ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಾನಗರಗಳ ಪೈಕಿ ಆತ್ಮಹತ್ಯೆ ದರದಲ್ಲಿ ಬೆಂಗಳೂರಿಗೆ ಅಗ್ರಸ್ಥಾನ!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದೇಶದ ನಗರಗಳಲ್ಲಿ ಆತ್ಮಹತ್ಯೆ ದರಗಳ ಕುರಿತಾದ ಡೇಟಾ, ಬೆಂಗಳೂರನ್ನು ಕಳವಳಕಾರಿ ಸ್ಥಾನದಲ್ಲಿರಿಸಿದೆ. ಮಹಾನಗರಗಳಲ್ಲಿ ಬೆಂಗಳೂರು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ದೆಹಲಿಯ ನಂತರ ಎರಡನೇ ಸ್ಥಾನದಲ್ಲಿದೆ. NCRB ಡೇಟಾ ಹೇಳುವ ಪ್ರಕಾರ, 84.99 ಲಕ್ಷ ಜನಸಂಖ್ಯೆಯೊಂದಿಗೆ ಬೆಂಗಳೂರಿನಲ್ಲಿ 2403 ಆತ್ಮಹತ್ಯೆಗಳನ್ನು ತೋರಿಸುತ್ತದೆ. ಇದು ನಗರದ ಆತ್ಮಹತ್ಯೆ ದರವನ್ನು 28.3 ಎಂದು ಉಲ್ಲೇಖಿಸುತ್ತದೆ.

ಸಂಗ್ರಹ ಚಿತ್ರ

ಬೆಂಗಳೂರು: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದೇಶದ ನಗರಗಳಲ್ಲಿ ಆತ್ಮಹತ್ಯೆ ದರಗಳ ಕುರಿತಾದ ಡೇಟಾ, ಬೆಂಗಳೂರನ್ನು ಕಳವಳಕಾರಿ ಸ್ಥಾನದಲ್ಲಿರಿಸಿದೆ. ಮಹಾನಗರಗಳಲ್ಲಿ ಬೆಂಗಳೂರು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ದೆಹಲಿಯ ನಂತರ ಎರಡನೇ ಸ್ಥಾನದಲ್ಲಿದ್ದರೂ, ಜನಸಂಖ್ಯೆಯ ಪ್ರಕಾರ ಅದರ ಆತ್ಮಹತ್ಯೆ ಅನುಪಾತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಮಹಾನಗರಗಳಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ.

2024ರ ಕ್ಯಾಲೆಂಡರ್ ವರ್ಷದ NCRB ಡೇಟಾ ಹೇಳುವ ಪ್ರಕಾರ, 84.99 ಲಕ್ಷ ಜನಸಂಖ್ಯೆಯೊಂದಿಗೆ ಬೆಂಗಳೂರಿನಲ್ಲಿ 2403 ಆತ್ಮಹತ್ಯೆಗಳನ್ನು ತೋರಿಸುತ್ತದೆ. ಇದು ನಗರದ ಆತ್ಮಹತ್ಯೆ ದರವನ್ನು 28.3 ಎಂದು ಉಲ್ಲೇಖಿಸುತ್ತದೆ. ಇನ್ನು ದೆಹಲಿಯಲ್ಲಿ 163.15 ಲಕ್ಷ ಜನಸಂಖ್ಯೆಯಲ್ಲಿ 2905 ಆತ್ಮಹತ್ಯೆಗಳು ಸಂಭವಿಸಿದ್ದು ಇದು ಆತ್ಮಹತ್ಯೆ ದರವನ್ನು 17.8 ಎಂದು ತೋರಿಸುತ್ತದೆ. ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, ಕೆಲಸದ ಒತ್ತಡ, ಉದ್ಯೋಗದ ಅನಿಶ್ಚಿತತೆ, ಹೆಚ್ಚುತ್ತಿರುವ ಜೀವನ ವೆಚ್ಚ, ವೈಯಕ್ತಿಕ ಸಮಸ್ಯೆಗಳು ಮತ್ತು ಸಾಮಾಜಿಕ ಪ್ರತ್ಯೇಕತೆಗಳು ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ.

ಉಪತಹಶೀಲ್ದಾರ್ ಆತ್ಮಹತ್ಯೆ

ನೇಣುಬಿಗಿದುಕೊಂಡು ಉಪತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ನಡೆದಿದೆ‌. ತಿಮ್ಮಯ್ಯ (52) ಆತ್ಮಹತ್ಯೆಗೆ ಶರಣಾದ ಉಪತಹಶೀಲ್ದಾರ್. ಮೈಸೂರು ಜಿಲ್ಲೆ, ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿದ್ದ ತಿಮ್ಮಯ್ಯ, ಮೂರು ವರ್ಷಗಳ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೇ 30 ಲಾಡ್ಜ್‌ನಲ್ಲಿ 4 ಪುಟದ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂಲತಃ ಕೊಡಗು ಜಿಲ್ಲೆಯವರಾದ ತಿಮ್ಮಯ್ಯ ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Vishakha Bhat Heggar

View all posts by this author