ಇಂದು ಪಟ್ಟಿಯೊಂದಿಗೆ ವೇಣುಗೋಪಾಲ್ ಅಂದುಕೊಂಡಂತೆ ಆದರೆ ಇಂದು ಸಂಜೆ ಪ್ರಮಾಣ
ನಾಳೆ ಬಾ ಎನ್ನುವಂತಾಗಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸೋಮವಾರ ಸಂಜೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಭಾನುವಾರ ತಡರಾತ್ರಿಯವರೆಗೆ ರಾಜ್ಯ ನಾಯಕರಿಗೆ ಅಂತಿಮ ಪಟ್ಟಿ ಸಿಕ್ಕಿರಲಿಲ್ಲ. ಹೀಗಾಗಿ ಸಚಿವಾ ಕಾಂಕ್ಷಿಗಳು ತೀವ್ರ ತಳಮಳಕ್ಕೊಳಗಾಗಿದ್ದರು. ಕಳೆದ ವಾರವಿಡೀ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯಲು ರಾಜ್ಯ ನಾಯಕರು ದೆಹಲಿಯಲ್ಲಿ ಕಾದು ಕೂತ ಬಳಿಕ ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆದರೂ, ಅಂತಿಮ ಪಟ್ಟಿಯನ್ನು ನೀಡಿರಲಿಲ್ಲ. ನೀವು ಬೆಂಗಳೂರಿಗೆ ಹೊರಡಿ, ಮತ್ತೊಮ್ಮೆ ಚರ್ಚಿಸಿ, ಅಂತಿಮ ಪಟ್ಟಿಯನ್ನು ರವಾನಿಸುವುದಾಗಿ ಹೇಳಿದ್ದರು. ಆದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕೇರಳದಲ್ಲಿರು ವುದರಿಂದ ಭಾನುವಾರ ಸಂಜೆ ಸಭೆ ನಡೆದಿಲ್ಲ.
ಒಂದು ವೇಳೆ ಭಾನುವಾರ ತಡರಾತ್ರಿ ಸಭೆ ನಡೆದರೆ, ಸೋಮವಾರ ಬೆಳಗ್ಗೆ 10.30ರ ಹೊತ್ತಿಗೆ ಪಟ್ಟಿಯನ್ನು ರವಾನಿಸುವ ಸಂದೇಶವನ್ನು ಪಕ್ಷದ ಹೈಕಮಾಂಡ್ ನೀಡಿದೆ. ಭಾನುವಾರ ತಡರಾತ್ರಿ ಪಟ್ಟಿ ಅಂತಿಮ ಗೊಂಡರೂ, ಸೋಮವಾರ ಬೆಳಗ್ಗೆ ರಾಜ್ಯ ನಾಯಕರಿಗೆ ಪಟ್ಟಿಯನ್ನು ರವಾನಿಸು ವುದರೊಂದಿಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಒಂದು ವೇಳೆ ಭಾನುವಾರ ಹೈಕಮಾಂಡ್ ನಾಯಕರ ಸಭೆ ನಡೆಯದಿದ್ದರೆ ಮುಂದೇನು ಎನ್ನುವ ಆತಂಕ ಸಚಿವಾಕಾಂಕ್ಷಿ ಗಳಲ್ಲಿದೆ.
ಪ್ರಮಾಣಕ್ಕೆ ಸಿದ್ದತೆ
ಮೂಲಗಳ ಪ್ರಕಾರ, ಲೋಕಭವನದ ಅಽಕಾರಿಗಳಿಗೆ ರಾಜ್ಯ ಸರಕಾರದಿಂದ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಸೋಮವಾರ ಸಂಜೆ ೪ರಿಂದ ೫ಗಂಟೆ ಯೊಳಗೆ ಪ್ರಮಾಣ ವಚನ ಕಾರ್ಯ ಕ್ರಮ ನಡೆಸುವ ಆಲೋಚನೆಯಲ್ಲಿ ರುವ ರಾಜ್ಯ ಸರಕಾರ, ಈ ಸಂಬಂಧ ರಾಜ್ಯಪಾಲರ ಸಮಯವನ್ನು ಪಡೆದುಕೊಂಡಿದೆ. ಭಾನುವಾರವೂ ಪಟ್ಟಿ ಕೈಸೇರದೇ ಇರುವುದರಿಂದ ಏನಾಗಲಿದೆ ಎನ್ನುವ ಸ್ಪಷ್ಟನೆ ಪಕ್ಷದಲ್ಲಿಲ್ಲ
ವಿದ್ಯಮಾನಗಳು
ಡಿಕೆಶಿ ಮುಖ್ಯಮಂತ್ರಿಯಾದಾಗಿನಿಂದಲೂ ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು
ಪದೇಪದೇ ದೆಹಲಿಗೆ ಡಿಕೆ, ಸಿದ್ದು ಭೇಟಿ, ಹಲವು ಗೊಂದಲ, ಮತ್ತೆಮತ್ತೆ ಮುಂದೂಡಿಕೆ
ದೆಹಲಿಯಲ್ಲಿ ವಿದ್ಯಾರ್ಥಿ ಹೋರಾಟ, ಸಂಸತ್ ಅಧಿವೇಶನಗಳ ನಡುವೆಯೇ ಪಟ್ಟಿ ಅಂತಿಮಗೊಳಿಸಲು ನಾಯಕರ ಕಸರತ್ತು
ಒತ್ತಡಗಳ ನಡುವೆಯೇ ಸಭೆ. ನೀವು ಹೋಗಿರಿ, ಸಚಿವರ ಪಟ್ಟಿ ಕಳಿಸುತ್ತೇವೆ ಎಂದಿದ್ದ ಕಾಂಗ್ರೆಸ್ ವರಿಷ್ಠ ರಾಹುಲ್
ಸೋಮವಾರ ಸಚಿವರ ಅಂತಿಮಪಟ್ಟಿಯೊಂದಿಗೆ ಬೆಂಗಳೂರಿಗೆ ಕಾಂಗ್ರೆಸ್ ಕಾರ್ಯದರ್ಶಿ ವೇಣು ಆಗಮನ ಸಾಧ್ಯತೆ