ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೀಪಾವಳಿ ಹಬ್ಬ: ಊರಿಗೆ ತೆರಳುವವರ ಅನುಕೂಲಕ್ಕೆ ಬೆಂಗಳೂರಿನಿಂದ 908 ವಿಶೇಷ ಬಸ್‌ಗಳ ಸಂಚಾರ ಆರಂಭಿಸಿದ KSRTC

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ ಊರುಗಳಿಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಒಟ್ಟು 908 ವಿಶೇಷ ಬಸ್‌ಗಳ ಸೌಲಭ್ಯವನ್ನು ಕಲ್ಪಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಹೊರತುಪಡಿಸಿ ನಗರದ 11 ಸ್ಥಳಗಳಲ್ಲಿ ಬಸ್‌ಗಳ ಪಿಕಪ್ ಪಾಯಿಂಟ್‌ಗಳು ಮತ್ತು ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳನ್ನು ತೆರೆಯಲಾಗಿದೆ.

ಸಂಗ್ರಹ ಚಿತ್ರ

ಬೆಂಗಳೂರು: ದೀಪಾವಳಿ (Diwali Festival) ಹಬ್ಬದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ ಊರುಗಳಿಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಒಟ್ಟು 908 ವಿಶೇಷ ಬಸ್‌ಗಳ ಸೌಲಭ್ಯವನ್ನು ಕಲ್ಪಿಸಿದೆ. ಹಬ್ಬದ ದಿನಗಳಲ್ಲಿ ಉಂಟಾಗುವ ವಿಪರೀತ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರಿಗೆ ಸುಗಮ ಪ್ರಯಾಣದ ವ್ಯವಸ್ಥೆ ಕಲ್ಪಿಸಲು ನಿಗಮವು ಈ ಮಹತ್ವದ ಕ್ರಮ ಕೈಗೊಂಡಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಹೊರತುಪಡಿಸಿ ನಗರದ 11 ಸ್ಥಳಗಳಲ್ಲಿ ಬಸ್‌ಗಳ ಪಿಕಪ್ ಪಾಯಿಂಟ್‌ಗಳು ಮತ್ತು ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳನ್ನು ತೆರೆಯಲಾಗಿದೆ. ಮಂಗಳೂರಿಗೆ 49, ದಾವಣಗೆರೆಗೆ 42, ಹುಬ್ಬಳ್ಳಿ ಮತ್ತು ಕುಂದಾಪುರಕ್ಕೆ ತಲಾ 35, ಬೆಳಗಾವಿಗೆ 29, ಶಿವಮೊಗ್ಗ ಮತ್ತು ತಿರುಪತಿಗೆ ತಲಾ 24, ಹೊಸಪೇಟೆಗೆ 23, ವಿಜಯಪುರ ಮತ್ತು ತಿರುಚಿರಾಪಳ್ಳಿಗೆ ತಲಾ 22, ಗೋಕರ್ಣ, ಸಾಗರ ಮತ್ತು ಮಧುರೈಗೆ ತಲಾ 21 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಶಿರಸಿಗೆ 17, ಉಡುಪಿ ಮತ್ತು ಬಳ್ಳಾರಿಗೆ ತಲಾ 16, ಕಲಬುರಗಿಗೆ 15, ಕುಂಭಕೋಣಂಗೆ 14, ಪುತ್ತೂರು ಮತ್ತು ತಿರುಕ್ಕೋಯಿಲೂರಿಗೆ ತಲಾ 13, ಚಿಕ್ಕಮಗಳೂರಿಗೆ 12, ಸೇಲಂಗೆ 11, ಹರಿಹರ, ಶೃಂಗೇರಿ ಮತ್ತು ತಿರುವಣ್ಣಾಮಲೈಗೆ ತಲಾ 10, ಮಡಿಕೇರಿ, ಯಲ್ಲಾಪುರ ಮತ್ತು ಚಿಕ್ಕೋಡಿಗೆ ತಲಾ 9 ಬಸ್‌ಗಳು ಸಂಚರಿಸಲಿವೆ. ಹಗರಿಬೊಮ್ಮನಹಳ್ಳಿ, ಹೊರನಾಡು, ಹೂವಿನಹಡಗಲಿ ಮತ್ತು ಕಲ್ಲಕುರಿಚಿಗೆ ತಲಾ 8; ಭಟ್ಕಳ, ಬೀದರ್, ಕಾರವಾರ, ಸಂಕೇಶ್ವರ, ಸುಳ್ಯ, ಜಮಖಂಡಿ, ಪುದುಚೇರಿ ಮತ್ತು ವಿಲ್ಲುಪುರಂಗೆ ತಲಾ 7 ವಿಶೇಷ ಬಸ್‌ ವ್ಯವಸ್ಥೆ ಇರಲಿದೆ.

