ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಕ್ಕಿ ಡಿಕ್ಕಿ: ಬೆಂಗಳೂರು-ಮುಂಬೈ ಇಂಡಿಗೋ ವಿಮಾನ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬ

Bird Strike: ಬೆಂಗಳೂರು-ಮುಂಬೈ ಇಂಡಿಗೋ ವಿಮಾನ ಟೇಕಾಫ್ ಆದಾಗ ಹಕ್ಕಿ ಡಿಕ್ಕಿ ಹೊಡೆದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನಲ್ಲಿ ನಡೆದಿದೆ. ಹೀಗಾಗಿ ಪೈಲಟ್ ಮತ್ತೆ ವಿಮಾನ ನಿಲ್ದಾಣಕ್ಕೆ ಮರಳಬೇಕಾಯಿತು. ಪರಿಣಾಮ ವಿಮಾನ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು.

ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.6: ಬೆಂಗಳೂರು-ಮುಂಬೈ ಇಂಡಿಗೋ ವಿಮಾನ ಟೇಕಾಫ್ ಆದಾಗ ಹಕ್ಕಿ ಡಿಕ್ಕಿ (Bird Strike) ಹೊಡೆದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport), ಬೆಂಗಳೂರಿನಲ್ಲಿ ನಡೆದಿದೆ. ಹೀಗಾಗಿ ಪೈಲಟ್ ಮತ್ತೆ ವಿಮಾನ ನಿಲ್ದಾಣಕ್ಕೆ ಮರಳಬೇಕಾಯಿತು. ಪರಿಣಾಮ ವಿಮಾನ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು. ಎರಡೂ ಎಂಜಿನ್‌ಗಳ ತಪಾಸಣೆ ಸೇರಿದಂತೆ ಅಗತ್ಯ ತಪಾಸಣೆಗಳ ನಂತರ, ಏರ್‌ಬಸ್ ಎ 321 ನಿಯೋ ವಿಮಾನವನ್ನು ಸುರಕ್ಷಿತವೆಂದು ಘೋಷಿಸಲಾಯಿತು.

ಒಂದು ಗಂಟೆಗೂ ಹೆಚ್ಚು ಸಮಯದ ನಂತರ ತನ್ನ ಪ್ರಯಾಣವನ್ನು ಮತ್ತೆ ಪ್ರಾರಂಭಿಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ ತಕ್ಷಣಕ್ಕೆ ತಿಳಿದುಬಂದಿಲ್ಲ. ವಿಮಾನವು ವೇಗವನ್ನು ಪಡೆದುಕೊಂಡು ಟೇಕ್ ಆಫ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಎಂಜಿನ್ ಸೇರಿದಂತೆ ಇತರ ಅಂಶಗಳನ್ನು ಪರಿಶೀಲಿಸಿದ ನಂತರ ವಿಮಾನ ಮತ್ತೆ ಹಾರಲು ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯಿತು ಎಂದು ಪ್ರಯಾಣಿಕ ಹೇಳಿದರು.

ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ flightradar.com ಪ್ರಕಾರ, ಇಂಡಿಗೋ ವಿಮಾನ 6E-6283 ಬೆಂಗಳೂರಿನಿಂದ ಮುಂಬೈಗೆ ಸಂಜೆ 7.04 ಕ್ಕೆ ಹೊರಡಬೇಕಿತ್ತು. ವಿಮಾನವು ಅಂತಿಮವಾಗಿ ರಾತ್ರಿ 8.46 ಕ್ಕೆ ತನ್ನ ಗಮ್ಯಸ್ಥಾನಕ್ಕೆ ಹೊರಟಿತು ಎಂದು ಮೂಲಗಳು ತಿಳಿಸಿವೆ.

