Road Accident: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ; 9 ವರ್ಷದ ಬಾಲಕಿ ಸಾವು
BMTC Bus Accident: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗೆ ಮತ್ತೊಂದು ಬಲಿಯಾಗಿದೆ. ಬಸ್ ಹರಿದು 9 ವರ್ಷದ ಬಾಲಕಿ ಸ್ಥಳಲ್ಲೇ ಸಾವನ್ನಪ್ಪಿರುವ ಘಟನೆ ರಾಜಾಜಿನಗರದ 1ನೇ ಬ್ಲಾಕ್ನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಭುವನಾ ಎಂದು ಗುರುತಿಸಲಾಗಿದೆ.

ಸಾಂದರ್ಭಿಕ ಚಿತ್ರ -

ಬೆಂಗಳೂರು, ಅ. 11: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯ ಬಸ್‌ಗೆ ಮತ್ತೊಂದು ಬಲಿಯಾಗಿದೆ. ಬಸ್ ಹರಿದ ಪರಿಣಾಮ 9 ವರ್ಷದ ಬಾಲಕಿ ಸ್ಥಳಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ರಾಜಾಜಿನಗರದ 1ನೇ ಬ್ಲಾಕ್ನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಭುವನಾ ಎಂದು ಗುರುತಿಸಲಾಗಿದೆ (Road Accident). ರಾಜಾಜಿನಗರದ 1ನೇ ಬ್ಲಾಕ್‌ನ ಸಿಗ್ನಲ್‌ನಲ್ಲಿ ಆಕೆ ನಿಂತಿದ್ದಾಗ ಬಿಎಂಟಿಸಿ ಬಸ್ ಬಂದು ಗುದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಾಲಕಿ ರಾಜಾಜಿನಗರದ ಪಾಂಚಜನ್ಯ ವಿದ್ಯಾಪೀಠ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಈಕೆ ಬಡಕುಟುಂಬದ ಹಿನ್ನೆಲೆಯವಳಾಗಿದ್ದು ಪೋಷಕರು ಜೋಳ ಮಾರಿಕೊಂಡು ಮಗಳನ್ನು ಓದಿಸುತ್ತಿದ್ದರು. ಇವರು ಮಹಾಲಕ್ಷ್ಮೀ ಲೇಔಟ್‌ನ ಬೋವಿ ಪಾಳ್ಯದಲ್ಲಿ ವಾಸಿಸುತ್ತಿದ್ದರು. ಸದ್ಯ ಮೃತದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಈ ಸುದ್ದಿಯನ್ನು ಓದಿ: Killer BMTC: ಮತ್ತೊಬ್ಬ ಬಾಲಕಿಯ ಬಲಿ ತೆಗೆದುಕೊಂಡ ಕಿಲ್ಲರ್ ಬಿಎಂಟಿಸಿ
ಬಿಎಂಟಿಸಿ ಬಸ್ ಹರಿದು 10 ವರ್ಷದ ಬಾಲಕ ಸಾವು
ಬೆಂಗಳೂರು: ಕೆಲವು ದಿನಗಳ ಹಿಂದೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು 10 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಅನಾಹುತ ಸಂಭವಿಸಿದೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಬಳಿ ಆಗಸ್ಟ್‌ನಲ್ಲಿ ಬಿಎಂಟಿಸಿ ಬಸ್ ಹರಿದು ಈ ದುರಂತ ನಡೆದಿತ್ತು. ಈ ವೇಳೆ ತಂದೆ ಜತೆಗೆ ಬಾಲಕ ದ್ವಿಚಕ್ರ ವಾಹನದಲ್ಲಿ ಬಾಲಕ ತೆರಳುತ್ತಿದ್ದ. ದೇವಸ್ಥಾನದ ಪೂಜಾರಿ ದಿಲೀಪ್ ಕುಮಾರ್ ಪುತ್ರ ಶಬರೀಶ್ (10) ಮೃತ ಬಾಲಕ.
ಜಿ.ಎಂ. ಪಾಳ್ಯದ ನಿವಾಸಿಯಾಗಿರುವ ಪೂಜಾರಿ ದಿಲೀಪ್ ಕುಮಾರ್ ಜತೆಗೆ ಪುತ್ರ ಶಬರೀಶ್ ತೆರಳುತ್ತಿದ್ದ. ಈ ವೇಳೆ ಬಸ್‌ಗೆ ಬಿಎಂಟಿಸಿ ಬಸ್ ಟಚ್ ಆಗಿದೆ. ಈ ಸಂದರ್ಭದಲ್ಲಿ ಪುತ್ರ ಶಬರೀಶ್ ಕೆಳಗೆ ಬಿದ್ದಿದ್ದಾನೆ. ಅವನ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿತ್ತು.