ಬೆಂಗಳೂರು: ಯುಕೆ ಸರ್ಕಾರದ ಅಂತರರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯಾದ ಬ್ರಿಟಿಷ್ ಕೌನ್ಸಿಲ್ ಇಂದು ಬೆಂಗಳೂರಿನ ಅಂತರಾಷ್ಟ್ರೀಯ ಕೇಂದ್ರದಲ್ಲಿ ತನ್ನ ಮೊದಲ ಆವೃತ್ತಿಯ “ಕ್ರಿಯೇಟಿವ್ ಕನ್ವರ್ಜೆನ್ಸ್: ಗ್ರೋತ್ ರೀಇಮ್ಯಾಜಿನ್”( ಸೃಜನ ಶೀಲ ಸಮ್ಮಿಲನ: ಬೆಳವಣಿಗೆಯ ಪುನರ್ವಿನ್ಯಾಸ) ಕಾರ್ಯಕ್ರಮವನ್ನು ಉದ್ಘಾಟಿಸಿತು.
ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ಉತ್ತಮವಾದ ಸಹಕಾರವನ್ನು ಆಚರಿಸುವ ಸಲುವಾಗಿ ಭವಿಷ್ಯದ ಆರ್ಥಿಕತೆಯ ಪುನರ್ವಿನ್ಯಾಸ ಗೊಳಿಸಲು ಒಂದಷ್ಟು ಕಲಾತ್ಮಕ ಪ್ರದರ್ಶನಗಳು, ಚಿಂತನೆಗೊಳಪಡಿಸುವ ಚರ್ಚೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬ್ರಿಟಿಷ್ ಕೌನ್ಸಿಲ್ʼನ ಅಂತರರಾಷ್ಟ್ರೀಯ ಸೃಜನಾತ್ಮಕ ಜಾಲಗಳನ್ನು ಬಲಪಡಿಸುವ ಪ್ರಯತ್ನ ಇದಾಗಿದ್ದು, 2025ರ ಮೇ ತಿಂಗಳಲ್ಲಿ ಯುಕೆ ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡೆ ಸಚಿವರು ಹಾಗೂ ಭಾರತದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರು ಸಹಿ ಮಾಡಿದ್ದ “ಇಂಡಿಯಾ–ಯುಕೆ ಪ್ರೋಗ್ರಾಂ ಆಫ್ ಕಲ್ಚರಲ್ ಕೋ-ಆಪರೇಶನ್ (2025–2030)”ನ ಉದ್ದೇಶಗಳನ್ನು ಮುಂದುವರಿಸುತ್ತದೆ.
ಇದು ಸಾಂಸ್ಕೃತಿಕ ಸಂಬಂಧಗಳನ್ನು ಇನ್ನಷ್ಟು ಅಧಿಕಗೊಳಿಸುವುದರ ಜೊತೆಗೆ, ಸೃಜನಾ ತ್ಮಕತೆಯು ಆರ್ಥಿಕ ಬೆಳವಣಿಗೆ ಮತ್ತು ಸಾಮಾ ಜಿಕ ಬದಲಾವಣೆಗೆ ಹೇಗೆ ಉತ್ತೇಜನ ನೀಡಬಹುದು ಎಂಬುದನ್ನು ತಿಳಿಸಿ ಕೊಡುವುದಾಗಿದೆ.
