ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali Decoration 2025: ಬೆಳಕಿನ ಹಬ್ಬದ ಅಲಂಕಾರಕ್ಕೆ ಲಗ್ಗೆ ಇಟ್ಟ ಆಕಾಶ ದೀಪಗಳು

Deepavali Decoration: ದೀಪಾವಳಿ ಹಾಗೂ ಕಾರ್ತಿಕ ಮಾಸದಲ್ಲಿನ ಅಲಂಕಾರಕ್ಕಾಗಿ ಮಾರುಕಟ್ಟೆಯಲ್ಲಿ ನಾನಾ ಬಗೆಯ ಆಕರ್ಷಕ ಆಕಾಶ ದೀಪಗಳು/ಆಕಾಶ ಬುಟ್ಟಿಗಳು ಅಥವಾ ಸ್ಕೈ ಲ್ಯಾಂಟೆರ್ನ್‌ಗಳು ಆಗಮಿಸಿವೆ. ಯಾವ್ಯಾವ ಬಗೆಯವು ಮಾರುಕಟ್ಟೆಗೆ ಬಂದಿವೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

ಚಿತ್ರಕೃಪೆ: ಮಿಂಚು
1/5

ಬೆಳಕಿನ ಹಬ್ಬ ದೀಪಾವಳಿಯ ಅಲಂಕಾರಕ್ಕೆ ಸಾಥ್ ನೀಡಲು ಮಾರುಕಟ್ಟೆಯಲ್ಲಿ ನಾನಾ ಬಗೆಯ ಆಕರ್ಷಕ ಆಕಾಶ ದೀಪಗಳು/ಆಕಾಶ ಬುಟ್ಟಿಗಳು ಅಥವಾ ಸ್ಕೈ ಲ್ಯಾಂಟೆರ್ನ್‌ಗಳು ಆಗಮಿಸಿವೆ.

ವೈವಿಧ್ಯಮಯ ಲ್ಯಾಂಟೆರ್ನ್‌ಗೆ ಬೇಡಿಕೆ

ಈ ಸೀಸನ್‌ನಲ್ಲಿ ಚೈನೀಸ್ ಶೈಲಿಯವು ಹಾಗೂ ಪ್ಯಾರಾಚೂಟ್ ವಿನ್ಯಾಸದವು ಹೆಚ್ಚು ಮಾರಾಟವಾಗುತ್ತಿವೆ. ಇನ್ನುಳಿದಂತೆ, ಬಲೂನು, ಚೆಂಡಿನಾಕಾರ, ಹೃದಯಾಕಾರದ ಆಕಾಶದೀಪ, ಪೆಂಟಾಗನಲ್, ಎಕ್ಸಾಗನಲ್, ಆಕ್ಟಾಗನಲ್, ತಾವರೆ, ಗುಲಾಬಿ, ನಕ್ಷತ್ರಾಕಾರ ಸೇರಿದಂತೆ ನಾನಾ ಡಿಸೈನ್‌ಗಳಲ್ಲಿ ಆಗಮಿಸಿವೆ. ನಿಯಾನ್, ಲೆಮನ್ ಯೆಲ್ಲೋ, ಕೆಂಪು, ಹಸಿರು, ನೀಲಿ, ಬಿಳಿ ಮತ್ತಿತರ ಕಡು ಹಾಗೂ ತಿಳಿ ಬಣ್ಣಗಳನ್ನೊಳಗೊಂಡಂತವು ಗ್ರಾಹಕರನ್ನು ಸೆಳೆಯುತ್ತಿವೆ. ಕುಚ್ಚು ಹಾಗೂ ಕೆಲವು ಫ್ರಿಂಜ್ ಶೈಲಿಯವು ಗ್ರಾಹಕರನ್ನು ಸೆಳೆಯುತ್ತಿವೆ.

2/5

ಪರಿಸರ ಸ್ನೇಹಿಯಾದ ಆಕಾಶ ದೀಪಗಳು

ಕಾಟನ್ ಬಟ್ಟೆ ಇಲ್ಲವೇ ದಪ್ಪನಾದ ಪೇಪರ್ ಮತ್ತು ಬಿದಿರಿನಿಂದ ತಯಾರಿಸಿದ ಆಕಾಶ ಬುಟ್ಟಿಗಳು ಈ ಬಾರಿ ಕಲಾತ್ಮಕವಾದ ಡಿಸೈನ್‌ನಲ್ಲಿ ಬಂದಿವೆ. ತೂಗು ಹಾಕಲು ಸುಲಭವಾಗುವ ಲೈಟ್‌ವೇಟ್‌ನವು ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಮಾರಾಟಗಾರರು.

