Republic Day Fashion 2025: ರಾಷ್ಟ್ರಪ್ರೇಮ ಬಿಂಬಿಸುವ ಫ್ಯಾಷನ್‌ನತ್ತ ಯುವ ಜನತೆ
ಈ ಬಾರಿಯ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ, ರಾಷ್ಟ್ರಪ್ರೇಮ ಮೂಡಿಸುವ ನಾನಾ ಬಗೆಯ ಡಿಸೈನರ್ ವೇರ್ಸ್ ಬಿಡುಗಡೆಯಾಗಿದ್ದು, ಯುವಜನತೆಯನ್ನು ಸೆಳೆಯುತ್ತಿವೆ. ಈ ಕುರಿತ ಇಲ್ಲಿದೆ ವಿವರ.
- ಶೀಲಾ ಸಿ. ಶೆಟ್ಟಿ, ಫ್ಯಾಷನ್ ಪತ್ರಕರ್ತೆ
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಪ್ರೇಮ ಬಿಂಬಿಸುವ ಫ್ಯಾಷನ್ ಯುವ ಜನತೆಯನ್ನು ಸೆಳೆಯುತ್ತಿದೆ. ಹೌದು, ಅದು ಧರಿಸುವ ಫ್ಯಾಷನ್ ಡಿಸೈನರ್‌ವೇರ್ (Republic Day Fashion 2025) ಆಗಬಹುದು, ಇಲ್ಲವೇ ಆಕ್ಸೆಸರೀಸ್ ಆಗಬಹುದು. ಎಲ್ಲವೂ ಪ್ರತಿವರ್ಷ ಹೊಸ ರೂಪದಲ್ಲಿ, ಹೊಸ ವಿನ್ಯಾಸದಲ್ಲಿಆಗಮಿಸುವುದರಿಂದ ಯುವಕ-ಯುವತಿಯರು ಆಕರ್ಷಿತರಾಗುತ್ತಿದ್ದಾರೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಕಾನ್ಸೆಪ್ಟ್‌ಗೆ ತಕ್ಕಂತೆ ಡಿಸೈನರ್‌ವೇರ್
ಇನ್ನು ಇದಕ್ಕೆ ಪೂರಕ ಎಂಬಂತೆ, ಪ್ರತಿವರ್ಷವೂ ಈ ದಿನದಂದು ನಾವು ಹೊಸ ಡಿಸೈನರ್‌ವೇರ್‌ಗಳನ್ನು ಕೊಳ್ಳುತ್ತೇವೆ. ದೇಶಪ್ರೇಮ ವ್ಯಕ್ತಪಡಿಸಲು ಇದೊಂದು ಸದಾವಕಾಶ. ಈ ಕಾರಣದಿಂದಾಗಿ ನಾವು ದೇಶಭಕ್ತಿ ಬಿಂಬಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸೇಂಟ್ ಜೋಸೆಫ್ ಕಾಲೇಜಿನ ರಜತ್ ಹಾಗೂ ಧವನ್.
ಇನ್ನು ಮಹಾರಾಣಿ ಕಾಲೇಜಿನ ದಿಶಾ ಹಾಗೂ ನಿಶಾ ಹೇಳುವಂತೆ, ಈ ಸೀಸನ್‌ನಲ್ಲಿ ಖಾದಿ ಹಾಗೂ ಕಾಟನ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಹೊಂದುವಂತಹ ಸಾಕಷ್ಟು ಡಿಸೈನರ್‌ವೇರ್‌ಗಳು ಹಾಗೂ ಕುರ್ತಾ ಎಲ್ಲವೂ ದೊರೆಯುತ್ತಿರುವುದರಿಂದ, ಆ ದಿನ ಧರಿಸಿ ಸಂತಸಪಡುವುದು ಮಾತ್ರವಲ್ಲ, ನಮ್ಮಲ್ಲಿರುವ ದೇಶಭಕ್ತಿಯನ್ನು ತೋರ್ಪಡಿಸಬಹುದು ಎನ್ನುತ್ತಾರೆ.
