ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Power Cut: ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಬೆಂಗಳೂರು ನಗರದ ಆರ್.ಆರ್. ನಗರ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 27ರಂದು ನಗರದ ವಿವಿಧೆಡೆ ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ವಿದ್ಯುತ್‌ ಕಡಿತವಾಗಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಜೂ. 27ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಸಾಂದರ್ಭಿಕ ಚಿತ್ರ.

Profile Siddalinga Swamy Jun 26, 2025 10:34 PM

ಬೆಂಗಳೂರು: ಆರ್.ಆರ್.ನಗರ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂ. 27ರಂದು ನಗರದ ವಿವಿಧೆಡೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (Bengaluru Power Cut). ನಗರದ ಭರತ್ ಲೇಔಟ್, ಪಟಾಲಮ್ಮ ದೇವಸ್ಥಾನ ಹಿಂಭಾಗ, ಹ್ಯಾಪಿ ವ್ಯಾಲಿ ಲೇಔಟ್, ವಿನಾಯಕ ಲೇಔಟ್, ಉತ್ತರಹಳ್ಳಿ, ಅಪ್ಪಯ್ಯ ಸ್ವಾಮಿ ಲೇಔಟ್, ವಡ್ಡರಪಾಳ್ಯ ಏರಿಯಾ, ಬನಶಂಕರಿ 5ನೇ ಹಂತ, ಪೂರ್ಣ ಪ್ರಜ್ಞಾ ಲೇಔಟ್, ಮಂತ್ರಿ ಆಲ್ಫೈನ್ಸ್, ದ್ವಾರಕ ನಗರ, ಬನಶಂಕರಿ 6ನೇ ಹಂತ, 80 ಫೀಟ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Jungle Mangal Movie: ಯಶ್ ಶೆಟ್ಟಿ ನಟನೆಯ ʼಜಂಗಲ್ ಮಂಗಲ್ʼ ಚಿತ್ರ ಜುಲೈ 4 ರಂದು ತೆರೆಗೆ‌

ಬೆಂಗಳೂರು ಉತ್ತರ ವೃತ್ತದ 66/11 ಕೆವಿ ಅಬ್ಬಿಗೆರೆ MUSS, 66/11ಕೆವಿ ಕೆ. ಎಚ್.ಬಿ.ಎಂ.ಯು.ಎಸ್.ಎಸ್ ವ್ಯಾಪ್ತಿಯ ಹಲವೆಡೆ ಜೂ.27ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ಬೆಂಗಳೂರು ಉತ್ತರ ವೃತ್ತ, ಕಮ್ಮಗೊಂಡನಹಳ್ಳಿ, ರಾಘವೇಂದ್ರ ಲೇಔಟ್, ಲಕ್ಷ್ಮೀಪುರ, ವಡೇರಹಳ್ಳಿ, ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ಏರ್ ಫೋರ್ಸ್ (ಜಾಲಹಳ್ಳಿ ಪೂರ್ವ) ಸಿಂಗಾಪುರ, ಪೈಪ್‌ಲೈನ್ ರಸ್ತೆ, ನಿಸರ್ಗ ಲೇಔಟ್, ಕೆಂಪೇಗೌಡ ಲೇಔಟ್, ಕಲಾನಗರ ಮುಖ್ಯರಸ್ತೆ, ಕಮ್ಮಗೊಂಡನಹಳ್ಳಿ, ವಿಶ್ವೇಶ್ವರಯ್ಯ ಲೇಔಟ್, ಎಚ್‌ವಿವಿ ಲೇಔಟ್, ವೈ-ಮ್ಯಾಕ್ ಸರ್ಕಲ್, ಕುವೆಂಪುನಗರ, ಕಾಶಿರಾಮ್ ನಗರ, ವಡೇರಹಳ್ಳಿ, ಸಿಂಹಾದ್ರಿ ಲೇಔಟ್, ಪ್ರಕೃತಿ ಲೇಔಟ್, ಮುನೀಶ್ವರಪ್ಪ ಲೇಔಟ್, ಲಕ್ಕಪ್ಪ ಲೇಔಟ್, ಬಾಲಾಜಿ ಲೇಔಟ್, ವರದರಾಜಸ್ವಾಮಿ ಲೇಔಟ್, ಬ್ರಿಗೇಡ್ ಪಾರ್ಕ್‌ಸೈಡ್ ನಾರ್ತ್ ಅಪಾರ್ಟ್‌ಮೆಂಟ್, ಶಿವನಹಳ್ಳಿ, ಶ್ರೀನಿಧಿ ಲೇಔಟ್, ಬಿಡಬ್ಲ್ಯುಎಸ್‌ಎಸ್‌ಬಿ, ಪಾವನಿ, ಹೆರಿಟೇಜ್, ಸಿಆರ್‌ಪಿಎಫ್, ರಾಮಗೊಂಡನಹಳ್ಳಿ, ಐವಿಆರ್‌ಐ, ಶ್ರೀಕ್ ಅಪಾರ್ಟ್‌ಮೆಂಟ್, ಬಿಎಂಎಸ್ ಹಾಸ್ಟೆಲ್, 5ನೇ ಹಂತ ಯಲಹಂಕ ಹೊಸ ಪಟ್ಟಣ, ಪುಟ್ಟೇನಹಳ್ಳಿ, ಪಾವನಿ, ಹೆರಿಟೇಜ್, ಸಿಆರ್‌ಪಿಎಫ್, ಕೆಂಚೇನಹಳ್ಳಿ, ಗಟಿಗ್ನಹಳ್ಳಿ, ಹರಿಹಳ್ಳಿ, ಸುರದೇನಪುರ, ಸದನಹಳ್ಳಿ, ಇಸ್ರೋ ಲೇಔಟ್, ಆಕಾಶಿನಾರ್, ಬೆಸ್ಕಾಂ, ಎಲ್‌ಬಿಎಸ್ ನಗರ, ಯಲಹಂಕೆ ಎಬಿ ಸೆಕ್ಟರ್, ಆವಲಹಳ್ಳಿ, ಎಸ್.ಎನ್.ಹಳ್ಳಿ, ರಾಜನಕುಂಟೆ, ಹೊನ್ನೇನಹಳ್ಳಿ, ಎವಿ ನಾನಹಳ್ಳಿ. ಪುರ, ಮಾರಸಂದ್ರ, ಸಿಲ್ವರ್ ಓಕ್, ನೆಲಕುಂಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.