ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census: ಇಂದಿನಿಂದ ಬೆಂಗಳೂರಿನಲ್ಲಿ ಜಾತಿ ಗಣತಿ, ತಪ್ಪದೇ ಮಾಹಿತಿ ನೀಡಿ

Bengaluru: ಇಂದಿನಿಂದ ಗ್ರೇಟರ್‌ ಬೆಂಗಳೂರು ಪ್ರದೇಶದ (ಜಿಬಿಎ) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಆರಂಭವಾಗಲಿದೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆ ಸಿಬ್ಬಂದಿಗಳಿಂದ ಸಮೀಕ್ಷೆ ನಡೆಯಲಿದೆ. ಬೆಸ್ಕಾಂ ಕನೆಕ್ಷನ್ ಆಧಾರದ ಮೇರೆಗೆ ಮನೆ ಮನೆ ಸರ್ವೇ ನಡೆಸಲು ಪಾಲಿಕೆ ಸಿಬ್ಬಂದಿ ಸಜ್ಜಾಗಿದ್ದಾರೆ.

ಇಂದಿನಿಂದ ಬೆಂಗಳೂರಿನಲ್ಲಿ ಜಾತಿ ಗಣತಿ, ತಪ್ಪದೇ ಮಾಹಿತಿ ನೀಡಿ

-

ಹರೀಶ್‌ ಕೇರ ಹರೀಶ್‌ ಕೇರ Oct 4, 2025 9:32 AM

ಬೆಂಗಳೂರು: ರಾಜ್ಯದೆಲ್ಲೆಡೆ ಜಾತಿ ಗಣತಿ (Caste Census) ನಡೆಯುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (Social and Educational Survey) ಇಂದಿನಿಂದ ಆರಂಭವಾಗಲಿದೆ. ಸಿಬ್ಬಂದಿಗಳ ಕೊರತೆಯಿಂದ ತಡವಾಗಿ ಅಂದರೆ ಇಂದಿನಿಂದ ಸಮೀಕ್ಷೆ ಶುರುವಾಗುತ್ತಿದ್ದು, ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಲಿದ್ದಾರೆ. ಒಟ್ಟು 32 ಲಕ್ಷ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆದಾರರು ಸಮೀಕ್ಷೆ ನಡೆಸಲಿದ್ದಾರೆ.

ಇಂದಿನಿಂದ ಗ್ರೇಟರ್‌ ಬೆಂಗಳೂರು ಪ್ರದೇಶದ (ಜಿಬಿಎ) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಆರಂಭವಾಗಲಿದೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆ ಸಿಬ್ಬಂದಿಗಳಿಂದ ಸಮೀಕ್ಷೆ ನಡೆಯಲಿದೆ. ಬೆಸ್ಕಾಂ ಕನೆಕ್ಷನ್ ಆಧಾರದ ಮೇರೆಗೆ ಮನೆ ಮನೆ ಸರ್ವೇ ನಡೆಸಲು ಪಾಲಿಕೆ ಸಿಬ್ಬಂದಿ ಸಜ್ಜಾಗಿದ್ದಾರೆ. ಸಮೀಕ್ಷೆಗೆ ಒಟ್ಟು 17 ಸಾವಿರ ಸಿಬ್ಬಂದಿಗಳನ್ನು ಜಿಬಿಎ ನಿಯೋಜಿಸಿದೆ. ಐದು ಪಾಲಿಕೆಯಲ್ಲಿ 17 ಸಾವಿರ ಸಿಬ್ಬಂದಿಗಳಿಂದ 15 ದಿನದಲ್ಲಿ ಸಮೀಕ್ಷೆ ಮುಗಿಸುವ ಟಾರ್ಗೆಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

17 ಸಾವಿರ ಸಿಬ್ಬಂದಿಯಿಂದ ಸಮೀಕ್ಷೆ

ರಾಜ್ಯದಲ್ಲಿ ಸಮೀಕ್ಷೆ ಶುರುವಾಗಿ 12 ದಿನಗಳು ಕಳೆದಿವೆ. 12 ದಿನಗಳ ಬಳಿಕ ಬೆಂಗಳೂರಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭವಾಗ್ತಿದೆ. ಸಮೀಕ್ಷೆಗೆ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದೆ. ಹೀಗಾಗಿ, ಬೇರೆ ಬೇರೆ ಇಲಾಖೆಗಳಿಗೆ ನೋಟಿಸ್‌ ನೀಡಿ ಸುಮಾರು 17 ಸಾವಿರ ನೌಕರರನ್ನು ಸಮೀಕ್ಷಾ ಕಾರ್ಯಕ್ಕೆ ಪಡೆಯಲಾಗಿದೆ.

ನಿನ್ನೆ ಸಮೀಕ್ಷೆ ಬಗ್ಗೆ ಮೈಸೂರಿನಲ್ಲಿ ಮಾತಾಡಿದ್ದ ಸಿಎಂ ಸಿದ್ದರಾಮಯ್ಯ ಅವ್ರು ಜಾತಿ ಜನಗಣತಿ ತೃಪ್ತಿ ತಂದಿದ್ದು, ಮೂರು ದಿನಗಳಲ್ಲಿ ಸಮೀಕ್ಷೆ ಮುಗಿಸ್ತೀವಿ ಎಂದಿದ್ದಾರೆ. ಈವರೆಗೆ ಮೂರು ಕೋಟಿ ಜನರ ಸಮೀಕ್ಷೆ ಮುಗಿದಿದೆ. ಸುಮಾರು 80 ಲಕ್ಷ ಮನೆಗಳ ಸರ್ವೆ ಕಾರ್ಯ ಪೂರ್ಣವಾಗಿದೆ ಎಂದಿದ್ದಾರೆ. ಇದು ಕೇವಲ ಜಾತಿ ಗಣತಿ ಅಲ್ಲ. ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿ, ಸ್ವತಂತ್ರ ಬಂದ್ಮೇಲೆ ಜನರ ಜೀವನ ಮಟ್ಟ ಹೇಗಿದೆ ಎಂಬುದರ ಕುರಿತು ವರದಿ ಸಿದ್ಧಪಡಿಸ್ತಿದ್ದೀವಿ. ಈ ಅಂಕಿ ಅಂಶಗಳ ಆಧಾರದ ಮೇಲೆ ಸರ್ಕಾರ ಯೋಜನೆ ರೂಪಿಸಲು ಸಹಕಾರಿ ಆಗುತ್ತೆ. ಮೂರು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳದಿದ್ದರೆ ಅವಧಿ ಮುಂದುವರಿಸ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: CM Siddaramaiah: ಸಮೀಕ್ಷೆಯಿಂದ ಮುಂದುವರಿದ ಜಾತಿಗಳ ಬಡವರ ಸ್ಥಿತಿಗತಿಯೂ ತಿಳಿಯಲಿದೆ: ಸಿಎಂ