ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಯಣಿಸುವ ಪ್ರಯಾಣಿಕ ರಿಗೆ ಹೊಸ ಮಾದರಿಯ ಅನುಭವ ನೀಡಲು ಕೋಕಾ-ಕೋಲಾ ಇಂಡಿಯಾ ಮತ್ತು ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಬಿಐಎಎಲ್) ಮೊದಲ ಬಾರಿಗೆ ಕೈಜೋಡಿಸಿವೆ. ಡಿಜಿಟಲ್ ತಂತ್ರಜ್ಞಾನ ಮತ್ತು ಗ್ರಾಹಕ ಸೇವೆಯನ್ನು ಬೆಸೆಯುವ ಈ ವಿಶಿಷ್ಟ ಯೋಜನೆಯ ಮೂಲಕ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಉಚಿತವಾಗಿ ಪಾನೀಯವನ್ನು ವಿತರಿಸ ಲಾಗುತ್ತಿದೆ.
ಭಾರತದ ಪ್ರಮುಖ ಪಾನೀಯ ಕಂಪನಿ ಕೋಕಾ-ಕೋಲಾ ಮತ್ತು ದೇಶದ ವೇಗವಾಗಿ ಬೆಳೆಯು ತ್ತಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ, ಪ್ರಯಾಣವನ್ನು ಕೇವಲ ಸಂಚಾರವಾಗಿಸದೆ ಒಂದು ಸಂಭ್ರಮವನ್ನಾಗಿಸುವ ಉದ್ದೇಶದಿಂದ ಕೋಕಾಕೋಲಾ ಸಹಯೋಗ ಮಾಡಿಕೊಂಡಿದ್ದು, ಸರಿಯಾದ ಸಮಯದಲ್ಲಿ ಸಿಗುವ ಒಂದು ಕ್ಷಣದ ವಿಶ್ರಾಂತಿ ಮತ್ತು ತಂಪು ಪಾನೀಯವು ಪ್ರಯಾಣಿಕರ ಆಯಾಸ ಕಡಿಮೆ ಮಾಡುತ್ತದೆ ಎಂಬ ಆಲೋಚನೆ ಈ ಯೋಜನೆಯ ಹಿಂದಿದೆ.
ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ಗಳ ಮೂಲಕ ಪ್ರಯಾಣಿಸುವವರು, ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಆಲ್- ಇನ್- ಒನ್ ಡಿಜಿಟಲ್ ಪ್ಲಾಟ್ ಫಾರ್ಮ್ ಆದ 'ಪಲ್ಸ್' ಆಪ್ ಅನ್ನು ಸೇರಿದರೆ, ಅವರಿಗೆ ಉಚಿತವಾಗಿ ತಂಪಾದ ಕೋಕಾ-ಕೋಲಾ ನೀಡಲಾಗುತ್ತದೆ. ಇದನ್ನು ಇದಕ್ಕಾಗಿಯೇ ಮೀಸಲಾದ 'ಕೋಕ್ ಜೋನ್' ನಲ್ಲಿ ಪಡೆದುಕೊಳ್ಳಬಹುದು. ಈ ಪ್ರಕ್ರಿಯೆಯು ಬಹಳ ಸರಳವಾಗಿದ್ದು, ಟರ್ಮಿನಲ್ ನಲ್ಲಿರುವ ಡಿಜಿಟಲ್ ಪರದೆಗಳ ಮೇಲೆ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ ಮತ್ತು ತಂಪಾದ ಪಾನೀಯ ದೊಂದಿಗೆ ನಿಮ್ಮ ಪ್ರಯಾಣ ಮುಂದುವರಿಸಿ.
ಈ ಯೋಜನೆಯು ಪ್ರಯಾಣಿಕರು ತಮ್ಮ ಮೊಬೈಲ್ ಮೂಲಕ ವಿಮಾನ ನಿಂತಿರುವ ಸ್ಥಳದ ಹಾದಿಯನ್ನು ಕಂಡುಕೊಳ್ಳುತ್ತಿರುವಾಗಲೇ ಅವರಿಗೆ ಅತ್ಯಂತ ಆಕರ್ಷಕ ಅನುಭವವನ್ನು ನೀಡ ಲಿದೆ. ಟರ್ಮಿನಲ್ ಗಳಲ್ಲಿ ಸುಲಭವಾಗಿ ಕಣ್ಣಿಗೆ ಬೀಳುವಂತೆ ಮಾಡಲು, ಕೋಕ್ ಜೋನ್ ನಲ್ಲಿ ಬೃಹತ್ ‘ಕ್ಯಾನ್' ಆಕಾರದ ಕಲಾಕೃತಿಯನ್ನು ಸ್ಥಾಪಿಸಲಾಗಿದೆ. ವಿಮಾನ ನಿಲ್ದಾಣದಾದ್ಯಂತ ಇರುವ ಡಿಜಿಟಲ್ ಪರದೆಗಳು ಮತ್ತು ಇತರ ಮಾಧ್ಯಮಗಳ ಮೂಲಕ ಈ ಅಭಿಯಾನದ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಪ್ರತಿಯೊಬ್ಬ ಪ್ರಯಾಣಿಕರಿಗೂ ಇದರ ಲಾಭ ಸಿಗುವಂತೆ ನೋಡಿಕೊಳ್ಳ ಲಾಗುತ್ತಿದೆ.
