ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

M.R. Poovamma: ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮಗೆ ಸಿಎಂ ಡಿಕೆಶಿ ಅಭಿನಂದನೆ; ಕ್ರೀಡಾಪಟುಗಳಿಗೆ ಬೆಂಬಲದ ಭರವಸೆ

Asian Games 2026: ದೂರವಾಣಿಯಲ್ಲಿ ಎಂ.ಆರ್‌. ಪೂವಮ್ಮ ಜತೆ ಮಾತನಾಡಿರುವ ಸಿಎಂ ಡಿ.ಕೆ.ಶಿವಕುಮಾರ್ ಅವರು, 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 4x400 ಮೀಟರ್ಸ್ ರಿಲೆಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ 4x400 ಮೀಟರ್ಸ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಎಂ.ಆರ್‌. ಪೂವಮ್ಮ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಎಂ.ಆರ್. ಪೂವಮ್ಮಗೆ ಸಿಎಂ ಡಿ.ಕೆ.ಶಿವಕುಮಾರ್‌ ಅಭಿನಂದನೆ

-

Prabhakara R
Prabhakara R Oct 3, 2026 4:05 PM

ಬೆಂಗಳೂರು: 2026ರ ಏಷ್ಯನ್ ಗೇಮ್ಸ್‌ನ ಮಹಿಳೆಯರ 4x400 ಮೀಟರ್ಸ್ ರಿಲೆಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ 4x400 ಮೀಟರ್ಸ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಕೊಡಗಿನ ಕ್ರೀಡಾಪಟು ಎಂ.ಆರ್. ಪೂವಮ್ಮ (M.R. Poovamma) ಅವರಿಗೆ ಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಅಭಿನಂದನೆ ಸಲ್ಲಿಸಿದ್ದಾರೆ.

ದೂರವಾಣಿಯಲ್ಲಿ ಪೂವಮ್ಮ ಜತೆ ಮಾತನಾಡಿರುವ ಸಿಎಂ ಅವರು, 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 4x400 ಮೀಟರ್ಸ್ ರಿಲೆಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ 4x400 ಮೀಟರ್ಸ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.

ನಾನು ಅಥ್ಲೆಟಿಕ್ಸ್ ಅನ್ನು ಯಾವಾಗಲೂ ನೋಡುತ್ತಿರುತ್ತೇನೆ. ಇಂತಹ ಸಾಧನೆಗೆ ಎಂತಹ ಸಮರ್ಪಣೆ ಮತ್ತು ಕಠಿಣ ಪರಿಶ್ರಮ ಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ. ಪೂವಮ್ಮ ಮತ್ತೊಮ್ಮೆ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ, ಮತ್ತು ನಮ್ಮ ಸರ್ಕಾರವು ಅವರ ಬೆನ್ನೆಲುಬಾಗಿ ಗಟ್ಟಿಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.



ನಮ್ಮ ಏಷ್ಯನ್ ಕ್ರೀಡಾಕೂಟದ ವಿಜೇತರು ಮತ್ತು ಕರ್ನಾಟಕ ಹಾಗೂ ಭಾರತವನ್ನು ಪ್ರತಿನಿಧಿಸಲು ಕಠಿಣ ಪರಿಶ್ರಮಪಡುತ್ತಿರುವ ಪ್ರತಿಯೊಬ್ಬ ಯುವ ಅಥ್ಲೀಟ್‌ ಅನ್ನು ನಾವು ಎಲ್ಲಾ ರೀತಿಯಲ್ಲೂ ಬೆಂಬಲಿಸುತ್ತೇವೆ. ಅವರ ಈ ಸಾಧನೆಗಳು ಹೊಸ ಪೀಳಿಗೆಗೆ ದೊಡ್ಡ ಕನಸು ಕಾಣಲು ಮತ್ತು ಕರ್ನಾಟಕ ಹಾಗೂ ಭಾರತಕ್ಕೆ ಮತ್ತಷ್ಟು ಕೀರ್ತಿ ತರಲು ಸ್ಫೂರ್ತಿ ನೀಡುತ್ತವೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Karnataka Drought: ಇಂದಿನಿಂದ ಕೇಂದ್ರ ಬರ ಅಧ್ಯಯನ ತಂಡದಿಂದ ರಾಜ್ಯ ಪ್ರವಾಸ; ರಾಜ್ಯಕ್ಕೆ 3705.30 ಕೋಟಿ ಬರ ಪರಿಹಾರ ನೀಡಲು ಸಿಎಂ ಮನವಿ


ಎಂ.ಆರ್‌. ಪೂವಮ್ಮ ಸಂತಸ

ಮುಖ್ಯಮಂತ್ರಿಗಳು ಕರೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂ.ಆರ್‌.ಪೂವಮ್ಮ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕರೆ ಮಾಡಿದ್ದಕ್ಕೆ ಬಹಳ ಖುಷಿಯಾಗಿದೆ. ತಾವು ಕೂಡ ಅಥ್ಲೆಟಿಕ್ಸ್‌ ನೋಡುವುದಾಗಿ ಸಿಎಂ ಅವರು ಹೇಳಿದ್ದಾರೆ. ನಾನು ಈಗ ಗೋಲ್ಡ್‌ ಮೆಡಲಿಸ್ಟ್‌ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಏನೆಲ್ಲಾ ನೆರವು ಬೇಕು ನಾವು ಮಾಡುತ್ತೇವೆ. ಕ್ರೀಡಾಪಟುಗಳಿಗೆ ಸರ್ಕಾರದಿಂದ ಅಗತ್ಯ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.