ಬದಲಾದ ಅಭಿರುಚಿ
ಆದರೆ ಯುವಕ-ಯುವತಿಯರು, ಇಷ್ಟಪಡುವ ಡಿಸೈನರ್‌ವೇರ್‌ಗಳು ಅಭಿರುಚಿ ಮಾತ್ರ ಒಬ್ಬರಿಗಿಂತ ಒಬ್ಬರದ್ದು ವಿಭಿನ್ನವಾಗಿರುತ್ತದೆ. ಆಯಾ ಯುವಕ-ಯುವತಿಯರ ಮನೋಭಿಲಾಷೆಗೆ ತಕ್ಕಂತೆ ಈ ಬಾರಿ ಡಿಸೈನರ್‌ವೇರ್‌ಗಳು ಬಂದಿವೆ. ಇತ್ತ ದೇಶಪ್ರೇಮ ಕೂಡ ತೋರ್ಪಡಿಸಬೇಕು. ಅತ್ತ ಫ್ಯಾಷನ್ ಕೂಡ ಫಾಲೋ ಮಾಡಬೇಕು ಎನ್ನುವವರಿಗೆ ಮಿಕ್ಸ್ ಮ್ಯಾಚ್ ಮಾಡಬಹುದಾದ ಸಿಂಪಲ್ ಔಟ್‌ಫಿಟ್‌ಗಳೂ ಕೂಡ ಮಾರುಕಟ್ಟೆಗೆ ಎಂಟ್ರಿ ನೀಡಿವೆ ಎನ್ನುತ್ತಾರೆ ಡಿಸೈನರ್ ಹರ್ಷ್.
ಖಾದಿ-ಕಾಟನ್ ಫ್ಯಾಷನ್‌ವೇರ್ಸ್
ಇದೀಗ ಕಲರ್‌ಫುಲ್ ಖಾದಿ ಹಾಗೂ ಮಿಕ್ಸ್ ಮ್ಯಾಚ್ ಕಾಟನ್ ಕಾಲ! ಪರಿಣಾಮ ಯಂಗ್‌ಸ್ಟರ್ಸ್ ಆಕರ್ಷಿತಗೊಂಡಿದ್ದಾರೆ. ಈ ಹಿಂದೆಲ್ಲ ಖಾದಿ ಫ್ಯಾಬ್ರಿಕ್‌ನಲ್ಲಿ ಕೇವಲ ಕ್ರೀಮ್ ಶೇಡ್ಸ್, ಇಲ್ಲವೇ ಲೈಟ್ ಆರೆಂಜ್ ಶೇಡ್ಸ್ ಸೇರಿದಂತೆ ಕೆಲವು ಬೆರಳೆಣಿಕೆಯಷ್ಟು ಕಲರ್‌ನ ಉಡುಪುಗಳು ಮಾತ್ರ ಚಾಲ್ತಿಯಲ್ಲಿದ್ದವು. ಆದರೆ ಈಗ ಮೊದಲಿನಂತಿಲ್ಲ. ಖಾದಿಯಲ್ಲೆ ವೆರೈಟಿ ಡಿಸೈನವೇರ್‌ಗಳು ದೊರೆಯುತ್ತವಲ್ಲದೇ, ಇಂದಿನ ಡಿಸೈನರ್ಸ್ ಲೆಕ್ಕವಿಲ್ಲದಷ್ಟು ವಿನ್ಯಾಸಗಳನ್ನು ಮಾಡಿದ್ದಾರೆ. ಅದರಲ್ಲೂಇಂದಿನ ಯಂಗ್‌ಸ್ಟರ್ಸ್ ಗಮನದಲ್ಲಿಟ್ಟುಕೊಂಡು ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ ಎನ್ನುತ್ತಾರೆ ಹರ್ಷ್ ಬೇಡಿ.
ಈ ಸುದ್ದಿಯನ್ನೂ ಓದಿ | Republic Day Nail Art 2025: ಗಣರಾಜ್ಯೋತ್ಸವದ ಹಿನ್ನೆಲೆ ಟ್ರೆಂಡಿಯಾದ ತಿರಂಗಾ ನೇಲ್ ಆರ್ಟ್
ರಾಷ್ಟ್ರ ಪ್ರೇಮಿ ಯುವಕ-ಯುವತಿಯರೇ ಗಮನಿಸಿ
* ರಾಷ್ಟ್ರ ಗೌರವಕ್ಕೆ ಚ್ಯುತಿಯಾಗುವಂತಹ ಡಿಸೈನರ್‌ವೇರ್ ಧರಿಸಬೇಡಿ.
* ಫ್ಯಾಷನ್ ಹೆಸರಲ್ಲಿಎಕ್ಸ್‌ಪೋಸ್ ಮಾಡುವುದು ತರವಲ್ಲ.
* ರಾಷ್ಟ್ರ ಪ್ರೇಮ ತೋರ್ಪಡಿಸುವಲ್ಲಿಇವು ಎಲ್ಲಿಯೂ ಅಗೌರವ ಸೂಚಿಸುವಂತಾಗಬಾರದು. ಎಚ್ಚರವಹಿಸಿ ಫ್ಯಾಷನ್ ಮಾಡುವುದು ಅಗತ್ಯ.
* ಧರಿಸುವ ಉಡುಪುಗಳಿಂದ ಯಾವುದೇ ಕಾರಣಕ್ಕೂ ದೇಶದ ಘನತೆಗೆ ಧಕ್ಕೆಯುಂಟಾಗಬಾರದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)