ತಮಿಳುನಾಡು ಕೌಶಲ್ಯ ಅಭಿವೃದ್ಧಿ ನಿಗಮ (TNSDC) ಸಹಯೋಗದೊಂದಿಗೆ, ವಿದ್ಯುತ್ ನಿರ್ವಹಣೆ ಮತ್ತು ಸ್ಮಾರ್ಟ್ ಗ್ರೀನ್ ಪರಿಹಾರಗಳ ಪೂರೈಕೆದಾರ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬರಗೂರಿನ ಎಂಜಿನಿಯರಿಂಗ್ ಕಾಲೇಜಿ ನಲ್ಲಿ ರೊಬೊಟಿಕ್ಸ್ ಮತ್ತು PLC ಆಟೋಮೇಷನ್ನಲ್ಲಿ ಸೆಂಟರ್ ಆಫ್ ಎಕ್ಸʼಲೆನ್ಸ್ (CoE) ಅನ್ನು ಉದ್ಘಾಟಿಸಿತು.
ಶೈಕ್ಷಣಿಕ ಕಲಿಕೆ ಮತ್ತು ಕೈಗಾರಿಕಾ ಅನ್ವಯಿಕೆಗಳ ನಡುವಿನ ಅಂತರ ಕಡಿಮೆ ಮಾಡಲು ವಿನ್ಯಾಸಗೊಳಿಸ ಲಾದ ಅತ್ಯಾಧುನಿಕ ಕೈಗಾರಿಕಾ ಯಾಂತ್ರೀಕೃತ ತರಬೇತಿ ಸೌಲಭ್ಯ ಒದಗಿಸಲು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ತಮಿಳುನಾಡು ಅಪೆಕ್ಸ್ ಕೌಶಲ್ಯ ಅಭಿವೃದ್ಧಿ ಕೇಂದ್ರ ಫಾರ್ ಆಟೋಮೊಬೈಲ್ (ಟಿಎನ್ ಆಟೋಸ್ಕಿಲ್ಸ್) ಈ ಕೇಂದ್ರವನ್ನು ಕಾರ್ಯಗತ ಗೊಳಿಸಿದೆ.
ವಿಕಸನಗೊಳ್ಳುತ್ತಿರುವ ಉತ್ಪಾದನಾ ಪರಿಸರ ವ್ಯವಸ್ಥೆಗಳಿಗೆ ಹೊಂದಿಕೆಯಾಗುವ ಪ್ರಾಯೋಗಿಕ, ಉದ್ಯಮ-ಸಂಬಂಧಿತ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರನ್ನು ಸಜ್ಜುಗೊಳಿಸುವ ಗುರಿಯನ್ನು ಈ ಕೇಂದ್ರವು ಹೊಂದಿದೆ.
ಇದನ್ನೂ ಓದಿ: Dr Maithri Bhat Column: ಮಾತನ್ನು ಆಡುವ ಮುನ್ನ ಇರಲಿ ಒಂದಿಷ್ಟು ಎಚ್ಚರ !
ಪ್ರಮುಖ ಉತ್ಪಾದನಾ ಕೇಂದ್ರವಾಗಿ ತಮಿಳುನಾಡಿನ ಸ್ಥಾನವನ್ನು ಬಲಪಡಿಸುವತ್ತ ಒಂದು ಭವಿಷ್ಯದ ಹೆಜ್ಜೆ ಇಡುವುದು ಮತ್ತು ಅದೇ ವೇಳೆ, ಉದ್ಯಮ 4.0 ಅವಶ್ಯಕತೆಗಳಿಗೆ ಅನುಗುಣ ವಾಗಿ ಭವಿಷ್ಯಕ್ಕೆ ಸಿದ್ಧವಾಗಿರುವ, ಯಾಂತ್ರೀಕೃತ-ಕೌಶಲ್ಯವುಳ್ಳ ಕಾರ್ಯಪಡೆಯ ಅಭಿವೃದ್ಧಿಗೆ ವೇಗ ತರುವಲ್ಲಿ ಈ ಉಪಕ್ರಮವು ಪ್ರಮುಖ ಪಾತ್ರ ವಹಿಸುವುದು.
