ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪಾರ್ಶ್ವವಾಯು ಜಾಗೃತಿ ಓಟ ಆಯೋಜಿಸಿದ ಅಪೋಲೋ ಹಾಸ್ಪಿಟಲ್
5,000+ ಜನರು, ಗುರಿ ಒಂದೇ: ವಿಶ್ವ ಪಾರ್ಶ್ವವಾಯು ದಿನದ ಮುನ್ನಾ ದಿನದಂದು ಪಾರ್ಶ್ವ ವಾಯು ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪಾರ್ಶ್ವವಾಯು ಜಾಗೃತಿ ಓಟ ಆಯೋಜಿಸಿದ ಅಪೋಲೋ ಹಾಸ್ಪಿಟಲ್. ಕಾರ್ಯಕ್ರಮ ಉದ್ಘಾಟಿಸಿದ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ನಂತರ ಮಾತನಾಡಿ, ಪಾರ್ಶ್ವವಾಯು ಲಕ್ಷಣಗಳನ್ನು ಬೇಗನೆ ಗುರುತಿಸಿ, ಗೋಲ್ಡನ್ ಅವರ್ ನಲ್ಲಿಯೇ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ಮಾಡಿ ಜೀವ ಉಳಿಸುವ ಮಹತ್ವವನ್ನು ಸಾರಿದರು.
-
Ashok Nayak
Oct 27, 2025 12:43 AM
ಬೆಂಗಳೂರು: ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆ ಆಗಿರುವ ಅಪೋಲೋ ಹಾಸ್ಪಿಟಲ್(
Apollo Hospital) ಸಂಸ್ಥೆಯು ವಿಶ್ವ ಪಾರ್ಶ್ವವಾಯು ದಿನ 2025( World Stroke Day 2025)ರ ಪ್ರಯುಕ್ತ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಪಾರ್ಶ್ವವಾಯು ಜಾಗೃತಿ ಓಟ ಮತ್ತು ನಡಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು.
ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳನ್ನು ಗುರುತಿಸುವ ಮತ್ತು ಗೋಲ್ಡನ್ ಅವರ್ ನಲ್ಲಿ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವ ಮಹತ್ವವನ್ನು ಸಾರಲು ಆಯೋಜಿಸ ಲಾಗಿದ್ದ ಈ ಮಹತ್ವದ ಕಾರ್ಯಕ್ರಮದಲ್ಲಿ 5,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಾಗರೀಕರು, ವೈದ್ಯಕೀಯ ವೃತ್ತಿಪರರು ಮತ್ತು ಸ್ಟ್ರೋಕ್ ನಿಂದ ಪಾರಾಗಿ ಬದುಕುಳಿದ ಸಾಹಸಿಗಳು ಪಾಲ್ಗೊಂಡಿದ್ದು, ಒಟ್ಟಾರೆಯಾಗಿ ಈ ಕಾರ್ಯಕ್ರಮವು ಪಾರ್ಶ್ವವಾಯು ಸಮಸ್ಯೆಯನ್ನು ತಡೆಗಟ್ಟಬಹುದು, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದು ಮತ್ತು ಸಕಾಲಿಕ ಚಿಕಿತ್ಸೆ ಒದಗಿಸಿದರೆ ಅವರು ಗುಣಮುಖರಾಗಬಹುದು ಎಂಬ ಸಂದೇಶವನ್ನು ಸಾರಿತು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ( Tejaswi Surya, MP for Bangalore South), ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಐಪಿಎಸ್ ಮತ್ತು ಜಯನಗರ ಶಾಸಕ ಸಿ ಕೆ ರಾಮಮೂರ್ತಿಯವರ ಕಾರ್ಯಕ್ರಮ ಉದ್ಘಾಟಿಸಿದರು.