ಇದನ್ನೂ ಓದಿ: Bangalore News: ಸಾಹಸಮಯ ಥಂಡರ್ಬೋಲ್ಟ್ ಬೈಕ್ ಬಿಡುಗಡೆ ಮಾಡಿದ ಕ್ಲಾಸಿಕ್ ಲೆಜೆಂಡ್ ಸಹಭಾಗಿತ್ವದ ಬಿಎಸ್‌ಎ
ಕಾರ್ಯಕ್ರಮದ ಮೊದಲ ದಿನ 200 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಮುಖ ಅತಿಥಿಗಳಾಗಿ ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಉಪ ಆಯುಕ್ತರಾದ ಚಂದ್ರು ಅಯ್ಯರ್, ಬ್ರಿಟಿಷ್ ಕೌನ್ಸಿಲ್ ಇಂಡಿಯಾ ನಿರ್ದೇಶಕರಾದ ಅಲಿಸನ್ ಬ್ಯಾರೆಟ್ , ಬ್ರಿಟಿಷ್ ಕೌನ್ಸಿಲ್ ನ ದಕ್ಷಿಣ ಭಾರತದ ನಿರ್ದೇಶಕಿಯಾದ ಜನಕಾ ಪುಷ್ಪನಾಥನ್, ಮತ್ತು ಆರ್ಟ್ಸ್ ಇಂಡಿಯಾ ನಿರ್ದೇಶಕಿ ಹೇಮಾ ಸಿಂಗ್ ರೇನ್ಸ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ‘ಇಂಡಿಯಾ-ಯುಕೆ ಪ್ರೋಗ್ರಾಂ ಆಫ್ ಕಲ್ಚರಲ್ ಕೋ-ಆಪರೇಶನ್ (2025–2030)’ನ ಮುಂದುವರಿಕೆಯ ಪ್ರಮುಖ ಹಂತವೆಂದು ಪರಿಗಣಿಸಲಾಗಿದೆ . ಇತ್ತೀಚಿಗೆ ಯುಕೆ ಪ್ರಧಾನಮಂತ್ರಿ ಕಿಯರ್ ಸ್ಟಾರ್ಮರ್ ಅವರ ಭಾರತ ಭೇಟಿಯು ಎರಡೂ ದೇಶಗಳ ‘ಸ್ಟ್ರಾಟೆಜಿಕ್ ಪಾಲುದಾರಿಕೆ – ವೀಷನ್ 2035’ ಕ್ಕೆ ಮತ್ತಷ್ಟು ಬಲ ನೀಡಿದ್ದು, ಸೃಜನಾತ್ಮಕ ಅರ್ಥವ್ಯವಸ್ಥೆಯನ್ನು ಪ್ರಮುಖ ಸಹಕಾರ ಕ್ಷೇತ್ರವಾಗಿ ಗುರುತಿಸುವಂತೆ ಮಾಡಿದೆ.
ಚಂದ್ರು ಅಯ್ಯರ್ ರವರ ಉದ್ಘಾಟನಾ ಭಾಷಣದ ನಂತರ, “ಫ್ರಮ್ ಲೋಕಲ್ ಸ್ಟೋರೀಸ್ ಟು ಗ್ಲೋಬಲ್ ಸ್ಟೇಜಸ್: ಸ್ಕೇಲಿಂಗ್ ಇಂಡಿಯಾಸ್ ಕ್ರಿಯೇಟಿವ್ ಟ್ಯಾಲೆಂಟ್ ಅಂಡ್ ಇಂಡ ಸ್ಟ್ರೀಸ್ ಫಾರ್ ವರ್ಲ್ಡ್ವೈಡ್ ಇಂಪ್ಯಾಕ್ಟ್” ಎಂಬ ಸೆಷನ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಲಿಸನ್ ಬ್ಯಾರೆಟ್, “ಬ್ರಿಟಿಷ್ ಕೌನ್ಸಿಲ್ ಹಲವಾರು ದಶಕಗಳಿಂದ ಸೃಜನಾತ್ಮಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನಾವು ಸಾಧಿಸಿದ ಪ್ರಗತಿಯು ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ಒಪ್ಪಂದಗಳಿಂದ ಮಾತ್ರ ವಲ್ಲ, ಭಾರತವು ಉ20 ಅಧ್ಯಕ್ಷತೆಯಡಿ ಸೃಜನಾತ್ಮಕ ಮತ್ತು ಸಾಂಸ್ಕೃತಿಕ ಉದ್ಯಮಗಳಿಗೆ ನೀಡಿದ ಆದ್ಯತೆಯಿಂದಲೂ ಸಾಧ್ಯವಾಗಿದೆ. ಈ ಕ್ಷೇತ್ರವು ಭಾರತದ ಆಧುನಿಕ ರೂಪವನ್ನು ವಿಶ್ವದ ಮುಂದಿಡಲು ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರವನ್ನು ಬಲಪಡಿಸಲು ಸಹಕಾರ ನೀಡುತ್ತದೆ” ಎಂದರು.