ಬೆಂಗಳೂರು, ಡಿ. 20: ತಂತ್ರಜ್ಞಾನ ಯುಗದಲ್ಲಿ ಒಂಟಿತನ, ದೈಹಿಕ ಆಕಾಂಕ್ಷೆ ನೀಗಿಸಲು ಸಂಗಾತಿಯೇ ಬೇಕೆಂದಿಲ್ಲ. ಸೆಕ್ಸ್ ಗೊಂಬೆಗಳು (Physical contact item) ಮಾರುಕಟ್ಟೆಯಲ್ಲಿ ಸಿಗುತ್ತಿವೆ. ವಿದೇಶಿಗರು ಹೆಚ್ಚಾಗಿ ಸೆಕ್ಸ್ ಗೊಂಬೆಗಳನ್ನು ಬಳಸುತ್ತಿದ್ದರು. ದೇಶಕ್ಕೂ ಕಾಲಿಟ್ಟಿರುವ ಈ ಗೊಂಬೆಗಳನ್ನು ಭಾರತೀಯರು ಇದೀಗ ಸದ್ದಿಲ್ಲದೆ ಬಳಸುತ್ತಿದ್ದಾರೆ. ಪುರುಷರು ದುಬಾರಿ ಮೊತ್ತ ಕೊಟ್ಟು ಸೆಕ್ಸ್ ಗೊಂಬೆಗಳನ್ನು ಖರೀದಿಸುತ್ತಿದ್ದಾರೆ. ಭಾರತದಲ್ಲಿ ಇದರ ಮಾರುಕಟ್ಟೆ ಬಹಳ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರಿನ (Bengaluru) ಪುರುಷರು ಮಹಿಳೆಯರಂತೆ ಕಾಣುವ ಗೊಂಬೆಗಳನ್ನು ಖರೀದಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇದರ ಬೆಲೆ 4 ಲಕ್ಷ ರುಪಾಯಿವರೆಗೆ ಇರುತ್ತದೆ ಎಂದು ತಯಾರಕರೊಬ್ಬರು ಬಹಿರಂಗಪಡಿಸಿದ್ದಾರೆ (Viral News).
ಹೌದು, ಇಂದು ಹಲವು ಕಾರಣಗಳಿಂದ ಒಂಟಿಯಾಗಿ ವಾಸಿಸುವವರ ಸಂಖ್ಯೆ ಹೆಚ್ಚುತ್ತಿದೆ. ಸಂಗಾತಿಯ ಸಾವು, ವಿಚ್ಛೇದನ, ಮದುವೆಯಾಗಲು ಇಷ್ಟವಿಲ್ಲದಿರುವ ಆಲೋಚನೆ ಅಥವಾ ಹುಡುಗಿಯರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದೆ ಹಲವು ಪುರುಷರು ಒಂಟಿಯಾಗಿದ್ದಾರೆ. ಹೀಗಾಗಿ ಹೆಚ್ಚು ಹಣವಿರುವವರು ಸೆಕ್ಸ್ ಗೊಂಬೆಗಳತ್ತ ಮುಖ ಮಾಡುತ್ತಿದ್ದಾರೆ. ಈ ಪುರುಷರು ತಮ್ಮ ಮಾತು ಕೇಳುವ ಈ ಗೊಂಬೆಗಳು ಹುಡುಗಿಯರಿಗಿಂತ ಉತ್ತಮವೆಂದು ಭಾವಿಸುತ್ತಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಜಾಗತಿಕವಾಗಿ ಸೆಕ್ಸ್ ಆಟಿಕೆಗಳ ಮಾರಾಟ ಹೆಚ್ಚಾಗಿದೆ.
ಮಗಳಿಗೆ ಲೈಂಗಿಕ ಆಟಿಕೆಯನ್ನು ಉಡುಗೊರೆಯಾಗಿ ನೀಡಬಯಸಿದ್ದ ಕಿರುತೆರೆ ನಟಿ
3,350 ಕೋಟಿ ರುಪಾಯಿ ವ್ಯವಹಾರ
ಭಾರತದಲ್ಲಿ ಈ ಗೊಂಬೆಗಳು 2024ರಲ್ಲಿ $112-118 ಮಿಲಿಯನ್ ಆದಾಯವನ್ನು ಗಳಿಸಿದವು. ಈ ಆದಾಯವು 2030ರ ವೇಳೆಗೆ $260-370 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಕೆಲವು ಸಾವಿರಗಳಿಂದ ಪ್ರಾರಂಭವಾಗುವ ಈ ಗೊಂಬೆಗಳ ಬೆಲೆ ಲಕ್ಷ ರುಪಾಯಿಯಲ್ಲಿದೆ.