ಇದನ್ನೂ ಓದಿ: Tejasvi Surya: ರಾಜ್ಯಕ್ಕೆ ಹಿಡಿದಿರುವ ದೊಡ್ಡ ಗ್ರಹಣವೆಂದರೆ ಕಾಂಗ್ರೆಸ್ ಆಡಳಿತ: ತೇಜಸ್ವಿ ಸೂರ್ಯ ಕಿಡಿ
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಹುತೇಕರು 10 ಕಿ.ಮೀ ಓಟ ಮತ್ತು 4.5 ಕಿ.ಮೀ ಗೋಲ್ಡನ್ ಅವರ್ ವಾಕ್ ನಲ್ಲಿ ಪಾಲ್ಗೊಂಡಿದ್ದು, ಈ ಕಾರ್ಯಕ್ರಮವು ಪಾರ್ಶ್ವವಾಯು ತುರ್ತುಸ್ಥಿತಿಗಳಲ್ಲಿ ಸೂಕ್ತರೀತಿಯ ಚಿಕಿತ್ಸೆ ಮತ್ತು ತ್ವರಿತ ಪ್ರತಿಕ್ರಿಯೆ ನೀಡುವ ಮಹತ್ವವನ್ನು ಸೂಚಿಸಿತು. ಮೆದುಳಿನ ಕಾರ್ಯಕ್ಷಮತೆಯನ್ನು ಉಳಿಸಲು ಮತ್ತು ಅಂಗವೈಕಲ್ಯವನ್ನು ಕಡಿಮೆ ಮಾಡಲು ಪ್ರತೀ ನಿಮಿಷ ಕೂಡ ಮಹತ್ವದ್ದಾಗಿದೆ ಎಂಬುದನ್ನು ಈ ಕಾರ್ಯಕ್ರಮ ಒತ್ತಿಹೇಳಿತು.
ಕಾರ್ಯಕ್ರಮವನ್ನು ಉದ್ಘಾಟಿಸುವ ವೇಳೆ ವಿಶೇಷ ಅತಿಥಿಯಾಗಿ ಹಾಜರಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಅವರು ಮಾತನಾಡಿ, “ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತದಂತಹ ಯೋಜನೆಗಳ ಮೂಲಕ ಪಾರ್ಶ್ವವಾಯು ನಿರ್ವಹಣಾ ವಿಭಾಗವನ್ನು ಬಲಪಡಿಸಲು, ಸಕಾಲಿಕ ಚಿಕಿತ್ಸೆಯ ಲಭ್ಯತೆಯನ್ನು ಸುಧಾರಿಸಲು ಮತ್ತು ರೋಗ ತಡೆಗಟ್ಟುವ ಚಿಕಿತ್ಸೆಯನ್ನು ಸುಧಾರಿಸಲು ಒತ್ತು ನೀಡಿದೆ. ರಾಜ್ಯ ಮಟ್ಟದಲ್ಲಿ ಅಪೋಲೋ ಹಾಸ್ಪಿಟಲ್ ಗಳು ಆಯೋಜಿಸುತ್ತಿರುವ ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಆರೋಗ್ಯಕರ ಮತ್ತು ಜಾಗೃತ ಸಮಾಜವನ್ನು ನಿರ್ಮಿಸುವಲ್ಲಿ ಪ್ರಮುಖ ಮತ್ತು ಮಹತ್ವದ ಪಾತ್ರ ವಹಿಸುತ್ತವೆ. ಪಾರ್ಶ್ವವಾಯು ಸಮಸ್ಯೆಯು ಒಂದು ಹೆಚ್ಚುತ್ತಿರುವ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದಕ್ಕೆ ಹೆಚ್ಚಿನ ಜಾಗೃತಿ ಮತ್ತು ತ್ವರಿತ ಪ್ರತಿಕ್ರಿಯೆ ಅಗತ್ಯವಾಗಿದೆ. ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಸೂಕ್ತ ಸಮಯದಲ್ಲಿ ರೋಗ ಗುರುತಿಸುವಿಕೆ ಮತ್ತು ತಕ್ಷಣದ ವೈದ್ಯಕೀಯ ಚಿಕಿತ್ಸೆ ಒದಗಿಸುವ ಮಹತ್ವ ಸಾರಲಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವುದರಿಂದ ರೋಗಿಯ ಚೇತರಿಕೆ ಪ್ರಮಾಣ ಮತ್ತು ಉತ್ತಮ ಫಲಿತಾಂಶ ಹೊಂದಬಹುದು ಎಂಬುದನ್ನು ನೆನಪಿಸುತ್ತವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಐಪಿಎಸ್ ಅವರು, “ಪಾರ್ಶ್ವವಾಯು ಕೇವಲ ವೈದ್ಯಕೀಯ ಸಮಸ್ಯೆ ಮಾತ್ರವೇ ಅಲ್ಲ, ಬದಲಾಗಿ ಇದು ಒಂದು ಸಮಾಜದ ಸಮಸ್ಯೆ. ಹಾಗಾಗಿ ಇದರ ಕುರಿತು ಜಾಗೃತಿ, ಸಕಾಲಿಕ ಚಿಕಿತ್ಸೆ ಮತ್ತು ಈ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಜವಾಬ್ದಾರಿತನ ಎಲ್ಲವೂ ಮಹತ್ವದ್ದಾಗಿದೆ. ದೈನಂದಿನ ಜೀವನದ ಒತ್ತಡದಲ್ಲಿ ನಾವು ನಮ್ಮ ಆರೋಗ್ಯವನ್ನು ಬಹಳಷ್ಟು ಸಲ ಕಡೆಗಣಿಸುತ್ತೇವೆ. ಆ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ನಮ್ಮ ಸುರಕ್ಷತೆ ಮತ್ತು ಕ್ಷೇಮದ ಕಡೆಗೆ ಗಮನ ಹರಿಸಲು ನಮಗೆ ನೆನಪಿಸುತ್ತವೆ. ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ ಅಪೋಲೋ ಹಾಸ್ಪಿಟಲ್ ಸಂಸ್ಥೆಗೆ ನಾನು ಮೆಚ್ಚುಗೆ ಸಲ್ಲಿಸುತ್ತಿದ್ದೇನೆ. ಸ್ಟ್ರೋಕ್ ನ ಆರಂಭಿಕ ಲಕ್ಷಣಗಳನ್ನು ಗುರುತಿಸಿ, ತಕ್ಷಣವೇ ಸಹಾಯ ಒದಗಿಸುವಂತೆ ಮಾಡುವುದರಿಂದ ಜೀವ ಉಳಿಸಬಹುದು, ಜೊತೆಗೆ ಅಂಗ ವೈಕಲ್ಯವನ್ನು ತಡೆಯಬಹುದು ಮತ್ತು ಫಲಿತಾಂಶಗಳನ್ನೇ ಬದಲಿಸಬಹುದು. ಈ ವಿಚಾರದಲ್ಲಿ ಹುಷಾರಾಗಿರಲು ಮತ್ತು ಸಕ್ರಿಯವಾಗಿ ಮುಂದುವರಿಯಲು ಒಗ್ಗಟ್ಟಾಗಿ ನಿಲ್ಲೋಣ. ಯಾಕೆಂದರೆ ಬದುಕಿನಲ್ಲಿ ಪ್ರತೀ ಕ್ಷಣವೂ ಮಹತ್ವದ್ದಾಗಿದೆ” ಎಂದು ಹೇಳಿದರು.
