ರೀಯ ಹೆದ್ದಾರಿಗಳ ಕರ್ನಾಟಕದ ರೀಜನಲ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ಕೇಂದ್ರ ಭೂ ಸಾರಿಗೆ ಇಲಾಖೆ ಶ್ರೀಧರ್‌ ಅವರನ್ನು ರೀಜನಲ್ ಆಫೀಸರ್ ನೇಮಕಗೊಳಿಸಿ ಆದೇಶ ಹೊರಡಿಸಿದೆ. ಕರ್ನಾಟಕ ಮಾತ್ರವಲ್ಲದೇ ಕೇರಳದ ರಾಷ್ಟ್ರೀಯ ಹೆದ್ದಾರಿಗಳ ಜವಾಬ್ದಾರಿಯನ್ನು ಶ್ರೀಧರ್‌ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ಹೈವೇ ನಿರ್ಮಾಣಗಳಲ್ಲಿ ಅಪಾರ ಅನುಭವವನ್ನು ಹೊಂದಿರುವ ಬಿಟಿ ಶ್ರೀಧರ್‌ ರಾಜ್ಯದ ಹಲವು ಮುಖ್ಯ ಹೆದ್ದಾರಿ ಯೋಜನೆಗಳಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಇದೀಗ ಇವರನ್ನು ಪ್ರಾದೇಶಿಕ ಅಧಿಕಾರಿಯಾಗಿ ನೇಮಿಸಿರುವುದರಿಂದ ನೆನೆಗುದಿಗೆಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಚುರುಕುಗೊಳ್ಳಲಿವೆ.

ಪ್ರತಾಪ್‌ ಸಿಂಹ ಮಾಡಿರುವ ಪೋಸ್ಟ್‌



ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಪ್ರತಾಪ್‌ ಸಿಂಹ ಸಹ ಸಂತಸ ವ್ಯಕ್ತಪಡಿಸಿದ್ದು, ನಮ್ಮ ಮೈಸೂರು-ಬೆಂಗಳೂರು ಹೈವೇ ನಿರ್ಮಾಣದ ಹಿಂದಿನ ಶಕ್ತಿಯಾಗಿದ್ದ ನಮ್ಮ ಮೈಸೂರಿನವರೇ ಆದ ಬಿಟಿ ಶ್ರೀಧರ್ ಇನ್ನು ಮುಂದೆ NH(O) ಕರ್ನಾಟಕದ ರೀಜನಲ್ ಆಫೀಸರ್ ಎಂದು ತಮ್ಮ ಸಾಮಾಜಿ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Vishakha Bhat Heggar

View all posts by this author