Book Release: ದೀಕ್ಷಿತ್ ನಾಯರ್ ಅವರ 'ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?' ಪುಸ್ತಕ ಜ.26ರಂದು ಬಿಡುಗಡೆ
ಕಡೂರಿನ ಕನಸುಗಳ ಇನ್ಫಿನಿಟಿ ಪ್ರಕಾಶನವು ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕ ದೀಕ್ಷಿತ್ ನಾಯರ್ ಅವರ ಅಂಕಣ ಬರಹಗಳ ಸಂಗ್ರಹವಾಗಿದೆ.
ಬೆಂಗಳೂರು: ಲೇಖಕ ಮತ್ತು ಪತ್ರಕರ್ತ ದೀಕ್ಷಿತ್ ನಾಯರ್ (Deekshith nayar) ಅವರ ಮೂರನೇ ಪುಸ್ತಕ 'ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?' ಬೆಂಗಳೂರಿನಲ್ಲಿ (Bengaluru news) ಜನವರಿ 26ರಂದು ಭಾನುವಾರ ಬಿಡುಗಡೆ (book release) ಆಗಲಿದೆ.
ಕಡೂರಿನ ಕನಸುಗಳ ಇನ್ಫಿನಿಟಿ ಪ್ರಕಾಶನವು ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕ ದೀಕ್ಷಿತ್ ನಾಯರ್ ಅವರ ಅಂಕಣ ಬರಹಗಳ ಸಂಗ್ರಹವಾಗಿದೆ. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ನ ʼಕುವೆಂಪುʼ ಸಭಾಂಗಣದಲ್ಲಿ ಭಾನುವಾರ (ಜ.26) ಸಂಜೆ 5:30 ಗಂಟೆಗೆ ಪುಸ್ತಕ ಲೋಕಾರ್ಪಣೆಯ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಪತ್ರಕರ್ತ ಮತ್ತು ಲೇಖಕ ಜೋಗಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಹಾಯ್ ಬೆಂಗಳೂರ್ ಪತ್ರಿಕೆಯ ಸಂಪಾದಕಿ ಭಾವನಾ ಬೆಳಗೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಚಿಕ್ಕಮಗಳೂರಿನ ಉಪನ್ಯಾಸಕಿ ಅಜ್ಜಂಪುರ ಎಸ್ ಶ್ರುತಿ ಕೃತಿ ಪರಿಚಯ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕನ್ನಡ ಪರಿಚಾರಕ ಕೆ ರಾಜಕುಮಾರ್, ಗಾಯಕ ರಾಮಚಂದ್ರ ಹಡಪದ್, ಸಮಾಜ ಸೇವಕರಾದ ಸೈಯ್ಯದ್ ಇಸಾಖ್, ಅಯೂಬ್ ಅಹ್ಮದ್ ಮತ್ತು ಯುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರುತಿ ಬಿ ಆರ್ ಆಗಮಿಸಲಿದ್ದಾರೆ. ವೇದಿಕೆಯಲ್ಲಿ ದೀಕ್ಷಿತ್ ನಾಯರ್ ಮತ್ತು ಕನಸುಗಳ ಇನ್ಫಿನಿಟಿ ಪ್ರಕಾಶಕ ಪೃಥ್ವಿ ಸೂರಿ ಉಪಸ್ಥಿತರಿರಲಿದ್ದಾರೆ.