ಚೆನ್ನೈ, ಪಣಜಿ, ಧಾರವಾಡ, ಕಡಲೂರು, ಕೊಪ್ಪಳ, ಮಂತ್ರಾಲಯ, ಆನವಟ್ಟಿ, ಬಿ.ಸಿ.ರೋಡ್, ಬೆಟಗೇರಿ, ಗೋಕಾಕ, ಹೊಸದುರ್ಗ, ಶಿವಮೊಗ್ಗ ಜಿಲ್ಲೆಯ ಹುಂಚ, ಮೂಡುಬಿದಿರೆ, ಮುದ್ದೇಬಿಹಾಳ, ಮುಂಡರಗಿ, ರಾಮದುರ್ಗ, ಸವದತ್ತಿ, ಸಿಂದಗಿ, ತಾಳಿಕೋಟೆ, ತೀರ್ಥಹಳ್ಳಿ, ವಿರಾಜಪೇಟೆ, ಯಾದಗಿರಿ, ಆಂಧ್ರಪ್ರದೇಶದ ಬಾಲಿಜಕಂಡ್ರಿಗ ಮತ್ತು ತಮಿಳುನಾಡಿನ ತಿರುಟ್ಟಣಿಗೆ ತಲಾ 4 ಬಸ್‌ ಇರಲಿದೆ. ಕೆಂಪೇಗೌಡ ಬಸ್ ನಿಲ್ದಾಣದ ನಾಲ್ಕು ಟರ್ಮಿನಲ್‌ಗಳು, ವಿಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಮಲ್ಲೇಶ್ವರಂ 18ನೇ ಕ್ರಾಸ್, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ಯಲಹಂಕ ಸ್ಯಾಟಲೈಟ್ ಟೌನ್, ಬಸವೇಶ್ವರನಗರ ಟಿಟಿಎಂಸಿ, ಜಯನಗರ 4ನೇ ಬ್ಲಾಕ್, ಶಾಂತಿನಗರ ಬಸ್ ನಿಲ್ದಾಣ, ಐಟಿಐ ಮುಖ್ಯ ಗೇಟ್, ಚಿಕ್ಕಲಸಂದ್ರ ಮತ್ತು ನಾಯ್ಡು ಲೇಔಟ್‌ಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.

ಧನ್ ತೇರಸ್ ಪೂಜೆಯಿಂದ ದೀಪಾವಳಿ ಕಾರ್ಡ್ಸ್ ನೈಟ್, ಭಾಯಿ ದೂಜ್ ಉಡುಗೊರೆಗಳವರೆಗೆ ಹಬ್ಬದ ಉಡುಗೊರೆಗಳು

ಕೊನೆಯ ಕ್ಷಣದ ತರಾತುರಿ ಮತ್ತು ಗೊಂದಲಗಳನ್ನು ತಪ್ಪಿಸಲು ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ. ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಮುಂಗಡವಾಗಿ ಸೀಟುಗಳನ್ನು ಕಾಯ್ದಿರಿಸಿಕೊಳ್ಳಲು ಕೋರಲಾಗಿದೆ. ಅಲ್ಲದೆ, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಬುಕ್ ಮಾಡಿದರೆ ಶೇಕಡಾ 5 ರಷ್ಟು ರಿಯಾಯಿತಿ ಹಾಗೂ ಹೋಗಿ ಬರುವ (Round Trip) ಟಿಕೆಟ್ ಒಟ್ಟಿಗೆ ಬುಕ್ ಮಾಡಿದರೆ ಮರಳಿ ಬರುವ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ಸೌಲಭ್ಯ ಇರಲಿದೆ ಎಂದು ನಿಗಮ ತಿಳಿಸಿದೆ. ಹಬ್ಬ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುವ ಸಾರ್ವಜನಿಕರಿಗಾಗಿಯೂ ಸಹ ಆಯಾ ಊರುಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳ ಮರು-ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು KSRTC ಪ್ರಕಟಣೆಯಲ್ಲಿ ತಿಳಿಸಿದೆ.

Vishakha Bhat Heggar

View all posts by this author