ಜಯನಗರದ ಅಪೋಲೋ ಹಾಸ್ಪಿಟಲ್ ನ ನರವಿಜ್ಞಾನ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಮತ್ತು ಸಲಹೆಗಾರ ಡಾ. ಪಿ. ಸತೀಶ್ಚಂದ್ರ ಅವರು ಮಾತನಾಡಿ, “ಭಾರತದಲ್ಲಿ ಮರಣ ಮತ್ತು ದೀರ್ಘಕಾಲಿಕ ಅಂಗವೈಕಲ್ಯದ ಪ್ರಮುಖ ಕಾರಣಗಳಲ್ಲಿ ಪಾರ್ಶ್ವವಾಯು ಕೂಡ ಒಂದಾಗಿದ್ದು, ಇದು ಬಾರತದ ಜನಸಂಖ್ಯೆಯ ದೊಡ್ಡ ಭಾಗವನ್ನು ಬಾಧಿಸುತ್ತಿದೆ. ವಿಶೇಷವಾಗಿ ಕೆಲಸದ ವಯಸ್ಸಿನ ಯುವಕ ರಲ್ಲಿಯೂ ಈ ಸಮಸ್ಯೆ ಹೆಚ್ಚಳವಾಗಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಅನಿಯಂತ್ರಿತ ರಕ್ತದೊತ್ತಡ, ಮಧುಮೇಹ, ಧೂಮಪಾನ ಮತ್ತು ವ್ಯಾಯಾಮ ವಿಲ್ಲದ ಜೀವನಶೈಲಿ. ಹೃದಯಾಘಾತಕ್ಕಿಂತ ಸ್ಟ್ರೋಕ್ ನ ಲಕ್ಷಣಗಳು ಬಹಳ ಭಿನ್ನವಾಗಿದ್ದು, ಈ ಲಕ್ಷಣಗಳನ್ನು ಕಡೆಗಣಿಸುವುದೇ ಜಾಸ್ತಿ. ಅಥವಾ ಆ ಲಕ್ಷಣಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳ ಲಾಗುತ್ತದೆ. ಇದರಿಂದ ಚಿಕಿತ್ಸೆ ನೀಡುವುದು ವಿಳಂಬವಾಗುತ್ತದೆ. ಆರಂಭಿಕ ಎಚ್ಚರಿಕೆ ಚಿಹ್ನೆಗಳನ್ನು ಗಮನಿಸುವ ಮೂಲಕ ಜಾಗೃತಿಯನ್ನು ಹೆಚ್ಚಿಸಿ, ತಕ್ಷಣ ಚಿಕಿತ್ಸೆ ನೀಡುವುದರಿಂದ ಫಲಿತಾಂಶಗಳನ್ನು ಗಮನಾರ್ಹವಾಗಿ ಸುಧಾರಿಸಬಹುದು ಮತ್ತು ಅನೇಕ ಜೀವಗಳನ್ನು ಉಳಿಸಬಹುದು” ಎಂದು ಹೇಳಿದರು.
ಅಪೋಲೋ ಹಾಸ್ಪಿಟಲ್ ನ ಕರ್ನಾಟಕ ವಿಭಾಗದ ಸಿಇಓ ಆದ ಅಕ್ಷಯ್ ಓಲೆಟಿ ಅವರು ಮಾತ ನಾಡಿ, “ಪಾರ್ಶ್ವವಾಯು ಜಾಗೃತಿ ಓಟ ಮತ್ತು ನಡಿಗೆ ಕಾರ್ಯಕ್ರಮವು ಆಸ್ಪತ್ರೆಯ ಗೋಡೆಗಳನ್ನು ಮೀರಿ ಸಮಾಜದ ಆರೋಗ್ಯವನ್ನು ಕಾಪಾಡಲು ಯತ್ನಿಸುವ ಅಪೋಲೋ ಹಾಸ್ಪಿಟಲ್ ಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕಾರ್ಯಕ್ರಮದ ಮೂಲಕ ನಾವು ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳನ್ನು ಗುರುತಿಸಲು, ತ್ವರಿತವಾಗಿ ಕಾರ್ಯನಿರ್ವಹಿಸಲು ಮತ್ತು ಸಕಾಲಿಕ ಆರೈಕೆಯನ್ನು ಹೊಂದಲು ಸಿದ್ಧರಿರುವ ಜಾಗೃತ ಮತ್ತು ಪ್ರತಿಕ್ರಿಯಾಶೀಲ ಸಮಾಜವನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ವಿಳಂಬ ಮಾಡುವ ಏಕೈಕ ಕಾರಣದಿಂದ ಯಾವುದೇ ಜೀವ ಕಳೆದುಕೊಳ್ಳಬಾರದು ಅಥವಾ ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗಬಾರದು ಅನ್ನುವುದು ನಮ್ಮ ಉದ್ದೇಶವಾಗಿದೆ” ಎಂದು ಹೇಳಿದರು.
