ಬೆಂಗಳೂರು: ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥಪೀಣ್ಯದ ಖಾಸಗಿ ಶಾಲೆಯಲ್ಲಿ ಭಾರತಿದರ್ಶ್ ಫೌಂಡೇಷನ್ ವತಿಯಿಂದ ಆಲದ ಮರದ ಸಸಿ ನೆಡುವಿಕೆ ಮತ್ತು ಶಾಲಾ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು.
ಸಾಲುಮರದ ತಿಮ್ಮಕ್ಕರವರಿಗೆ ಶ್ರಾದ್ಧಂಜಲಿ ಅರ್ಪಿಸಿ ಮೌನಾಚರಣೆ ಮಾಡಿ ಅವರ ನೆನಪಿ ನಲ್ಲಿ ಆಲದ ಮರದ ಸಸಿಗೆ ನೀರು ಹಾಕಿ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸ ಲಾಯಿತು.
500ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ದಂತ ತಪಾಸಣ ಮತ್ತು ಚಿಕಿತ್ಸೆಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಎಲ್ ಬಿ ಎಸ್ ಆಟೊಮೇಷನ್ ಸಿಸ್ಟಮ್ ಮಾಲೀಕ ಬಸವರಾಜ ಎನ್.ಕೆ ಮತ್ತು ಶ್ರೀಮತಿ ಲೀಲಾವತಿ ಪಿ.ಎಮ್, ಭೂಷಣ್, ಶ್ರೀಮತಿ ಮೋನಿಕ ಪ್ರಮೋದ್ ರವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಶ್ರೀಮತಿ ನರಸಮ್ಮ, ಶ್ರೀ. ಎಮ್ ಮುನಿರಾಜು, ಭಾರತಿ ದರ್ಶ್ ಫೌಂಡೇಷನ್ (ರಿ) ನ ಶ್ರೀ. ಶೈಲೇಂದ್ರ ಪಾಟೀಲ್ ಭಾಗವಹಿಸಿ ದ್ದರು.
ಇದನ್ನೂ ಓದಿ: Bangalore News: ಇಎಂಇಯಲ್ಲಿ ಬ್ರೂಸ್ ಲೀ ಮಣಿಯವರ ಮತ್ತು ಎಂ.ಡಿ. ಪಲ್ಲವಿ ಅವರ ಮಾಸ್ಟರ್‌ಕ್ಲಾಸ್
ನಾವು ಸಮಾಜಕ್ಕೆ ದೇಶಕ್ಕೆ ಏನನ್ನಾದರೂ ಕೊಡುಗೆ ಕೊಟ್ಟು ಅಜರಾಮರವಾಗಬೇಕು. ಭಾರತಾದ್ಯಂತ ಸಾಲು ಮರದ ತಿಮ್ಮಕ್ಕನವರ ಸ್ಮರಣಾರ್ಥ ಮುಂದಿನ ಎರಡು ವರ್ಷ ಗಳಲ್ಲಿ 10 ಸಾವಿರ ಆಲದ ಮರದ ಸಸಿಗಳನ್ನು ನೆಡುವ ಗುರಿ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು ಸಾಲು ಮರದ ತಿಮ್ಮಕ್ಕರವರು 1911 ಜೂನ್ 30 ರಂದು ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು, ನಂತರ ಅವರು ಶ್ರೀ. ಚಿಕ್ಕಯ್ಯರವರನ್ನು ವಿವಾಹವಾದರು.
