ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಖಾಸಗಿ ಹೂಡಿಕೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್(Minister K.J. George) ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಪ್ರವಾಸೋದ್ಯಮ ನೀತಿಯ 6ನೇ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ರಾಜ್ಯದ ಹೋಟೆಲ್ ವಲಯದ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಪ್ರವಾಸೋದ್ಯಮ ನೀತಿಯಡಿ 8 ಪ್ರೀಮಿಯಂ ಹಾಗೂ 10 ಬಜೆಟ್ ಹೋಟೆಲ್ ಸೇರಿದಂತೆ ಒಟ್ಟು 18 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳ ಮೂಲಕ ರಾಜ್ಯದ ಪ್ರವಾಸೋ ದ್ಯಮ ವಲಯದಲ್ಲಿ 314.93 ಕೋಟಿ ಹೂಡಿಕೆಯಾಗಿದ್ದು, 655 ಹೋಟೆಲ್ ಕೊಠಡಿಗಳು ಸೇರ್ಪಡೆ ಯಾಗಿವೆ ಹಾಗೂ 1542 ಉದ್ಯೋಗಗಳು ಸೃಷ್ಟಿಯಾಗಿವೆ. ಈ ಯೋಜನೆಗಳಿಗೆ ಅಂದಾಜು 47.23 ಕೋಟಿ ರು. ಸಹಾಯಧನ ನೀಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಇದನ್ನೂ ಓದಿ: Bangalore News: ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ
2024-29ರ ನೀತಿಯಲ್ಲಿ 1080.97 ಕೋಟಿ ಹೂಡಿಕೆ ಸಭೆಯಲ್ಲಿ 2024-29ರ ಕರ್ನಾಟಕ ಪ್ರವಾಸೋ ದ್ಯಮ ನೀತಿಯಡಿ 35 ಪ್ರೀಮಿಯಂ ಹಾಗೂ 43 ಬಜೆಟ್ ಹೋಟೆಲ್‌ಗಳು ಸೇರಿದಂತೆ ಒಟ್ಟು 78 ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಲಾಯಿತು. ಈ ಯೋಜನೆಗಳು ಅನುಷ್ಠಾನಗೊಂಡ ಬಳಿಕ ರಾಜ್ಯದಲ್ಲಿ 1080.97 ಕೋಟಿ ಹೂಡಿಕೆಯಾಗಲಿದ್ದು, 3424 ಹೊಸ ಹೋಟೆಲ್ ಕೊಠಡಿಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಇದರೊಂದಿಗೆ 3707 ಉದ್ಯೋಗಗಳು ಸೃಷ್ಟಿಯಾಗಲಿವೆ. ಹೊಸ ಹೋಟೆಲ್ ಯೋಜನೆಗಳಿಂದ ಪ್ರವಾಸಿ ತಾಣಗಳಲ್ಲಿ ಗುಣಮಟ್ಟದ ವಸತಿ ಸೌಲಭ್ಯ ಹೆಚ್ಚುವುದರ ಜೊತೆಗೆ, ಖಾಸಗಿ ಹೂಡಿಕೆ, ಸ್ಥಳೀಯ ಉದ್ಯೋಗ ಹಾಗೂ ಪ್ರವಾಸೋದ್ಯಮ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಸಭೆಯಲ್ಲಿ ಕೆಎಸ್‌ಟಿಡಿಸಿ ಅಧ್ಯಕ್ಷ ಎಂ. ಶ್ರೀನಿವಾಸ್, ಇಲಾಖೆ ಕಾರ್ಯದರ್ಶಿ ಡಾ.ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿ ದ್ದರು.
ಪ್ರಮುಖಾಂಶ
ಪ್ರವಾಸೋದ್ಯಮ ನೀತಿಯಲ್ಲಿ 8 ಪ್ರೀಮಿಯಂ, 10 ಬಜೆಟ್ ಹೋಟೆಲ್ ಯೋಜನೆಗಳಿಗೆ ಅನುಮೋದನೆ
655 ಹೊಸ ಕೊಠಡಿಗಳ ಸೇರ್ಪಡೆ; 1542 ಉದ್ಯೋಗ ಸೃಷ್ಟಿ, ಅಂದಾಜು 47.23 ಕೋಟಿ ಸಹಾಯಧನ
314.93 ಕೋಟಿ ರುಪಾಯಿ ಮೊತ್ತದ 18 ಹೋಟೆಲ್ ಯೋಜನೆಗಳಿಗೆ ಸಹಾಯಧನದ ಅನುಮೋದನೆ
![]()
ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿದ್ದು, ಅದಕ್ಕೆ ಪೂರಕವಾಗಿ ಗುಣಮಟ್ಟ ದ ವಸತಿ ಮತ್ತು ಆತಿಥ್ಯ ಮೂಲಸೌಕರ್ಯವನ್ನು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ. ಹೊಸ ಪ್ರವಾಸೋದ್ಯಮ ನೀತಿಯಡಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವುದರೊಂದಿಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. 1080 ಕೋಟಿಗೂ ಹೆಚ್ಚಿನ ಹೂಡಿಕೆಯೊಂದಿಗೆ 78 ಹೊಸ ಹೋಟೆಲ್ ಯೋಜನೆಗಳಿಗೆ ದೊರೆತಿರುವ ತಾತ್ವಿಕ ಅನುಮೋದನೆ ರಾಜ್ಯದ ಪ್ರವಾಸೋದ್ಯಮ ವಲಯದ ಬೆಳವಣಿಗೆಗೆ ಉತ್ತಮ ಸೂಚನೆಯಾಗಿದೆ.
- ಕೆ.ಜೆ.ಜಾರ್ಜ್, ಪ್ರವಾಸೋದ್ಯಮ ಸಚಿವ