3/5

ಬೆಳಕು ಚೆಲ್ಲುವ ಆಕಾಶ ಬುಟ್ಟಿಗಳು

ಬಲ್ಬ್ ಅಥವಾ ಕ್ಯಾಂಡಲ್ ಹೊತ್ತಿಸಬಹುದಾದ ಆಕಾಶ ಬುಟ್ಟಿ ಅಥವಾ ದೀಪಗಳು ಕೂಡ ಈ ಸೀಸನ್ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ. ಕಾರ್ಡ್‌ಬೋರ್ಡ್ ಪೇಪರ್ ಹಾಗೂ ನಾನಾ ವಿನ್ಯಾಸ ಮತ್ತು ಬಣ್ಣದ ಪೇಪರ್‌ನಿಂದ ತಯಾರಿಸಿದ ಚಿಕ್ಕ ಸೈಝಿನ ಸ್ಕೈ ಲ್ಯಾಂಟೆರ್ನ್‌ಗಳೂ ಕೂಡ ಮಾರಾಟವಾಗುತ್ತಿವೆ. ಸಾಕಷ್ಟು ವಿನ್ಯಾಸ, ಬಣ್ಣ ಮತ್ತು ನಾನಾ ಆಕಾರದ ಆಕಾಶ ದೀಪಗಳು ಗ್ರಾಹಕರನ್ನು ಸೆಳೆಯುತ್ತಿವೆ ಎನ್ನುತ್ತಾರೆ ಮಾರಾಟಗಾರರು.

4/5

ಒಳಾಂಗಣದ ಲ್ಯಾಂಟೆರ್ನ್

ಸ್ಟಾರ್ ಅಂದರೇ, ನಕ್ಷತ್ರ ಆಕಾರದ ಲ್ಯಾಂಟೆನರ್‌ಗಳಲ್ಲಿ ರಾಯಲ್ ಕ್ರೀಮ್ ಹಾಗೂ ಮಿಲ್ಕಿ ವೈಟ್ ಶೇಡ್‌ನವು ಹೆಚ್ಚು ಬೇಡಿಕೆಯಲ್ಲಿವೆ. ಇವನ್ನು ಮನೆಯೊಳಗಿನ ಲಿವಿಂಗ್ ರೂಂ ಹಾಗೂ ಡೈನಿಂಗ್ ರೂಂ ಮಧ್ಯೆ ಹಾಕಬಹುದು. ಗೋಡೆಯ ಬದಿಯಲ್ಲೂ ಸಿಂಗರಿಸಬಹುದು ಎನ್ನುತ್ತಾರೆ ಒಳಾಂಗಣ ವಿನ್ಯಾಸಕಿ ರಿದಿಮಾ.

ಇನ್ನು, ಹಾಲೋಗ್ರಾಫಿಕ್ ಡಿಸೈನ್‌ನಲ್ಲಿ ಲಭ್ಯವಿರುವ ಮಿನಿ ಸ್ಟಾರ್ ಲ್ಯಾಂಟೆರ್ನ್‌ಗಳನ್ನು ಮನೆಯ ಯಾವ ಭಾಗದಲ್ಲಾದರೂ ತೂಗು ಹಾಕಬಹುದು. ಬಾಗಿಲಿನ ಮುಂಭಾಗ, ಲಿವಿಂಗ್ ರೂಮ್‌ನ ಕಾರ್ನರ್ ಹೀಗೆ ಕಾರ್ನರ್ ಸೂಟ್ ಆಗುತ್ತವೆ. ಇವು ಆನ್‌ಲೈನ್‌ನಲ್ಲೂ ದೊರೆಯುತ್ತಿವೆ.

5/5

ಆಕಾಶ ದೀಪಗಳ ವಿಶೇಷತೆ

  • ಬಾಲ್ಕನಿಯಲ್ಲಿ ತೂಗು ಹಾಕಿದರೇ ನೋಡಲು ಆಕರ್ಷಕವಾಗಿ ಕಾಣುತ್ತದೆ.
  • ಮನೆಯ ಒಳಾಂಗಣದಲ್ಲಾದಲ್ಲಿ ಚಿಕ್ಕ ಸೈಝ್‌ನದ್ದು ಮ್ಯಾಚ್ ಆಗುವಂತದ್ದು ಖರೀದಿಸಿ.
  • ಮನೆಯ ಗಾರ್ಡನ್‌ನಲ್ಲಿ ಎತ್ತರದಲ್ಲಿ ತೂಗು ಹಾಕಬಹುದು.

ಶೀಲಾ ಸಿ ಶೆಟ್ಟಿ

View all posts by this author