"ಕೈಗಾರಿಕಾ ನೇತೃತ್ವದ ಈ ಸೆಂಟರ್ ಆಫ್ ಎಕ್ಸʼಲೆನ್ಸ್, ಕೌಶಲ್ಯಪೂರ್ಣ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಚನಾತ್ಮಕ ಮತ್ತು ಕೈಗಾರಿಕಾ-ಸಂಯೋಜಿತ ಕಾರ್ಯಕ್ರಮಗಳು ಯುವಕರನ್ನು ತಮ್ಮ ಉದ್ಯೋಗ ಸಾಮರ್ಥ್ಯ ಹೆಚ್ಚಿಸಲು ಮತ್ತು ತಮಿಳುನಾಡಿನ ಆರ್ಥಿಕತೆಗೆ ಅರ್ಥಪೂರ್ಣ ಕೊಡುಗೆ ನೀಡಲು ಟಿ.ಎನ್.ಎಸ್.ಡಿ.ಸಿಯ ವೆಟ್ರಿ ನಿಚಯಂ ಉಪಕ್ರಮವು ಅಗತ್ಯ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುತ್ತವೆ.
ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾದೊಂದಿಗಿನ ಈ ಸಹಯೋಗವು ರೊಬೊಟಿಕ್ಸ್ ಮತ್ತು ಯಾಂತ್ರೀಕರಣ ವನ್ನು ಕೌಶಲ್ಯ ಕಾರ್ಯಕ್ರಮಗಳಲ್ಲಿ ಸಂಯೋಜಿಸುತ್ತದೆ, ಸುಧಾರಿತ ತರಬೇತಿ ಅವಕಾಶಗಳನ್ನು ನಮ್ಮ ಯುವಕರಿಗೆ ತೆರೆದಿಡುತ್ತದೆ. ಈ ಮೂಲಕ ತಮಿಳು ನಾಡು ಮತ್ತು ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಕಾರ್ಯಪಡೆಯನ್ನು ಸಿದ್ಧಪಡಿಸುತ್ತದೆ" ಎಂದು ಜಿಲ್ಲಾಧಿಕಾರಿ ತಿರು ಸಿ. ದಿನೇಶ್ ಕುಮಾರ್ ಹೇಳಿದರು.
"ಡೆಲ್ಟಾದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ನಾವು ಕೇವಲ ತರಬೇತಿ ಉಪಕ್ರಮಕ್ಕೆ ಸೀಮಿತ ವಾಗಿಸಿಲ್ಲ. ಬದಲಾಗಿ ಭಾರತದ ಕೈಗಾರಿಕಾ ಭವಿಷ್ಯದಲ್ಲಿ ದೀರ್ಘಾವಧಿಯ ಹೂಡಿಕೆಯಾಗಿ ನೋಡುತ್ತೇವೆ. ಈ ಸೆಂಟರ್ ಆಫ್ ಎಕ್ಸʼಲೆನ್ಸ್ ಕೇಂದ್ರವು ಯಾಂತ್ರೀಕೃತ ಸಾಮರ್ಥ್ಯಗಳ ಹೆಚ್ಚಿಸಲು ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಗಳ ರೂಪಾಂತರ ಬೆಂಬಲಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ರೊಬೊಟಿಕ್ಸ್, ಪಿಎಲ್ಸಿ ಯಾಂತ್ರೀಕೃತಗೊಳಿಸುವಿಕೆ ಮತ್ತು ಸ್ಮಾರ್ಟ್ ಅಸೆಂಬ್ಲಿ ತಂತ್ರಜ್ಞಾನಗಳಿಗೆ ಪ್ರಾಯೋಗಿಕವಾಗಿ ಒಡ್ಡಿಕೊಳ್ಳುವುದನ್ನು ಸಕ್ರಿಯ ಗೊಳಿಸುವ ಮೂಲಕ, ಉತ್ಪಾದಕತೆ, ನಾವೀನ್ಯತೆ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆ ಹೆಚ್ಚಿಸಲು, ಮುಂದಿನ ಪೀಳಿಗೆಯ ವೃತ್ತಿಪರರನ್ನು ಸಬಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿ ದ್ದೇವೆ" ಎಂದು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾದ ಅಧ್ಯಕ್ಷ ಬೆಂಜಮಿನ್ ಲಿನ್ ಹೇಳಿದರು.
