C.J. Roy: ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ ಸಿ.ಜೆ. ರಾಯ್‌ಗಿದ್ದ ನಂಟು ಎಂಥದ್ದು?
C.J. Roy: ಕಾನ್ಫಿಡೆಂಟ್ ಗ್ರೂಪ್ಸ್ನ ಚೇರ್ಮನ್ ಸಿ.ಜೆ ರಾಯ್ ಅವರು ಆತ್ಮಹತ್ಯೆಗೆ 9 ಶರಣಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಇವರು ಸಮಾಜ ಸೇವೆಯ ಮೂಲಕ ಕೂಡ ಗುರುತಿಸಿಕೊಂಡಿದ್ದರು. ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿದ್ದರು. ಜೆಸಿ ರಾಯ್ ಅವರಿಗೆ ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ ಹತ್ತಿರದ ಬಂಧ ಇತ್ತು.
ಸಿ.ಜೆ. ರಾಯ್ -
ಕಾನ್ಫಿಡೆಂಟ್ ಗ್ರೂಪ್ಸ್ನ ಚೇರ್ಮನ್ ಸಿ.ಜೆ ರಾಯ್ (C.J. Roy) ಅವರು ಆತ್ಮಹತ್ಯೆಗೆ 9 ಶರಣಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಇವರು ಸಮಾಜ ಸೇವೆಯ ಮೂಲಕ ಕೂಡ ಗುರುತಿಸಿಕೊಂಡಿದ್ದರು. ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿದ್ದರು. ಜೆಸಿ ರಾಯ್ ಅವರಿಗೆ ಸಿನಿಮಾ ಮತ್ತು ಟಿವಿ (Entertainment Industry) ಜಗತ್ತಿನೊಂದಿಗೆ ಹತ್ತಿರದ ಬಂಧ ಇತ್ತು.
ಸಿನಿಮಾ ನಿರ್ಮಾಣದಲ್ಲೂ ಸೈ
ಕ್ಯಾಸನೋವ್ವಾ (2012), ಲೇಡೀಸ್ ಅಂಡ್ ಜಂಟಲ್‌ಮನ್ (2013), ಮೇ ಹೂಮ್ ಮೂಸಾ (2022), ಮತ್ತು ಐಡೆಂಟಿಟಿ (2025) ಸೇರಿವೆ. ದೊಡ್ಡ ಬಜೆಟ್ ಚಲನಚಿತ್ರ ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ (2021) ಅನ್ನು ಸಹ-ನಿರ್ಮಿಸಿದ್ದಾರೆ. ಕ್ರೇಜಿ ಲೋಕ (2012) ಮತ್ತು ರಾಧನಾ ಗಂಡ (2013) ನಂತಹ ಚಲನಚಿತ್ರಗಳನ್ನು ಒಳಗೊಂಡಿದೆ. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ರಾಯ್ ಅವರು 12 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರಂತೆ.
ಇದನ್ನೂ ಓದಿ: Big Boss Kannada TRP: ಭರ್ಜರಿ ಟಿಆರ್ಪಿ ಪಡೆದು ಹೊಸ ದಾಖಲೆ ಬರೆದ ಬಿಗ್ ಬಾಸ್ ಕನ್ನಡ! ಸೀರಿಯಲ್‌ಗಳ ಕಥೆ ಏನು?
ಬಿಗ್ಬಾಸ್ ಕನ್ನಡ 11ನೇ ಸೀಸನ್
ಹಲವಾರು ರಿಯಾಲಿಟಿ ಶೋಗಳಿಗೆ ಅವರು ಪ್ರಮುಖ ಸ್ಪಾನ್ಸರ್ ಆಗಿದ್ದರು. ಬಿಗ್ಬಾಸ್ ಕನ್ನಡ 11ನೇ ಸೀಸನ್ಗೆ ಮೊದಲ ಬಹುಮಾನವಾದ 50 ಲಕ್ಷ ರೂಪಾಯಿಗಳನ್ನು ರಾಯ್ ಅವರೇ ನೀಡಿದ್ದರು. ಮಲಯಾಳಂ ಬಿಗ್ಬಾಸ್ಗೂ ಸಹ ಸ್ಪಾನ್ಸರ್ ಆಗಿದ್ದರು ರಾಯ್.
ದಕ್ಷಿಣ ಭಾರತದ ಸಿನಿಮಾಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ ಸೈಮಾಕ್ಕೆ ಎಂಟು ವರ್ಷಗಳ ಕಾಲ ಮುಖ್ಯ ಸ್ಪಾನ್ಸರ್ ಆಗಿದ್ದಿದ್ದು ರಾಯ್ ಅವರ ಕಾನ್ಫಿಡೆಂಟ್ ಗ್ರೂಪ್. ಸ್ಟಾರ್ ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ಒಳ್ಳೆಯ ಸ್ನೇಹಿತರಾಗಿದ್ದರು. ಕಿಚ್ಚ ಸುದೀಪ್ ಅವರ ಆಪ್ತರೂ ಸಹ ಆಗಿದ್ದರು ರಾಯ್.
ರಾಯ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಅಂದದರೆ ಸುಮಾರು 25 ವರ್ಷ ವಯಸ್ಸಿನಲ್ಲಿರುವಾಗ ಮಾರುತಿ 800 ಕಾರನ್ನು ಖರೀದಿಸಿದ್ದರು. ಒಂದು ಸಮಯದಲ್ಲಿ ಮನಸ್ಸು ಇಲ್ಲದ್ದಿದ್ದರೂ ಮಾರಾಟ ಮಾಡಿದ್ದರು.
ಆದರೆ ಇತ್ತೀಚಿಗೆ ಆ ಕಾರನ್ನು ಮತ್ತೆ ಪಡೆಯಲು ರಾಯ್ ಅವರು ನಿರ್ಧರಿಸಿದ್ದರು. ಕಾರಿನ ಸಂಖ್ಯೆ ಮತ್ತು ಹಳೆ ದಾಖಲೆಗಳ ಮೂಲಕ ಮತ್ತೆ ಕಾರನ್ನು ಪತ್ತೆ ಮಾಡಿಸಿದ್ದರು. ಕಾರನ್ನು ಪತ್ತೆ ಮಾಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡಿದ್ದರು. ಈ ಬಗ್ಗೆ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: C.J. Roy: ಕೋಟ್ಯಂತರ ಆಸ್ತಿ, ಐಷಾರಾಮಿ ಕಾರುಗಳಿದ್ರೂ ಹಳೆಯ ಮಾರುತಿ 800 ಖರೀದಿಸಿದ್ದ ಉದ್ಯಮಿ ಸಿ.ಜೆ. ರಾಯ್!
ಉದ್ಯಮಿ ಸಿ.ಜೆ ರಾಯ್ ಅವರು ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿದ್ದರು. ಬಿಗ್ ಬಾಸ್ 11ರ ಸಿಸನ್ ವಿನ್ನರ್ ಹನುಮಂತುಗೆ 50 ಲಕ್ಷ ರೂ. ನೀಡಿದ್ದರು, ಇದಷ್ಟೇ ಅಲ್ಲದೇ 1 ಕೋಟಿ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದರು. ಪರೀಕ್ಷೆಯಲ್ಲಿ 80 ಪರ್ಸೆಂಟ್ ಮಾರ್ಕ್ ಪಡೆದಿದ್ದ 201 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಈ ಹಣವನ್ನು ಮೀಸಲಿಟ್ಟಿದ್ದರು.