ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂತರರಾಷ್ಟ್ರೀಯ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ದಿನದ ಆಚರಣೆ

ಎಲ್ಲರಿಗೂ ನ್ಯಾಯಯುತ, ಅಂತರ್ಗತ, ಸಮಾನ ಮತ್ತು ಸುಸ್ಥಿರ ಜಗತ್ತಿಗೆ ಜಾಗತಿಕ ಬದ್ಧತೆಯನ್ನು ಪುನರುಚ್ಚರಿಸಲು, "ಅನುಕಂಪ ಬೇಡ ಅವಕಾಶ ಕೊಡಿ ಎಂಬ ಉದ್ದೇಶದಿಂದ" ಅಂತರರಾಷ್ಟ್ರೀಯ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ದಿನವನ್ನು ಕೇಕ್ ಕತ್ತರಿಸಿ ಆಕರ್ಷಕವಾಗಿ ಆಚರಿಸಲಾಯಿತು.

ಬೆಂಗಳೂರು: ಬೆಂಗಳೂರಿನ ವಿನ್ಯಾಸ ವಿಕಲಚೇತನರ ಸಂಸ್ಥೆಯಲ್ಲಿ, ವಿದ್ಯಾರ್ಥಿಗಳೊಂದಿಗೆ "ವಿಶ್ವ ಅಂಗವಿಕಲರ ದಿನಾಚರಣೆ" ಅಂಗವಾಗಿ ಕೇಕ್ ಕತ್ತರಿಸಿ ಆಕರ್ಷಕವಾಗಿ ಆಚರಿಸಲಾಯಿತು.

ಅಂಗವೈಕಲ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳು ಮತ್ತು ಯೋಗಕ್ಷೇಮ ವನ್ನು ಉತ್ತೇಜಿಸಲು ಮತ್ತು ಸಮಾಜದಲ್ಲಿ ಅವರ ಸಂಪೂರ್ಣ ಏಕೀಕರಣ ಉತ್ತೇಜಿಸಲು, ಎಲ್ಲರಿಗೂ ನ್ಯಾಯಯುತ, ಅಂತರ್ಗತ, ಸಮಾನ ಮತ್ತು ಸುಸ್ಥಿರ ಜಗತ್ತಿಗೆ ಜಾಗತಿಕ ಬದ್ಧತೆಯನ್ನು ಪುನರುಚ್ಚರಿಸಲು, "ಅನುಕಂಪ ಬೇಡ ಅವಕಾಶ ಕೊಡಿ ಎಂಬ ಉದ್ದೇಶದಿಂದ" ಅಂತರರಾಷ್ಟ್ರೀಯ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ದಿನವನ್ನು ಆಚರಿಸಲಾಯಿತು.

ಇದನ್ನೂ ಓದಿ: Bangalore News: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಕಿ.ಮೀ ಉದ್ದ ಕನ್ನಡ ಧ್ವಜದ ಮೆರವಣಿಗೆ

ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ.ಸಿ, ಸಂಸ್ಥೆಯ ಸಂಸ್ಥಾಪಕರಾದ ಅಬ್ದುಲ್ ಜಾವಿದ್ ರವರು ವಿಕಲಚೇತನ ಮಕ್ಕಳೊಡನೆ ಉಪಸ್ಥಿತರಿದ್ದರು.