ಸೆಂಟರ್ ಆಫ್ ಎಕ್ಸʼಲೆನ್ಸ್ ಕೇಂದ್ರವು, ರೊಬೊಟಿಕ್ಸ್ (4-ಆಕ್ಸಿಸ್ ಮತ್ತು 6-ಆಕ್ಸಿಸ್), PLC ಆಟೊಮೇಷನ್ ಮತ್ತು ಸ್ಮಾರ್ಟ್ ಅಸೆಂಬ್ಲಿ ಸಿಸ್ಟಮ್ಗಳ ಕೇಂದ್ರೀಕರಿಸಿಕೊಂಡು ಕಾರ್ಯಾ ಚರಿಸುತ್ತದೆ. ಇದು 4-ಆಕ್ಸಿಸ್ ಮತ್ತು 6-ಆಕ್ಸಿಸ್ ರೊಬೊಟಿಕ್ ಸಿಸ್ಟಮ್ಗಳು, PLC ತರಬೇತಿ ಕಾರ್ಯಸ್ಥಳಗಳು ಮತ್ತು ನೇರ ಕೈಗಾರಿಕಾ ಪರಿಸರಗಳನ್ನು ನಿಕಟವಾಗಿ ಪುನರಾವರ್ತಿಸುವ ಸ್ಮಾರ್ಟ್ ಸ್ಕ್ರೂಡ್ರೈವರ್ ಅಸೆಂಬ್ಲಿ ಸೆಲ್ ಸೇರಿದಂತೆ ಸುಧಾರಿತ ಮೂಲಸೌಕರ್ಯದಿಂದ ಬೆಂಬಲಿತವಾಗಿದೆ.
"ಈ ಸೆಂಟರ್ ಆಫ್ ಎಕ್ಸʼಲೆನ್ಸ್ ಕೇಂದ್ರವನ್ನು ಕೈಗಾರಿಕಾ ಪರಿಸ್ಥಿತಿಗಳ ಅರಿವಾಗುವಂತೆ ವಿನ್ಯಾಸ ಗೊಳಿಸ ಲಾಗಿದೆ. ತರಬೇತಾದವರು ಯಾಂತ್ರೀಕೃತ ವ್ಯವಸ್ಥೆಗಳಲ್ಲಿ ಪ್ರಾಯೋಗಿಕ, ಅಪ್ಲಿಕೇಶನ್-ಆಧಾರಿತ ಅನುಭವ ಪಡೆಯುವುದನ್ನು ಸೆಂಟರ್ ಆಫ್ ಎಕ್ಸʼಲೆನ್ಸ್ ಕೇಂದ್ರದಿಂದ ದೃಢಪಡಿಸಿಕೊಳ್ಳಬಹುದು. ರಚನಾತ್ಮಕ ಅಲ್ಪಾವಧಿ ಮತ್ತು ದೀರ್ಘಾ ವಧಿಯ ಕಾರ್ಯಕ್ರಮಗಳ ಮೂಲಕ, ಯಾಂತ್ರೀಕೃತಗೊಂಡ ವಲಯಗಳನ್ನು ಬೆಂಬಲಿ ಸುವ ಮತ್ತು ಮುಂದುವರಿದ ಉತ್ಪಾದನೆಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ಸಾಮರ್ಥ್ಯವಿರುವ ಬಲವಾದ, ಉದ್ಯಮ-ಸಿದ್ಧ ಪ್ರತಿಭಾ ಪೈಪ್ಲೈನ್ ಅನ್ನು ನಿರ್ಮಿಸಲು ನಾವು ಉದ್ದೇಶಿಸಿ ದ್ದೇವೆ" ಎಂದು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್ ಹೇಳಿದರು.
