ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮಿತ್ ಶಾ ಹೇಳಿಕೆ ವೀಡಿಯೊ ತಿರುಚಲಾಗಿದೆ; ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ

ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಳೆಯ ಮತ್ತು ಇತ್ತೀಚಿನ ಹೇಳಿಕೆಗಳ ತುಂಡರಿಸಿದ ವಿಡಿಯೋವನ್ನು ಹಂಚಿಕೊಂಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು: ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Sha) ಅವರ ಹಳೆಯ ಮತ್ತು ಇತ್ತೀಚಿನ ಹೇಳಿಕೆಗಳ ತುಂಡರಿಸಿದ ವಿಡಿಯೋವನ್ನು ಹಂಚಿಕೊಂಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರು "ಸಂದರ್ಭಕ್ಕೆ ಬಾಹಿರವಾದ ಹಾಗೂ ಎಡಿಟ್ ಮಾಡಿದ" ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ರಾಹುಲ್ ಗಾಂಧಿ ತಮ್ಮ ಎಕ್ಸ್‌ ಖಾತೆಯಲ್ಲಿ ಅಮಿತ್ ಶಾ ಅವರ ಎರಡು ವಿಡಿಯೋ ಕ್ಲಿಪ್‌ಗಳನ್ನು ಒಳಗೊಂಡ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಮೊದಲ ವಿಡಿಯೋದಲ್ಲಿ ಅಮಿತ್ ಶಾ ಅವರು, "SIR ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ, ಇದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಷಯ" ಎಂದು ಹೇಳುವಂತೆ ಬಿಂಬಿಸಲಾಗಿದೆ. ಎರಡನೇ ವಿಡಿಯೋದಲ್ಲಿ ಇದರಲ್ಲಿ ಶಾ ಅವರು, "ರಾಹುಲ್ ಜೀ, ಚರ್ಚೆಗೆ ಪ್ರಧಾನಿ ಮೋದಿ ಅವರ ಅಗತ್ಯವಿಲ್ಲ, SIR ಕುರಿತು ಚರ್ಚಿಸಲು ನಾವು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಸಿದ್ಧರಿದ್ದೇವೆ" ಎಂದು ಸವಾಲು ಹಾಕಿದ್ದಾರೆ.

ರಾಹುಲ್ ಗಾಂಧಿ ಅವರ ಈ ಪೋಸ್ಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಲ್ಹಾದ್ ಜೋಶಿ, "ಇದು ರಾಹುಲ್ ಗಾಂಧಿ ಅವರಿಗೆ SIR ವಿಷಯದ ಬಗ್ಗೆ ಇರುವ ಅರೆಬರೆ ಜ್ಞಾನವನ್ನು ತೋರಿಸುತ್ತದೆ" ಎಂದಿದ್ದಾರೆ. ಗೊಂದಲ ಇರುವುದು ನಮಗಲ್ಲ, ನಿಮಗೇ ಎಂದು ಜೋಶಿ ತಿರುಗೇಟು ನೀಡಿದ್ದಾರೆ. "ಚುನಾವಣೆಯಲ್ಲಿ ಗೆದ್ದಾಗ ಇವರಿಗೆ ಇಡೀ ಚುನಾವಣಾ ಪ್ರಕ್ರಿಯೆ ಸರಿಯಾಗಿ ಕಾಣಿಸುತ್ತದೆ, ಸೋತಾಗ ಅದೇ ಪ್ರಕ್ರಿಯೆಯ ಮೇಲೆ ಪ್ರಶ್ನೆ ಎತ್ತುತ್ತಾರೆ" ಎಂದು ಅವರು ಟೀಕಿಸಿದ್ದಾರೆ.

ʼʼನಿಮ್ಮ ಪ್ರತಿಭಟನೆಯ ಹಕ್ಕಿಗಾಗಿ ನಮ್ಮ ಜೀವನ ಬಲಿ ಕೊಡಬೇಕೆ?ʼʼ ರಾಹುಲ್‌ ಗಾಂಧಿ ವಿರುದ್ಧ ಸಿಡಿದೆದ್ದ ವ್ಯಾಪಾರಿಗಳು

ಅಲ್ಲದೆ, "ಯಾವುದೇ SIR ಪ್ರಕ್ರಿಯೆ ನಡೆಯದಿದ್ದಾಗಲೂ ಕಾಂಗ್ರೆಸ್ ಪಕ್ಷವು 2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಸತತವಾಗಿ ಸೋತಿದೆ. ಆ ಸೋಲುಗಳಿಗೆ ರಾಹುಲ್ ಜೀ ಜವಾಬ್ದಾರಿ ಹೊರಡುತ್ತಾರೆಯೇ?" ಎಂದು ಪ್ರಶ್ನಿಸಿದ್ದಾರೆ. ಅಮಿತ್ ಶಾ ಅವರು ಸಂಸತ್ತಿನಲ್ಲಿ ಮುಖಾಮುಖಿ ಚರ್ಚೆಗೆ ಮುಕ್ತ ಸವಾಲು ಹಾಕಿದ್ದರೂ ರಾಹುಲ್ ಗಾಂಧಿ ಏಕೆ ಹಿಂಜರಿಯುತ್ತಿದ್ದಾರೆ ಎಂದು ಪ್ರಶ್ನಿಸಿರುವ ಜೋಶಿ, ಇಂತಹ ರಾಜಕೀಯ ನಾಟಕಗಳನ್ನು ಬಿಟ್ಟು ಸಂಸತ್ತಿಗೆ ಬಂದು ತಥ್ಯಗಳೊಂದಿಗೆ ಚರ್ಚಿಸುವಂತೆ ಸವಾಲು ಹಾಕಿದ್ದಾರೆ.

Vishakha Bhat Heggar

View all posts by this author