ಬೆಂಗಳೂರು: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳ ಪ್ರಯುಕ್ತ ಧರ್ಮಸ್ಥಳದ ವಸ್ತು ಪ್ರದರ್ಶನ ಮಂಟಪ ದಲ್ಲಿ ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್ ಸಂಸ್ಥೆಯ ಗುರು ಬಿ.ನಾಗೇಶ್ ಮತ್ತು ಶಿಷ್ಯ ವೃಂದದವರಿಂದ ಶ್ರೀ ಮಂಜುನಾಥ ಚರಿತೆ ವೈಭವ ನೃತ್ಯರೂಪಕ 20ಕ್ಕೂ ಹೆಚ್ಚು ಕಲಾ ವಿದರಿಂದ ಒಂದು ಗಂಟೆ ಕಾಲ ಸುಧೀರ್ಘ ಪ್ರದರ್ಶನ ನಡೆಯಿತು. ನೃತ್ಯ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: Bangalore News: ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಉತ್ತೇಜಿಸಲು ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿದ ನ್ಯೂಬರ್ಗ್ ಆನಂದ್
ಡಾ.ಡಿ ವೀರೇಂದ್ರ ಹೆಗಡೆಯವರಿಂದ ಮೆಚ್ಚುಗೆ
ಕಾರ್ತಿಕ ಮಾಸದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಅಮೋಘ ಕಾರ್ಯಕ್ರಮದಲ್ಲಿ ನಿಮ್ಮ ಮಂಜುನಾಥ ಸ್ವಾಮಿಯ ವೈಭವದ ಬಗ್ಗೆ ನೃತ್ಯಂಜಲಿ ಮೂಲಕ ಮೂಡಿಬಂದ ಕಾರ್ಯಕ್ರಮ ಬಹಳ ಅಮೋಘ ಮತ್ತು ಅತ್ಯದ್ಭುತವಾಗಿದ್ದು. ಒಂದು ಗಂಟೆಯ ಕಾರ್ಯ ಕ್ರಮ ಸಮಯ ಹೋದದ್ದೇ ಗೊತ್ತಾಗಿಲ್ಲ. ಎಲ್ಲಾ ಚಿಕ್ಕ ಪುಟ್ಟ ಪುಟಾಣಿಗಳ ಜೊತೆ ಹಾಗೂ ಎಲ್ಲಾ ಕಲಾವಿದರು ಸೇರಿ ಮಾಡಿದ ನೃತ್ಯ ರೂಪಕ ಬಹಳ ಜನ ಮೆಚ್ಚುಗೆಯನ್ನು ಪಡೆದಿದೆ.
ಆನ್ಲೈನ್ ಮುಖಾಂತರ ಪೂಜ್ಯ ಹೆಗ್ಗಡೆಯವರ ಕುಟುಂಬದವರು ಮತ್ತು ಹಲವಾರು ವೀಕ್ಷಕರು ವೀಕ್ಷಿಸಿದ್ದಾರೆ ಎಂದು ಕೇಳಿ ಪಟ್ಟೆ ಎಲ್ಲರಿಗೂ ಸಂತೋಷವಾಗಿದೆ ಎಂದು ಮಾಳ ಹರ್ಷೇಂದ್ರ ಜೈನ್ ತಿಳಿಸಿದ್ದಾರೆ