ಕೌಶಲ್ಯ ಫಲಿತಾಂಶಗಳು ಮತ್ತು ನೇರ ಉದ್ಯಮ ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ರಚನಾತ್ಮಕ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಸೆಂಟರ್ ಆಫ್ ಎಕ್ಸʼಲೆನ್ಸ್ ಕೇಂದ್ರವು ಮಾಸಿಕ 120 ಗಂಟೆಗಳ ಅಲ್ಪಾವಧಿಯ ತರಬೇತಿ ಕಾರ್ಯಕ್ರಮ ಮತ್ತು ತ್ರೈಮಾಸಿಕ ಆಧಾರದ ಮೇಲೆ 272 ಗಂಟೆಗಳ ದೀರ್ಘಾವಧಿಯ ಕಾರ್ಯಕ್ರಮಗಳನ್ನು TNSDC ಯ ಪ್ರಮುಖ ಉಪಕ್ರಮ ವೆಟ್ರಿ ನಿಚಯಂ ಅಡಿಯಲ್ಲಿ ನಡೆಸುತ್ತದೆ. ಪ್ರತಿ ಬ್ಯಾಚ್ʼನ ಬೇಡಿಕೆಯನ್ನು ಗಮನ ದಲ್ಲಿಟ್ಟುಕೊಂಡು 20 ರಿಂದ 25 ಮಂದಿಗೆ ಅವಕಾಶ ಕಲ್ಪಿಸುತ್ತದೆ.
ಈ ಉಪಕ್ರಮದೊಂದಿಗೆ ಕೃಷ್ಣಗಿರಿ ಜಿಲ್ಲೆಯಲ್ಲಿ, TNSDC ಯೊಂದಿಗಿನ ಪಾಲುದಾರಿಕೆ ಯಲ್ಲಿ, ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ, ಭಾರತದ ಉತ್ಪಾದನಾ ರೂಪಾಂತರ, ಕೌಶಲ್ಯ ಅಭಿವೃದ್ಧಿ ಆದ್ಯತೆಗಳು ಮತ್ತು ಕೈಗಾರಿಕಾ ಪ್ರಗತಿಗೆ ತನ್ನ ದೀರ್ಘಕಾಲೀನ ಬದ್ಧತೆಗೆ ಸಾಕ್ಷ್ಯ ನೀಡುತ್ತಿದೆ. ಉದ್ಯಮ, ಸರ್ಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳ ನಡುವೆ ಬಲವಾದ ಸಹಯೋಗವನ್ನು ಈ ಉಪಕ್ರಮವು ಬೆಳೆಸುವು ದಲ್ಲದೇ ಸ್ಥಿತಿಸ್ಥಾಪಕ ಮತ್ತು ತಂತ್ರಜ್ಞಾನ-ಚಾಲಿತ ಭವಿಷ್ಯ ನಿರ್ಮಿಸುತ್ತದೆ ಹಾಗೂ ಕೈಗಾರಿಕಾ ಪ್ರಗತಿಯನ್ನು ದೀರ್ಘಾ ವಧಿಯ ಪರಿಸರ ಉಸ್ತುವಾರಿ ಮತ್ತು ಸುಸ್ಥಿರ ಅಭಿವೃದ್ಧಿ ಉದ್ದೇಶಗಳೊಂದಿಗೆ ಜೋಡಿಸುತ್ತದೆ.
ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರದ ಉದ್ಘಾಟನೆಯ ಜೊತೆಗೆ, ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಬರಗೂರಿನಲ್ಲಿ 30,000 ಸಸಿಗಳ ನೆಡುವ ಮೂಲಕ ದೊಡ್ಡ ಪ್ರಮಾಣದ ಮರ ನೆಡುವ ಅಭಿಯಾನವನ್ನು ಆಯೋಜಿಸಿತು.