ಇನ್ನು ಭಾರತದಲ್ಲಿ ಸೆಕ್ಸ್ ಡಾಲ್ ಖರೀದಿಸುತ್ತಿರುವುದರಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನವಿದೆ ಎಂದು ಇದನ್ನು ತಯಾರಿಸುವ ಸಂಸ್ಥೆಯಾದ ಬೇಷರಮ್‍ನ ಸಹ-ಸಂಸ್ಥಾಪಕ ರಾಜ್ ಶಮಾನಿ ಹೇಳಿದ್ದಾರೆ. ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. ಕರ್ನಾಟಕದಲ್ಲಿ ಸೆಕ್ಸ್ ಟಾಯ್ ಅತಿ ಹೆಚ್ಚು ಮಾರಾಟವಾಗುತ್ತಿದೆ. ತಮಿಳುನಾಡು ಹಾಗೂ ಪಂಜಾಬ್ ನಂತರದ ಸ್ಥಾನದಲ್ಲಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಅಂದಹಾಗೆ ಬೆಂಗಳೂರಿನ ಜನರು ಈ ಸೆಕ್ಸ್ ಗೊಂಬೆಗಳನ್ನು ಸಾವಿರಗಳಲ್ಲಿ ಖರೀದಿಸುತ್ತಿಲ್ಲ. ಬದಲಾಗಿ ನಾಲ್ಕು ಲಕ್ಷ ರೂಪಾಯಿಗಳನ್ನು ಕೊಟ್ಟು ಗೊಂಬೆಗಳನ್ನು ಖರೀದಿಸುತ್ತಿದ್ದಾರೆ ಎಂದು ಅವರು ಬಹಿರಂಗಪಡಿಸಿದರು. ಈ ಗೊಂಬೆಗಳು 4 ಲಕ್ಷ ರುಪಾಯಿ ಕೊಡಲು ಯೋಗ್ಯವಾಗಿದೆ ಎಂದು ಖರೀದಿಸುವ ಪುರುಷರ ಅಭಿಪ್ರಾಯ. ಯಾಕೆಂದರೆ ಈ ಗೊಂಬೆ ನೋಡಲು ಮಹಿಳೆಯರಂತೆಯೇ ಕಾಣುತ್ತದೆ.
ದೈಹಿಕ ಆಸೆಗಳನ್ನು ಪೂರೈಸಿಕೊಳ್ಳಲು ಬಯಸುವವರು ಮಹಿಳೆಯ ದೇಹವನ್ನು ಬಯಸುವಂತೆಯೇ ಈ ಗೊಂಬೆಗೂ ಒಂದು ದೇಹವಿದೆ ಎಂದು ಶಮಾನಿ ಹೇಳಿದರು. ಈ ಗೊಂಬೆ ನೋಡಲು ಆಟಿಕೆಯಂತೆ ಕಾಣುವುದಿಲ್ಲ. ಆಕೆಯ ಚರ್ಮ, ತುಟಿಗಳು, ಮೂಗು, ಕಣ್ಣುಗಳು ಮತ್ತು ಎಲ್ಲ ಅಂಗಗಳು ಮಹಿಳೆಯಂತೆಯೇ ಇದೆ ಅವರು ಹೇಳಿದರು. ಅಷ್ಟೇ ಅಲ್ಲ, ಪುರುಷರು ಈ ಗೊಂಬೆಯ ಎಲ್ಲ ಭಾಗಗಳನ್ನು ತಮ್ಮ ಇಚ್ಛೆಯಂತೆಯೇ ಬದಲಾಯಿಸಬಹುದು. ಅದರ ಗಾತ್ರ, ಉಡುಗೆ-ತೊಡುಗೆ ಸೇರಿದಂತೆ ಎಲ್ಲವನ್ನೂ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಬಹುದು. ಹೀಗಾಗಿ ಅದರ ಬೆಲೆ ಹೆಚ್ಚಿದ್ದರೂ ಜನರು ಇದನ್ನು ಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದರು.