Bengaluru News: ವಿದ್ಯಾರ್ಥಿಗಳ ಸೃಜನಶೀಲ ಕಲಿಕೆಗೆ ಸಾಕ್ಷಿಯಾದ ಫ್ಯಾಷನ್ ಶೋ ವೇದಿಕೆ; ಉತ್ತಮ ವಿನ್ಯಾಸಕಾರರಿಗೆ ಪ್ರಶಸ್ತಿ

Bengaluru News: ಬೆಂಗಳೂರು ನಗರದ ಕೋರಮಂಗಲ ಕ್ಲಬ್‌ನಲ್ಲಿ ಜೆಡಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವತಿಯಿಂದ ವಿದ್ಯಾರ್ಥಿಗಳಲ್ಲಿನ ವಿನ್ಯಾಸ ಕಲೆ, ಸೃಜನಶೀಲತೆ, ನಾವೀನ್ಯತೆಯನ್ನು ಗುರುತಿಸುವ ನಿಟ್ಟಿನಲ್ಲಿ ʼಲೀವ್ ಇನ್ ದಿ ಮೂಮೆಂಟ್ʼ ಎಂಬ ಥೀಮ್‌ನೊಂದಿಗೆ ಫ್ಯಾಷನ್‌ ಶೋ ಕಾರ್ಯಕ್ರಮ ಜರುಗಿತು.

Bengaluru News
Profile Siddalinga Swamy Jan 26, 2025 10:30 AM

ಬೆಂಗಳೂರು: ಜೆಡಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವತಿಯಿಂದ ನಗರದ ಕೋರಮಂಗಲ ಕ್ಲಬ್‌ನಲ್ಲಿ ವಿದ್ಯಾರ್ಥಿಗಳಲ್ಲಿನ ವಿನ್ಯಾಸ ಕಲೆ, ಸೃಜನಶೀಲತೆ, ನಾವೀನ್ಯತೆಯನ್ನು ಗುರುತಿಸುವ ನಿಟ್ಟಿನಲ್ಲಿ ʼಲೀವ್ ಇನ್ ದಿ ಮೂಮೆಂಟ್ʼ ಎಂಬ ಥೀಮ್‌ನೊಂದಿಗೆ ಫ್ಯಾಷನ್‌ ಶೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉತ್ತಮ ವಿನ್ಯಾಸ ರೂಪಿಸಿದ ವಿದ್ಯಾರ್ಥಿಗಳಿಗೆ 2025ರ ಉತ್ತಮ ವಿನ್ಯಾಸ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳ ನವ ವಿನ್ಯಾಸಕ ಉಡುಪು, ಜ್ಯುವೆಲ್ಲರಿ ಸೇರಿದಂತೆ ಇತರೆ ಅತ್ಯಾಕರ್ಷಕ ವಸ್ತುಗಳನ್ನು ಪ್ರದರ್ಶನ ಏರ್ಪಡಿಸಲಾಗಿತ್ತು.

10

ದಿ ಸ್ಟೈಲ್ ವರ್ಲ್ಡ್ ಮತ್ತು ಲ್ಯಾಕ್ಮಿ ಮೇಕಪ್ ಅಕಾಡೆಮಿಯ ಸಹಯೋಗದಲ್ಲಿ ಹಾಗೂ ನೃತ್ಯ ಸಂಯೋಜನೆಯಲ್ಲಿ ಪರಿಣತಿ ಹೊಂದಿರುವ ನಿರ್ದೇಶಕಿ ಸುಮಾ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸ್ಪೋರ್ಟ್ಸ್, ಗೇಮಿಂಗ್, ಸಾಂಪ್ರದಾಯಿಕ ಕರಕುಶಲತೆಯಿಂದ ಹಿಡಿದು ವಿವಿಧ ಥೀಮ್‌ಗಳ ವಿನ್ಯಾಸಗಳ ಪ್ರದರ್ಶನವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ವಿನ್ಯಾಸಪಡಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಪ್ರಶಸ್ತಿ ವಿಜೇತರು