ಸಾಲು ಮರದ ತಿಮ್ಮಕ್ಕರವರು ಮದುವೆಯಾಗಿ ಅನೇಕ ವರ್ಷವಾದರೂ ಮಕ್ಕಳಿಲ್ಲದ ಕೊರಗನ್ನು ತೊರೆದು ಹಾಕಲು ಅವರು ಹುಲಿಕಲ್ ಮತ್ತು ಕುದೂರು ತನಕ ತಮ್ಮ ಮಕ್ಕಳೆಂದು ಭಾವಿಸಿ ಒಟ್ಟು 8000 ಆಲದ ಮರದ ಸಸಿಯನ್ನು ನೆಟ್ಟರು ಅದಕ್ಕಾಗಿ ಪ್ರತಿ ನಿತ್ಯ ಹತ್ತಾರು ಮೈಲಿ ನಡೆದು ನೀರು ಹಾಕುತ್ತಿದ್ದರು. ಮುಂದೆ ಅ ಮರಗಳು ಹೆಮ್ಮರವಾಗಿ ಬೆಳದು ನಿಂತು ನೆರಳು, ಗಾಳಿ, ಒಳ್ಳೆಯ ವಾತವರಣ ನೀಡುತ್ತಿದ್ದಾವೆ. ನಾವು ಸಮಾಜಕ್ಕೆ ದೇಶಕ್ಕೆ ಏನನ್ನಾದರು ಕೊಡುಗೆ ಕೊಟ್ಟು ಅಜರಾಮರವಾಗಬೇಕು. ಭಾರತಾದ್ಯಂತ ಸಾಲು ಮರದ ತಿಮ್ಮಕ್ಕರ ಸ್ಮರನಾರ್ತಕವಾಗಿ ಮುಂದಿನ ಎರಡು ವರ್ಷಗಳಲ್ಲಿ 10 ಸಾವಿರ ಆಲದ ಮರದ ಸಸಿಗಳನ್ನು ನೆಡುವ ಗುರಿ ಇದೆ. ಸಾಲು ಮರದ ತಿಮ್ಮಕ್ಕರವರಿಗಿಂತ ಇನ್ನೊಬ್ಬ ಪರಿಸರವಾದಿಯನ್ನು ನೋಡುವುದು ಬಹಳ ಕಷ್ಟ. ಅವರು ರಾಜ್ಯ ಪ್ರಶಸ್ತಿ, ನಾಡೊಜ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಮುಂತಾದ ಸಾವಿರಾರು ಪ್ರಶಸ್ತಿಗಳಿಗೆ ಭಾಜನ ರಾಗಿದ್ದರು ಎಂದು ಭಾರತಿ ದರ್ಶ್ ಫೌಂಡೇಷನ್ (ರಿ) ನ ಶ್ರೀ. ಶೈಲೇಂದ್ರ ಪಾಟೀಲ್ ಹೇಳಿದರು.
ಸಾರ್ವಜನಿಕರು ಉಚಿತ ಶಸ್ತ್ರ, ಚಿಕಿತ್ಸೆ, ಪರಿಸರ ವಿಚಾರ, ಉಚಿತ ವೃದ್ಧಾಶ್ರಮ, ಉಚಿತ ಬಡ ಮಕ್ಕಳ ಶಿಕ್ಷಣ, ಬಡ ರೋಗಿಗಳಿಗೆ ಉಚಿತ ಆಂಬೂಲೆನ್ಸ್, ಕುಡಿಯುವ ನೀರಿನ ಸಮಸ್ಯೆ, ಪ್ಲಾಸ್ಟಿಕ್ ಮುಕ್ತ ಬೆಂಗಳೂರು, ವಿಕಲಾಂಗ ಮಕ್ಕಳ ಸಮಸ್ಯೆ ಉಚಿತ ಕಾನೂನು ಸಲಹೆಗಾಗಿ ನಮ್ಮ ಜಾಲ ತಾಣವನ್ನು .contact@bharathidarshfoundation.com ಸಾಲು ಮರದ ತಿಮ್ಮಕ್ಕರವರು 14-11-2025 ರಂದು ತಮ್ಮ 114 ನೆ ವಯಸ್ಸಿನಲ್ಲಿ ಮೃತರಾದರು ಆದರೆ ಅವರು ನೆಟ್ಟ ಸಾವಿರಾರು ಆಲದ ಮರಗಳು ಅಜರಾಮರ, ಮತ್ತೆ ಹುಟ್ಟಿಬಾ ಸಾಲು ಮರದ ತಿಮ್ಮಕ್ಕ ಎಂದು ಹೇಳಿದರು.