DK Shivakumar: ಬುರುಡೆ ಗ್ಯಾಂಗ್ ದೆಹಲಿಗೆ ಹೋಗಿದ್ದೆಲ್ಲ ಗೊತ್ತು: ಡಿಕೆ ಶಿವಕುಮಾರ್ ಬಾಂಬ್
supreme court: ಬುರುಡೆ ಡೆಲ್ಲಿಗೆ ಎತ್ತಿಕೊಂಡು ಹೋಗಿದ್ದು ಗೊತ್ತು, ನಮಗೆ ಆ ಮಾಹಿತಿ ಇದೆ. ಸುಪ್ರೀಂ ಕೋರ್ಟ್‌ಗೆ ಹೋಗಿದ್ದೂ ಗೊತ್ತು. ಪಿಐಎಲ್ ಹಾಕಿದ್ದು ಗೊತ್ತು, ಅಲ್ಲಿ ರಿಜೆಕ್ಟ್ ಆಗಿದ್ದು ಗೊತ್ತು. ಆದರೆ ಪೊಲೀಸ್ ಇಲಾಖೆಯವರು ತನಿಖೆ ಮಾಡುತ್ತಿದ್ದಾರೆ, ವರದಿ ಕೊಡುತ್ತಾರೆ ಎಂದು ಡಿಕೆ ಶಿವಕುಮಾರ್ ಅವರು ತಿಳಿಸಿದರು.

-

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ (Dharmasthala case) ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಬುರುಡೆ ಗ್ಯಾಂಗ್ ನಡೆಸಿದ ಷಡ್ಯಂತ್ರದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬುರುಡೆಯನ್ನು ದೆಹಲಿಗೆ ಎತ್ತಿಕೊಂಡು ಹೋಗಿದ್ದೂ ಗೊತ್ತು, ಸುಪ್ರೀಂ ಕೋರ್ಟ್‌ಗೆ (Supreme court) ಹೋಗಿದ್ದೂ ಗೊತ್ತು ಎಂದು ಡಿಕೆಶಿ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ವಾಸ್ತವಾಂಶ ಜನರಿಗೆ ತಿಳಿಸಬೇಕು ಅನ್ನೋದು ನಮ್ಮ ಆಸೆ ಎಂದು ತಿಳಿಸಿದರು.
ರಾಜಕೀಯ ಯಾರೂ ಏನು ಬೇಕಾದರೂ ಮಾತಾಡಬಹುದು. ನಾನು ಮಾತಾಡಿದರೆ ಸರ್ಕಾರದ ಹೇಳಿಕೆ ಆಗುತ್ತದೆ. ಅಂತಿಮ ವರದಿ ಬರಲಿ, ಮಾತಾಡುತ್ತೇನೆ. ಹೋಮ್ ಮಿನಿಸ್ಟರ್, ಸಿಎಂ ಅಧಿಕೃತ ಹೇಳಿಕೆ ಕೊಡುತ್ತಾರೆ. ಬುರುಡೆ ಡೆಲ್ಲಿಗೆ ಎತ್ತಿಕೊಂಡು ಹೋಗಿದ್ದು ಗೊತ್ತು, ನಮಗೆ ಆ ಮಾಹಿತಿ ಇದೆ. ಸುಪ್ರೀಂ ಕೋರ್ಟ್‌ಗೆ ಹೋಗಿದ್ದೂ ಗೊತ್ತು. ಪಿಐಎಲ್ ಹಾಕಿದ್ದು ಗೊತ್ತು, ಅಲ್ಲಿ ರಿಜೆಕ್ಟ್ ಆಗಿದ್ದು ಗೊತ್ತು. ಆದರೆ ಪೊಲೀಸ್ ಇಲಾಖೆಯವರು ತನಿಖೆ ಮಾಡುತ್ತಿದ್ದಾರೆ, ವರದಿ ಕೊಡುತ್ತಾರೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡುವುದಕ್ಕೆ ಮುನ್ನವೇ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದರೆ ಮೇ 5ರಂದು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ನ್ಯಾ.ಸತೀಶ್ ಚಂದ್ರ ನೇತೃತ್ವದ ಪೀಠ ಅರ್ಜಿ ವಜಾ ಮಾಡಿತ್ತು. ಆದರೂ ಇದನ್ನು ಮುಚ್ಚಿಟ್ಟು ಬುರುಡೆ ಗ್ಯಾಂಗ್ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಎಸ್ಪಿಗೂ ದೂರು ನೀಡಲಾಗಿತ್ತು. ಸುಪ್ರೀಂ ಆದೇಶ ಮುಚ್ಚಿಟ್ಟು ರಾಜ್ಯ ಸರ್ಕಾರವನ್ನೇ ಈ ಬುರುಡೆ ಗ್ಯಾಂಗ್ ಯಾಮಾರಿಸಿತ್ತು. ಅರ್ಜಿ ವಜಾಗೊಂಡಿದ್ದರೂ ಎಸ್‌ಐಟಿ ರಚನೆ ಮಾಡಿಸಿಕೊಂಡು ತನಿಖೆ ಮಾಡಿಸಿತ್ತು ಅನ್ನೋ ರಹಸ್ಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: Dharmasthala Case: ಧರ್ಮಸ್ಥಳ ಕೇಸ್: ಬುರುಡೆ ಚಿನ್ನಯ್ಯನ ಜಾಮೀನು ಅರ್ಜಿ ವಜಾ