ಆಶಾ ಪವಿತ್ರ, ಗೋಕುಲಪ್ರಿಯ ಆರ್ ಮತ್ತು ನಿತ್ಯ ಕೆ.ಎ. -ʼಬ್ಲ್ಯಾಕ್ ಮಿರರ್ʼ, ಅಮೂಲ್ಯ ಡಿ.ಎಚ್., ಬಿಂದು ಕೃಷ್ಣ ಕೆ. ಮತ್ತು ಪೂಜಾ ಇರಾನ್ನಾ ಗೋಟೂರ್ -ʼಇಕಿಗೈʼ, ಪಿ.ವಿ. ನಾಗೈಂಪನ, ಚಾಲ್ಸಿ ಕೆ.ಜೆ. ಮತ್ತು ಫಿರ್ದೌಸ್ ಫಾತಿಮಾ - ʼಅರ್ಬನ್ ಬ್ಲೂಮ್ʼ, ಥಕ್ಕರ್ ಹರ್ಷಿತಾ ಅತುಲ್, ಥಕ್ಕರ್ ಹೃಷಿತಾ ಅತುಲ್ ಮತ್ತು ಅಕೃತಿ ನೇಗಿ - ʼಮುಜೋʼ, ಶಶಾಂಕ್ ವಿ., ಭೂಮಿಕಾ ಪಟೇಲ್ - ʼಟ್ರೊಂಪೆ ಎಲ್'ಒಯಿಲ್ʼ ಪ್ರೇರಣಾ ಸಿ, ಸಾನಿಯಾ ಖಾನ್ ಮತ್ತು ಧನುಸಿಯಾ ಬಿಜಿ - ʼಇಮಿಟೇಟೆಡ್‌ ಆರ್ಟ್‌ʼ ಹಾಗೂ ತ್ರಿವೇಣಿ ಆರ್ ಮತ್ತು ಪೌಲಿನಾ ಹೆಮಿಶ್ ಐ - ʼದಿ ಬೌಂಡ್ಲೆಸ್ ಸ್ಕೇಟರ್ಸ್ʼ.

ಕಾರ್ಯಕ್ರಮದ ಕುರಿತು ವ್ಯವಸ್ಥಾಪಕ ಟ್ರಸ್ಟಿ ನೀಲೇಶ್ ದಲಾಲ್ ಮಾತನಾಡಿ, ಈ ವೇದಿಕೆಯ ಮೂಲಕ ಪದವೀದರರನ್ನು ಅಂದರೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಕೆಲಸವಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಅಭಿವೃದ್ಧಿಪಡಿಸಿಕೊಂಡು ಉತ್ತಮ ಭವಿಷ್ಯ ಕಂಡುಕೊಳ್ಳಲಿ ಎಂಬುದೇ ನಮ್ಮ ಆಶಯ. ಈ ಮೂಲಕ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಅರ್ಥೈಸಿಕೊಳ್ಳಲಿ ಮತ್ತು ಮುಂದಿನ ದಿನಗಳಲ್ಲಿ ಫ್ಯಾಷನ್‌ ಲೋಕ ಹೆಚ್ಚು ಅಭ್ಯುದಯ ಕಾಣಲಿ ಎಂಬುದೇ ನಮ್ಮ ಆಶಯ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Republic Day Fashion 2025: ರಾಷ್ಟ್ರಪ್ರೇಮ ಬಿಂಬಿಸುವ ಫ್ಯಾಷನ್‌ನತ್ತ ಯುವ ಜನತೆ

ಜೆಡಿ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ

ಜೆಡಿ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿಯನ್ನು 1988 ರಲ್ಲಿ ಸ್ಥಾಪಿಸಲಾಗಿದೆ. ಜೆಡಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಬಹು ಪ್ರಶಸ್ತಿ ವಿಜೇತ ಸಂಸ್ಥೆಯಾಗಿದ್ದು, ವಿವಿಧ ವಿಷಯಗಳಲ್ಲಿ ಸೈದ್ಧಾಂತಿಕ ಮತ್ತು ಕೈಗಾರಿಕಾ ಮಾನ್ಯತೆಯ ಸಂಯೋಜನೆಯೊಂದಿಗೆ ಪ್ರಸಿದ್ಧ ಸೃಜನಶೀಲ ಶಿಕ್ಷಣವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರು ಸೇರಿದಂತೆ ಗೋವಾ, ಕೊಚ್ಚಿ, ಹೈದರಾಬಾದ್ ಮತ್ತು ವಿಜಯವಾಡಗಳಲ್ಲಿ ಕಲಿಕಾ ಕೇಂದ್ರಗಳನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್