ಜಯನಗರ ಅಪೋಲೋ ಹಾಸ್ಪಿಟಲ್ ನ ಯುನಿಟ್ ಹೆಡ್ ಡಾ. ಡಾ. ಯತೀಶ್ ಗೋವಿಂದಯ್ಯ ಅವರು ಮಾತನಾಡಿ, “ಪಾರ್ಶ್ವವಾಯು ನಿರ್ವಹಣೆ ಮಾಡಲು ಕೇವಲ ಸುಧಾರಿತ ಮೂಲಸೌಕರ್ಯ ಮಾತ್ರವೇ ಅಗತ್ಯ ಇರುವುದಲ್ಲ, ಬದಲಿಗೆ ಇಡೀ ವೈದ್ಯಕೀಯ ವ್ಯವಸ್ಥೆಯಾದ್ಯಂತ ಸಮನ್ವಯ ಮತ್ತು ಸಿದ್ಧತೆಯೂ ಬಹಳ ಅಗತ್ಯವಾಗಿದೆ. ಅಪೋಲೋ ಆಸ್ಪತ್ರೆಗಳಲ್ಲಿ, ರೋಗಿಗಳು ಗೋಲ್ಡನ್ ಅವರ್ ನಲ್ಲಿಯೇ ತ್ವರಿತ ರೋಗನಿರ್ಣಯ, ಸ್ಪಷ್ಟ ಚಿತ್ರಣ ಮತ್ತು ಚಿಕಿತ್ಸೆಯನ್ನು ಪಡೆಯುವುದು ಸಾಧ್ಯವಾಗಿಸಲು ಸಂಯೋಜಿತ ಪಾರ್ಶ್ವವಾಯು ಚಿಕಿತ್ಸಾ ವ್ಯವಸ್ಥೆಗಳನ್ನು ರೂಪಿಸಿದ್ದೇವೆ. ಅದರ ಜೊತೆಗೆ ಸ್ಟ್ರೋಕ್ ನ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡಾಗಲೇ ಆಸ್ಪತ್ರೆಗೆ ಕರೆದುಕೊಂಡು ಬರುವುದು ಕೂಡ ಬಹಳ ಮಹತ್ವದ್ದಾಗಿದೆ. ಈ ರೀತಿಯ ಯೋಜನೆಗಳು ಜಾಗೃತಿ ಮತ್ತು ಸಕಾಲಿಕ ಕ್ರಿಯೆಯ ನಡುವಿನ ನಿರ್ಣಾಯಕ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ಅಂತಿಮವಾಗಿ ರೋಗಿಯ ಬದುಕುಳಿಯುವಿಕೆ ಮತ್ತು ಚೇತರಿಕೆ ಪ್ರಮಾಣವನ್ನು ಜಾಸ್ತಿ ಮಾಡುತ್ತವೆ” ಎಂದು ಹೇಳಿದರು.
ಬನ್ನೇರುಟ್ಟ ರಸ್ತೆಯ ಅಪೋಲೋ ಹಾಸ್ಪಿಟಲ್ ನ ಹಿರಿಯ ಕನ್ಸಲ್ಟೆಂಟ್ ನರವಿಜ್ಞಾನಿ ಮತ್ತು ಪಾರ್ಶ್ವವಾಯು ತಜ್ಞ ಡಾ. ಸೂರ್ಯನಾರಾಯಣ ಶರ್ಮಾ ಅವರು ಮಾತನಾಡಿ, “ಪಾರ್ಶ್ವವಾಯು ಒಂದು ವೈದ್ಯಕೀಯ ತುರ್ತುಸ್ಥಿತಿಯಾಗಿದ್ದು, ತಕ್ಷಣದ ಚಿಕಿತ್ಸೆಯನ್ನು ಬಯಸುತ್ತದೆ. ಆರಂಭಿಕ ಲಕ್ಷಣಗಳನ್ನು ಗುರುತಿಸುವುದರಿಂದ ಚಿಕಿತ್ಸೆಯ ಫಲಿತಾಂಶಗಳನ್ನು ಗಮನಾರ್ಹವಾಗಿ ಸುಧಾರಿಸಬಹುದು ಮತ್ತು ಜೀವ ಉಳಿಸಬಹುದು. ನರವಿಜ್ಞಾನಿಯಾಗಿ, ಸೂಕ್ತ ಸಕಾಲಿಕ ಚಿಕಿತ್ಸೆಯ ಪರಿಣಾಮವನ್ನು ನಾನು ನೇರವಾಗಿ ಕಂಡಿದ್ದೇನೆ. ಗೋಲ್ಡನ್ ಅವರ್ ನಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸುವ ಮಹತ್ವವನ್ನು ಸಾರುವುದು ಮತ್ತು ಜಾಗೃತಿಯನ್ನು ಹರಡುವುದು ದೀರ್ಘಕಾಲಿಕ ಅಂಗವೈಕಲ್ಯವನ್ನು ತಡೆಗಟ್ಟುವುದಕ್ಕೆ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಬಹಳ ನಿರ್ಣಾಯಕವಾಗಿದೆ” ಎಂದು ಹೇಳಿದರು.
