ಬೆಂಗಳೂರು: ರಾಜ್ಯದ ಎರಡು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿನ ಎಲ್ಲ ಸಫಾರಿ ವಾಹನಗಳಲ್ಲಿ ಜಿಪಿಎಸ್ ಆಧಾರಿತ ಸಾಧನಗಳು ಮತ್ತು ಟ್ರ್ಯಾಕರ್‌ಗಳ ಕಾರ್ಯಾಚರಣೆ ಆರಂಭವಾಗಿದೆ. ಸಫಾರಿ ವೇಳೆ ಪ್ರವಾಸಿಗರು ಹಾಗೂ ಅರಣ್ಯಾಧಿಕಾರಿಗಳಿಂದ ಮಾರ್ಗ ಬದಲಾವಣೆ, ನಿಗದಿತ ಮಾರ್ಗಕ್ಕಿಂತ ಹೆಚ್ಚಿನ ಸಮಯ ತೆಗೆದು ಕೊಳ್ಳುತ್ತಿರುವ ಕುರಿತು ಹೆಚ್ಚುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ.
ಇದನ್ನೂ ಓದಿ: Bandipur and Nagarahole safari: ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಆರಂಭಿಸಲು ಸಿಎಂ ಸೂಚನೆ
ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರತಿ ಬುಧವಾರ ರಜೆ: ವನ್ಯಜೀವಿ ಸಂರಕ್ಷಣೆ-ಪ್ರವಾಸಿಗರ ಸುರಕ್ಷತೆ ವಿಚಾರಕ್ಕೆ ಹಲವು ಮಾರ್ಗಸೂಚಿಗಳನ್ನು ಜಾರಿ ಮಾಡುತ್ತಿರುವ ರಾಜ್ಯ ಸರಕಾರ, ಈವರೆಗೆ ವಾರದ ಎಲ್ಲ ದಿನ ಪ್ರವಾಸಿಗರಿಗೆ ಮುಕ್ತವಾಗಿರುತ್ತಿದ್ದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಇನ್ಮುಂದೆ ಪ್ರತಿ ಬುಧವಾರ ರಜೆ ಘೋಷಣೆ ಮಾಡಿದ್ದು, ಸಾರ್ವಜನಿಕರ ವೀಕ್ಷಣೆಗೆ ಯಾವುದೇ ಅವಕಾಶ ವಿರುವುದಿಲ್ಲ.