Bengaluru Airport: ಬೆಂಗಳೂರು ವಿಮಾನ ನಿಲ್ದಾಣ ಈಗ ಮತ್ತಷ್ಟು ಸ್ಮಾರ್ಟ್‌; ಅಪಘಾತ ತಡೆಗೆ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಜಾರಿ

ಅಮೆರಿಕಕ್ಕೆ ವಾಪಸ್ ಬಂದ ಸ್ಪೇನ್‌ಗೆ ಹೊರಟ ವಿಮಾನ

ಬಾಂಬ್ ಭೀತಿಯ ಹಿನ್ನೆಲೆಯಲ್ಲಿ, ಸ್ಪೇನ್‌ಗೆ ಹೊರಟಿದ್ದ ವಿಮಾನವೊಂದು ಅಮೆರಿಕದ ನ್ಯೂಜೆರ್ಸಿಗೆ ತುರ್ತಾಗಿ ವಾಪಸಾದ ಘಟನೆ ನಡೆದಿದೆ. ಮೇ 30 ರ ಸಂಜೆ ನ್ಯೂಯಾರ್ಕ್‌ನ ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೇನ್‌ನ ಪಾಲ್ಮಾ ಡಿ ಮಲ್ಲೋರ್ಕಾಗೆ ಯುನೈಟೆಡ್ ಏರ್‌ಲೈನ್ಸ್‌ನ ವಿಮಾನ ಸಂಖ್ಯೆ 236 ಹೊರಟಿತ್ತು. ಬೋಯಿಂಗ್ 767 ಮಾದರಿಯ ಈ ವಿಮಾನದಲ್ಲಿ 190 ಪ್ರಯಾಣಿಕರು ಹಾಗೂ 12 ಜನ ಸಿಬ್ಬಂದಿ ಇದ್ದರು.

ಸಂಜೆ 6 ಗಂಟೆಗೆ ಹೊರಟ ವಿಮಾನವು ಸುಮಾರು ಮೂರು ಗಂಟೆಗಳ ಕಾಲ ಪ್ರಯಾಣಿಸಿದ ನಂತರ, ಭದ್ರತಾ ಕಾಳಜಿಯಿಂದಾಗಿ ಮತ್ತೆ ನೆವಾರ್ಕ್ ನಿಲ್ದಾಣದ ಕಡೆಗೆ ಮುಖ ಮಾಡಿ ರಾತ್ರಿ 9.37ರ ಸುಮಾರಿಗೆ ಸುರಕ್ಷಿತವಾಗಿ ಅಲ್ಲಿಯೇ ಇಳಿಯಿತು. ಮೂಲಗಳ ಪ್ರಕಾರ, ಪ್ರಯಾಣಿಕರೆಲ್ಲರಿಗೂ ತಮ್ಮ ಬ್ಲೂಟೂತ್ ಸಾಧನಗಳನ್ನು ಆಫ್ ಮಾಡಲು ಸೂಚಿಸಲಾಗಿತ್ತು. ಆದರೆ, ವಿಮಾನದ ಸಿಬ್ಬಂದಿ ಪರಿಶೀಲಿಸಿದಾಗ ಒಂದು ಸಾಧನವು ಸಕ್ರಿಯವಾಗಿದ್ದು, ಅದರ ಹೆಸರು ಬಾಂಬ್ ಎಂದು ತೋರಿಸುತ್ತಿತ್ತು. ಇದು ಸಿಬ್ಬಂದಿ ಹಾಗೂ ಏರ್‌ಲೈನ್ಸ್ ಕಾರ್ಯಾಚರಣೆ ತಂಡದಲ್ಲಿ ತೀವ್ರ ಆತಂಕ ಮೂಡಿಸಿತು. ಮುನ್ನೆಚ್ಚರಿಕ ಕ್ರಮವಾಗಿ ವಿಮಾನವನ್ನು ವಾಪಸ್ ತರಲಾಯಿತು.

ಭದ್ರತಾ ಸಿಬ್ಬಂದಿ ವಿಮಾನವನ್ನು ತೀವ್ರವಾಗಿ ಪರಿಶೀಲಿಸಿದರು. ಆ ಸಾಧನವು 16 ವರ್ಷದ ಹದಿಹರೆಯದ ಪ್ರಯಾಣಿಕನಿಗೆ ಸೇರಿದ ಫಿಟ್‌ಬಿಟ್ ವಾಚ್‌ ಎಂದು ಅಧಿಕಾರಿಗಳು ಪತ್ತೆಹಚ್ಚಿದರು. ಆ ಹುಡುಗ ತನ್ನ ಧರಿಸಬಹುದಾದ ಗ್ಯಾಜೆಟ್‌ಗೆ 'ಬಾಂಬ್' ಎಂದು ಹೆಸರಿಟ್ಟಿದ್ದೇ ಈ ಇಡೀ ಗೊಂದಲ ಮತ್ತು ಭೀತಿಗೆ ಕಾರಣವಾಗಿತ್ತು.