ಜಯನಗರ ಅಪೋಲೋ ಸ್ಪೆಷಾಲಿಟಿ ಹಾಸ್ಪಿಟಲ್ ನ ನ್ಯೂರೋ ಆಂಡ್ ವಾಸ್ಕ್ಯುಲರ್ ಇಂಟರ್ ವೆನ್ಷನಲ್ ರೇಡಿಯಾಲಜಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಚಿನ್ಮಯ್ ನಾಗೇಶ್ ಅವರು ಮಾತನಾಡಿ, “ಪ್ರಮುಖ ರಕ್ತನಾಳಗಳಲ್ಲಿ ಆಗಿರುವ ಬ್ಲಾಕ್ ಗಳಿಂದ ಅಥವಾ ತಡೆಗಳಿಂದ ಪಾರ್ಶ್ವವಾಯು ಉಂಟಾಗಬಹುದು ಮತ್ತು ಸಕಾಲಿಕ ಚಿಕಿತ್ಸೆಯಿಂದ ಗುಣಮುಖ ಕೂಡ ಆಗಬಹುದು. ಮೆಕ್ಯಾನಿಕಲ್ ಥ್ರಂಬೆಕ್ಟಮಿ ಎಂಬ ಸುಧಾರಿತ ಎಂಡೋ ವಾಸ್ಕ್ಯುಲರ್ ಕಾರ್ಯವಿಧಾನವು ತಡೆ ಉಂಟಾದ ರಕ್ತನಾಳವನ್ನು ತೆರೆದು ಮತ್ತು ಸರಾಗವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬಹುದು. ಆದರೆ ಗೋಲ್ಡನ್ ಅವರ್ ನಲ್ಲಿಯೇ ಈ ಕಾರ್ಯವಿಧಾನವನ್ನು ನಿರ್ವಹಿಸಿದರೆ ಚೇತರಿಕೆ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರ್ಯವಿಧಾನವನ್ನು ವಿಶೇಷ ನ್ಯೂರೋ ಇಂಟರ್ ವೆನ್ಷನಿಸ್ಟ್ ಗಳು ಮಾತ್ರ ನಿರ್ವಹಿಸುತ್ತಾರೆ ಮತ್ತು ಈ ಚಿಕಿತ್ಸೆಯು ನ್ಯೂರೋ ಕ್ಯಾತ್ ಲ್ಯಾಬ್ ಗಳಿರುವ ಸಮಗ್ರ ಪಾರ್ಶ್ವವಾಯು ಕೇಂದ್ರಗಳಲ್ಲಿ ಮಾತ್ರ ಲಭ್ಯವಿದೆ” ಎಂದು ಹೇಳಿದರು.
