ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhaja Mana Pre-Concert Workshop: ಪರಮ್ ಫೌಂಡೇಶನ್‌ನಿಂದ 3 ದಿನಗಳ 'ಭಜ ಮನ' ಪೂರ್ವ-ಸಂಗೀತ ಕಾರ್ಯಾಗಾರಕ್ಕೆ ತೆರೆ

Param Foundation: ಬೆಂಗಳೂರಿನ ಜಯನಗರದ ಸನಾತನ ಕಲಾಕ್ಷೇತ್ರದಲ್ಲಿ ಪರಮ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ 'ಭಜ ಮನ' ಪೂರ್ವ-ಸಂಗೀತ ಕಾರ್ಯಾಗಾರವು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನಡೆಯಿತು.

ಬೆಂಗಳೂರಿನ ಜಯನಗರದಲ್ಲಿ ಸಂಗೀತ ಕಾರ್ಯಾಗಾರ ಜರುಗಿತು.

ಬೆಂಗಳೂರು, ನ. 21: ಪರಮ್ ಫೌಂಡೇಶನ್ ವತಿಯಿಂದ (Param Foundation) ಬೆಂಗಳೂರಿನ ಜಯನಗರದ ಸನಾತನ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮೂರು ದಿನಗಳ 'ಭಜ ಮನ' ಪೂರ್ವ-ಸಂಗೀತ ಕಾರ್ಯಾಗಾರವು (Bhaja Mana Pre-Concert Workshop) ಯಶಸ್ವಿಯಾಗಿ ಮುಕ್ತಾಯಗೊಂಡಿತು. ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ (Sivasri Skandaprasad) ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಗಾರದಲ್ಲಿ ನಗರದಾದ್ಯಂತ 6ರಿಂದ 60 ವರ್ಷ ವಯೋಮಾನದ 50ಕ್ಕೂ ಹೆಚ್ಚು ಉತ್ಸಾಹಿ ಸಂಗೀತಾಸಕ್ತರು ಪಾಲ್ಗೊಂಡಿದ್ದರು.

ಶಿವಶ್ರೀ ಸ್ಕಂದಪ್ರಸಾದ್ ಅವರಿಂದ ಸಾಹಿತ್ಯಾಸಕ್ತರು ದಾಸರ ಪದಗಳು, ಅಭಂಗ್‌ಗಳು ಮತ್ತು ಭಜನೆಗಳನ್ನು ಕಲಿತರು. ಇದರ ಜತೆಗೆ ಅವುಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಒಳನೋಟವನ್ನು ಆಂತರ್ಯವನ್ನೂ ಅರಿತುಕೊಂಡರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಂಗೀತಾಸಕ್ತರು ಸಂಗೀತದ ಬಗ್ಗೆ ಮಾತ್ರವಲ್ಲದೆ, ಈ ಸಂಯೋಜನೆಗಳ ಹಿಂದಿನ ನಿಜವಾದ ಭಕ್ತಿಯನ್ನು ಸಂವಾದಾತ್ಮಕ ಪ್ರಶ್ನೋತ್ತರ ಅವಧಿಗಳ ಮೂಲಕ ಮತ್ತಷ್ಟು ತಿಳಿದುಕೊಂಡರು.

Param Foundation

ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಜತೆ ಗಾಯನ

ಈ ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ವಿಶೇಷ ಅವಕಾಶವೊಂದನ್ನು ಕಲ್ಪಿಸಲಾಗಿದ್ದು, ಬೆಂಗಳೂರಿನ ಕುಮಾರನ್ಸ್ ಶಾಲೆಯ ಆವರಣದಲ್ಲಿರುವ ಮೀನಾಕ್ಷಿ ರಂಗಮಂಚದಲ್ಲಿ ನವೆಂಬರ್ 22ರಂದು ಸಂಜೆ 5 ಗಂಟೆಯಿಂದ ಏರ್ಪಡಿಸಲಾಗಿರುವ ಮುಖ್ಯ ಕಾರ್ಯಕ್ರಮವಾದ 'ಭಜ ಮನ –ಭಕ್ತಿ ಸಂಗೀತ ಸಂಜೆ'ಯಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರೊಂದಿಗೆ ವೇದಿಕೆ ಹಂಚಿಕೊಂಡು ಭಕ್ತಿ ಗೀತೆ ಹಾಡಬಹುದು.

ವಿಂಟರ್ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ ರಾಯಲ್ ಲುಕ್ ಡಿಸೈನರ್ ಬ್ಲೌಸ್‌ಗಳಿವು

ಕಾರ್ಯಾಗಾರಕ್ಕೆ ಮೆಚ್ಚುಗೆ

ಈಗಾಗಲೇ ಮೂರು ದಿನಗಳ ಕಾಲ ನಡೆದಿರುವ ಕಾರ್ಯಾಗಾರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇದು ನಿಜಕ್ಕೂ ಅರ್ಥಪೂರ್ಣ ಹಾಗೂ ಕಲಿಕಾ ಶಿಬಿರವಾಗಿತ್ತು ಎಂಬುದಾಗಿ ಭಾಗವಹಿಸಿದವರು ಶ್ಲಾಘಿಸಿದ್ದಾರೆ. ಹಲವರು ಈ ಕಾರ್ಯಾಗಾರವನ್ನು ಭಕ್ತಿ ಸಂಗೀತದೊಂದಿಗಿನ ತಮ್ಮ ಪಯಣಕ್ಕೆ ಮತ್ತಷ್ಟು ಸ್ಪೂರ್ತಿ ನೀಡಿದೆ ಎಂದು ಬಣ್ಣಿಸಿದ್ದಾರೆ.