Bomb threat: ಯುವಕನಿಂದ ಪ್ರೀತಿ ಭಂಗ; ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಕರೆ : ಮಹಿಳಾ ಟೆಕ್ಕಿ ಆರೆಸ್ಟ್
Bengaluru Crime news: ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಗುಜರಾತ್ ಮೂಲದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ಳನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ರೆನೆ ಜೋಶಿಲ್ದಾ ಎನ್ನುವ ಮಹಿಳಾ ಟೆಕ್ಕಿಯನ್ನು ಆರೆಸ್ಟ್ ಮಾಡಿದ್ದಾರೆ. ಈಕೆ ಬೆಂಗಳೂರಿನ ಶಾಲೆಗಳಿಗೆ, ಜೊತೆಗೆ ಚೆನ್ನೈ, ಹೈದರಾಬಾದ್ ಹಾಗೂ ಗುಜರಾತಿನ ಶಾಲೆಗಳಿಗೂ ಕೂಡ ಈಕೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾಳೆ.
ಬಾಂಬ್ ಬೆದರಿಕೆ ಸಂದೇಶ ಕಳಿಸಿದ ರೆನೆ ಜೋಶಿಲ್ದಾ -
ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರು (Bengaluru) ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ (schools) ಇ-ಮೇಲ್ (E mail) ಮೂಲಕ ಬಾಂಬ್ ಬೆದರಿಕೆ (Bomb threat) ಸಂದೇಶ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಟೆಕ್ಕಿಯೊಬ್ಬಳನ್ನು (software engineer) ಆರೆಸ್ಟ್ ಮಾಡಲಾಗಿದೆ. ಈಕೆ ಯುವಕನೊಬ್ಬನಿಂದ ಪ್ರೇಮಭಗ್ನಕ್ಕೊಳಗಾಗಿದ್ದು, ಅದರಿಂದ ರೊಚ್ಚಿಗೆದ್ದು ಹೀಗೆ ಮಾಡಿದ್ದಳು ಎಂದು ಗೊತ್ತಾಗಿದೆ.
ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಗುಜರಾತ್ ಮೂಲದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ಳನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ರೆನೆ ಜೋಶಿಲ್ದಾ ಎನ್ನುವ ಮಹಿಳಾ ಟೆಕ್ಕಿಯನ್ನು ಆರೆಸ್ಟ್ ಮಾಡಿದ್ದಾರೆ. ಈಕೆ ಬೆಂಗಳೂರಿನ ಶಾಲೆಗಳಿಗೆ, ಜೊತೆಗೆ ಚೆನ್ನೈ, ಹೈದರಾಬಾದ್ ಹಾಗೂ ಗುಜರಾತಿನ ಶಾಲೆಗಳಿಗೂ ಕೂಡ ಈಕೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾಳೆ.
ಪೊಲೀಸರು ಈಕೆಯನ್ನು ವಿಚಾರಣೆಗೆ ಒಳಪಡಿಸಿದ್ದು, ಮಾನಸಿಕವಾಗಿ ಸಮಸ್ಯೆ ಹೊಂದಿರಬಹುದು ಎಂದೂ ಶಂಕಿಸಲಾಗಿದೆ. ಟೆಕ್ಕಿ ಆದ್ದರಿಂದ ವಿಪಿಎನ್ ಮೂಲಕ, ಸರ್ವರ್ ಮೂಲ ಗೊತ್ತಾಗದಂತೆ ಈಕೆ ಇಮೇಲ್ ಕಳಿಸುತ್ತಿದ್ದಳು. ಆದರೂ ಪೊಲೀಸರು ಈಕೆಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಇದನ್ನೂ ಓದಿ: Physical Assault: ಕುಟುಂಬದ ಮೇಲಿನ ದ್ವೇಷಕ್ಕೆ ಬಾಲಕಿ ಮೇಲೆ ಅತ್ಯಾಚಾರ? ಕತ್ತು ಸೀಳಿ ಸ್ಥಿತಿಯಲ್ಲಿ ಸಿಕ್ತು ಶವ
ಮೂಕ ವಿದ್ಯಾರ್ಥಿನಿಗೆ ಶಿಕ್ಷಕನ ಲೈಂಗಿಕ ಕಿರುಕುಳ
ಚಾಮರಾಜನಗರ: ಜಿಲ್ಲೆಯ (chamarajanagar) ಕೊಳ್ಳೇಗಾಲದಲ್ಲಿರುವ ಖಾಸಗಿ ವಾಕ್ ಮತ್ತು ಶ್ರವಣ ಶಾಲೆಯೊಂದರಲ್ಲಿ ವಿಶೇಷ ಚೇತನ ವಿದ್ಯಾರ್ಥಿನಿ ಮೇಲೆ ಶಿಕ್ಷಕರೊಬ್ಬರು ಲೈಂಗಿಕ ಕಿರುಕುಳ (Harassment) ನೀಡುತ್ತಿದ್ದ ಆಘಾತಕಾರಿ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಘಟನೆ ನಡೆದು 13 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ (Pocso case) ದಾಖಲಾಗಿದೆ.
ವಿದ್ಯಾರ್ಥಿನಿಗೆ ಮಾತನಾಡಲು ಬರದಿದ್ದರಿಂದ ಇದನ್ನೇ ಆರೋಪಿ ಲಾಭವಾಗಿ ಬಳಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಳ್ಳೇಗಾಲದಲ್ಲಿ 2012-2013ನೇ ಸಾಲಿನಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವೇಳೆ ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ಕಳೆದ 1 ವಾರದ ಹಿಂದೆ ಶಾಲೆಯಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಭೆಯಲ್ಲಿ ಸಂತ್ರಸ್ತೆ ಈ ವಿಚಾರವನ್ನು ಬಿಚ್ಚಿಟ್ಟಿದ್ದಾಳೆ. ಬಳಿಕ ಸಂತ್ರಸ್ತೆ ಕೊಟ್ಟ ಮಾಹಿತಿ ಮೇರೆಗೆ ಶಾಲೆಯ ಸಿಇಒ ದೂರು ನೀಡಿದ್ದು, ಇದೀಗ ಕೊಳ್ಳೇಗಾಲ ಪೊಲೀಸರು ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ. ಆಕೆಯ ಹೇಳಿಕೆಯ ಆಧಾರದ ಮೇಲೆ, ಅಕ್ಟೋಬರ್ 30ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಪ್ರಕರಣ ದಾಖಲಾಗಿದೆ. ಇನ್ನೂ ಆರೋಪಿಯನ್ನು ಬಂಧಿಸಲಾಗಿಲ್ಲ, ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.