ಬನ್ನೇರುಟ್ಟ ರಸ್ತೆಯ ಅಪೋಲೋ ಹಾಸ್ಪಿಟಲ್ ನ ಹಿರಿಯ ಕನ್ಸಲ್ಟೆಂಟ್ ನರವಿಜ್ಞಾನಿ ಆಗಿರುವ ಡಾ. ಗುರುಚರಣ್ ಅಡೂರ್ ಅವರು ಮಾತನಾಡಿ, “ಪಾರ್ಶ್ವವಾಯು ಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ಚಿಕಿತ್ಸೆಗೆ ಬಹಳ ಮುಖ್ಯವಾಗಿದೆ. ಸಕಾಲಿಕ ಚಿಕಿತ್ಸೆಯಿಂದ ರೋಗಿಯ ಫಲಿತಾಂಶಗಳನ್ನು ಗಮನಾರ್ಹವಾಗಿ ಸುಧಾರಿಸಬಹುದು ಮತ್ತು ದೀರ್ಘಕಾಲಿಕ ಅಂಗವೈಕಲ್ಯವನ್ನು ಕಡಿಮೆ ಮಾಡಬಹುದು. ಒಬ್ಬ ನ್ಯೂರಾಲಜಿಸ್ಚ್ ಆಗಿ ಹೇಳುವುದಾದರೆ ಪಾರ್ಶ್ವವಾಯು ಚಿಕಿತ್ಸೆ ವಿಚಾರದಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುವ ಅಗತ್ಯ ಬಹಳ ಇದೆ” ಎಂದು ಹೇಳಿದರು.
ಜಯನಗರ ಅಪೋಲೋ ಸ್ಪೆಷಾಲಿಟಿ ಹಾಸ್ಪಿಟಲ್ ನ ಮಿನಿಮಲ್ ಆಕ್ಸೆಸ್ ನ್ಯೂರೋಸರ್ಜರಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಅಜಯ್ ಹೆರೂರ್ ಮತ್ತು ನ್ಯೂರೋ ಸರ್ಜರಿ (ಬ್ರೇನ್ ಆಂಡ್ ಸ್ಪೈನ್) ಕನ್ಸಲ್ಟೆಂಟ್ ಡಾ. ಕೃಷ್ಣ ಚೈತನ್ಯ ಎನ್ ಅವರು ಮಾತನಾಡಿ, “ಪಾರ್ಶ್ವವಾಯು ಒಂದು ಅತ್ಯಂತ ಗಂಭೀರ ಸ್ಥಿತಿಯಾಗಿದ್ದು, ತ್ವರಿತ ಮತ್ತು ನಿಖರವಾದ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಸಂಕೀರ್ಣ ಸಮಸ್ಯೆಯಾಗಿದೆ. ನರಶಸ್ತ್ರಚಿಕಿತ್ಸಕರಾಗಿ ನಾವು ಹೇಳುವುದಾದರೆ, ಗೋಲ್ಡನ್ ಅವರ್ ನಲ್ಲಿಯೇ ಸೂಕ್ತವಾಗಿ ಕಾರ್ಯನಿರ್ವಹಿಸುವುದರಿಂದ ಮೆದುಳಿನ ಹಾನಿಯನ್ನು ಕಡಿಮೆ ಮಾಡಬಹುದು ಮತ್ತು ರೋಗಿಯ ಚಿಕಿತ್ಸಾ ಫಲಿತಾಂಶಗಳನ್ನು ಸುಧಾರಿಸಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸುವುದು ಜೀವ ಉಳಿಸುವ ಮತ್ತು ನಿಖರ ಚಿಕಿತ್ಸೆ ಒದಗಿಸುವ ವಿಚಾರದಲ್ಲಿ ಬಹಳ ಮಹತ್ವದ್ದಾಗಿದೆ” ಎಂದು ಹೇಳಿದರು.