ಈ ಸಹಯೋಗದ ಕುರಿತು ಕೋಕಾ-ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾದ ಗ್ರಾಹಕ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಅಭಿಷೇಕ್ ಗುಪ್ತಾ ಅವರು ಮಾತನಾಡಿ, "ಇಂದಿನ ದಿನಗಳಲ್ಲಿ ವಿಮಾನ ನಿಲ್ದಾಣಗಳು ಗ್ರಾಹಕರನ್ನು ತಲುಪಲು ಅತ್ಯುತ್ತಮ ವೇದಿಕೆಗಳಾಗಿವೆ. ಪ್ರಯಾಣದ ವಿವಿಧ ಹಂತಗಳಲ್ಲಿ ಪ್ರಯಾಣಿಕರು ಹಲವು ಡಿಜಿಟಲ್ ಮಾಧ್ಯಮಗಳೊಂದಿಗೆ ನಿರತರಾಗಿರುತ್ತಾರೆ. ಬಿಐಎಎಲ್ ನಿರ್ಮಿಸಿರುವ ಸುಧಾರಿತ ಡಿಜಿಟಲ್ ಮೂಲಸೌಕರ್ಯ ಮತ್ತು ನಮ್ಮ ಬ್ರ್ಯಾಂಡ್ ಮೇಲಿರುವ ವಿಶ್ವಾಸವನ್ನು ಒಗ್ಗೂಡಿಸಿ, ಪ್ರಯಾಣಿಕರಿಗೆ ನಿಜವಾಗಿಯೂ ಉಪಯುಕ್ತವಾಗುವಂತಹ ಅನುಭವವನ್ನು ನೀಡಲು ನಾವು ಈ ಹೆಜ್ಜೆ ಇಟ್ಟಿದ್ದೇವೆ,” ಎಂದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪರ್ಫಾರ್ಮೆನ್ಸ್ ಮಾರ್ಕೆಟಿಂಗ್ ಮತ್ತು ಅಡ್ವರ್ಟೈಸಿಂಗ್ ವಿಭಾಗದ ಸಹಾಯಕ ಉಪಾಧ್ಯಕ್ಷರಾದ ದೇವಯಾನಿ ಡಿ.ವಿ. ಅವರು ಮಾತನಾಡಿ, "ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ, ಪ್ರಯಾಣಿಕರಿಗೆ ಪ್ರಯಾಣ ಸೌಕರ್ಯದ ಜೊತೆ ವಿಶಿಷ್ಟ ಅನುಭವಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಸಣ್ಣ ಸಣ್ಣ ಸಂತೋಷದ ಕ್ಷಣಗಳು ಸಹ ಪ್ರಯಾಣವನ್ನು ಹೆಚ್ಚು ಆನಂದದಾಯಕವಾಗಿಸಬಲ್ಲವು ಎಂಬ ನಮ್ಮ ನಂಬಿಕೆಯನ್ನು ಈ ಪಾಲುದಾರಿಕೆಯು ಪ್ರತಿಬಿಂಬಿಸುತ್ತದೆ. ಈ ಯೋಜನೆಯನ್ನು ನಮ್ಮ 'ಪಲ್ಸ್' ಆಪ್ ನೊಂದಿಗೆ ಸಂಯೋಜಿಸುವ ಮೂಲಕ, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಂಚರಿಸುವಾಗ ಅವರಿಗೆ ಅರ್ಥಪೂರ್ಣ, ಸಮಯೋಚಿತ ಮತ್ತು ಹಿತವಾದ ಅನುಭವವನ್ನು ನೀಡಲು ನಾವು ಡಿಜಿಟಲ್ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದೇವೆ," ಎಂದು ತಿಳಿಸಿದರು.
ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ ವಾರ್ಷಿಕವಾಗಿ ಕೋಟ್ಯಂತರ ಪ್ರಯಾಣಿಕರು ಪಯಣಿಸು ತ್ತಿದ್ದು, ಈ ಸಹಯೋಗವು ಕೋಕಾ-ಕೋಲಾ ಇಂಡಿಯಾದ 'ಟ್ರಾವೆಲ್ ರಿಟೇಲ್' ಕಾರ್ಯತಂತ್ರದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಕೇಂದ್ರವೊಂದರಲ್ಲಿ ಗ್ರಾಹಕರಿಗೆ ಬ್ರ್ಯಾಂಡ್ ಅನ್ನು ಇನ್ನಷ್ಟು ಹತ್ತಿರವಾಗಿಸಲು ಇದು ಸಹಕಾರಿಯಾಗಿದೆ.