ಜಯನಗರ ಅಪೋಲೋ ಸ್ಪೆಷಾಲಿಟಿ ಹಾಸ್ಪಿಟಲ್ ನ ನ್ಯೂರೋ ಸರ್ಜನ್ ಆಂಡ್ ಸ್ಪೈನ್ ಸರ್ಜನ್ ಕನ್ಸಲ್ಟೆಂಟ್ ಡಾ. ಸಂದೀಪ್ ವಿಕೆ ಅವರು ಮಾತನಾಡಿ, “ಪಾರ್ಶ್ವವಾಯು ಒಂದು ಕ್ಷಣದಲ್ಲಿ ಜೀವನವನ್ನು ಬದಲಾಯಿಸಬಹುದು. ಆದರೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದರೆ, ತ್ವರಿತ ಚಿಕಿತ್ಸೆ ಒದಗಿಸಿದರೆ ಮತ್ತು ಕರುಣೆಯಿಂದ ಕಾರ್ಯನಿರ್ವಹಿಸಿದರೆ ಇದರ ಗಂಭೀರ ಪರಿಣಾಮವನ್ನು ಕಡಿಮೆ ಮಾಡಬಹುದು. ಒಬ್ಬ ವ್ಯಕ್ತಿಯ ಮುಖದಲ್ಲಿ ಸಡನ್ ಬದಲಾವಣೆ ಕಂಡರೆ, ಕೈ ದುರ್ಬಲವಾದರೆ ಅಥವಾ ಆ ವ್ಯಕ್ತಿಗೆ ಮಾತನಾಡಲು ತೊಂದರೆಯಾದರೆ ತಕ್ಷಣವೇ ತುರ್ತು ವೈದ್ಯಕೀಯ ಸಹಾಯ ವಾಣಿಗೆ ಕರೆ ಮಾಡಿ. ಆಗ ಪ್ರತೀ ಸೆಕೆಂಡ್ ಕೂಡ ಮಹತ್ವದ್ದಾಗಿರುತ್ತದೆ. ಈ ರೋಗವನ್ನು ತಡೆಗಟ್ಟುವುದು ನಮ್ಮ ಪ್ರತಿದಿನದ ಆಯ್ಕೆಗಳಿಂದ ಪ್ರಾರಂಭವಾಗುತ್ತದೆ. ಈ ಸಮಸ್ಯೆಯಿಂದ ದೂರ ಇರಬೇಕಾದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು, ಹೃದಯ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಒಂದು ಸಮಾಜವಾಗಿ, ಒಗ್ಗಟ್ಟಾಗಿ ನಾವು ಹೆಚ್ಚಿನ ಜೀವಗಳನ್ನು ಉಳಿಸಬಹುದಾದ ಸೊಗಸಾದ ವೈದ್ಯಕೀಯ ನೆರವಿನ ಭವಿಷ್ಯದ ಸಮಾಜವನ್ನು ನಿರ್ಮಿಸಬಹುದು” ಎಂದು ಹೇಳಿದರು.
ಭಾರತದಲ್ಲಿ ಪ್ರತಿವರ್ಷ ಸುಮಾರು 18 ಲಕ್ಷ ಹೊಸ ಪಾರ್ಶ್ವವಾಯು ಪ್ರಕರಣಗಳು ದಾಖಲಾಗುತ್ತವೆ. ವಿಶೇಷವೆಂದರೆ ಇತ್ತೀಚೆಗೆ 50 ವರ್ಷದೊಳಗಿನ ವಯಸ್ಕರು ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗುತ್ತಿರುವುದು ಹೆಚ್ಚಾಗುತ್ತಿದೆ. ಈ ಹೆಚ್ಚುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಸಕಾಲಿಕ ರೋಗನಿರ್ಣಯ, ಸುಧಾರಿತ ತುರ್ತು ಆರೈಕೆ ಮತ್ತು ಸತತ ಜಾಗೃತಿ ಕಾರ್ಯಕ್ರಮಗಳನ್ನು ಯೋಜಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಅಪೋಲೋ ಆಸ್ಪತ್ರೆಗಳು ಪಾರ್ಶ್ವವಾಯು ಚಿಕಿತ್ಸಾ ಫಲಿತಾಂಶಗಳನ್ನು ಸುಧಾರಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಆಸ್ಪತ್ರೆಯು ಆರಂಭಿಕ ಎಚ್ಚರಿಕೆ ಲಕ್ಷಣಗಳನ್ನು ಗುರುತಿಸಲು ಮತ್ತು ತಕ್ಷಣದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಜನರಿಗೆ ಸಹಾಯ ಮಾಡಲು ಸಮಾಜ ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸುತ್ತದೆ.