ಬೆಂಗಳೂರು: ತಲಸೀಮಿಯಾದಿಂದ ಬಳಲುತ್ತಿರುವ 12 ವರ್ಷದೊಳಗಿನ ಎಲ್ಲ ಮಕ್ಕಳಿಗಾಗಿ ಡಿ.ಕೆ.ಎಂ.ಎಸ್ ಉಚಿತ ಎಚ್.ಎಲ್.ಎ ಟೈಪಿಂಗ್ ಘೋಷಿಸಿದೆ. 12 ವರ್ಷದ ತಲಸೀಮಿಯಾ ರೋಗಿ ಸಮೀಕ್ಷಾಗೆ, ಕೋಲಾರದ ದಿಲೀಪ್ ಕೆ. (೨೭) ಅವರು ತನ್ನ ಕಾಂಡಕೋಶ ದಾನ ಮಾಡಿ ಆಕೆಗೆ ಮರುಜನ್ಮ ನೀಡಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಎಂ.ಎಸ್ ಫೌಂಡೇಶನ್ ಇಂಡಿಯಾದ ಕಾರ್ಯನಿರ್ವಾಹಕ ಅಧ್ಯಕ್ಷ ಪ್ಯಾಟ್ರಿಕ್ ಪಾಲ್, ರಕ್ತದ ಕ್ಯಾನ್ಸರ್ ಮತ್ತು ಇತರೆ ರಕ್ತದ ಕಾಯಿಲೆಗಳಂತಹ ಮಾರಾಣಾಂತಿಕ ಕಾಯಿಲೆಗಳಿಗೆ ದುಬಾರಿ ವೆಚ್ಚದ ಕಾರಣ ದಿಂದಾಗಿ ಅತ್ಯಾಧುನಿಕ ಚಿಕಿತ್ಸೆ ಪಡೆಯಲು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ.
ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಮಾರ್ಗದರ್ಶನ ಮತ್ತು ಆರ್ಥಿಕ ಬೆಂಬಲದ ಸಂಭಾವ್ಯ ಮೂಲಗಳು ಭಾರತದಲ್ಲಿ ಚಿಕಿತ್ಸೆಯ ಲಭ್ಯತೆಯ ಮೇಲೆ ಪ್ರಭಾವ ಬೀರುವ ಅತ್ಯಂತ ನಿರ್ಣಾಯಕ ಅಂಶಗಳಾಗಿವೆ ಎಂದರು.
ಇದನ್ನೂ ಓದಿ: Bangalore News: ನಟ ವಿಜಯ ದಳಪತಿ ನಾಯಕತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಕ್ರಾಂತಿ: ಎಸ್.ಸಂಗಮೇಶ್
ಡಿ.ಕೆ.ಎಂ.ಎಸ್ ಸಮೂಹದ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಲ್ಕೆ ನುಜಾರ್ ಮಾತನಾಡಿ, ಭಾರತದ ಡಿ.ಕೆ.ಎಂ.ಎಸ್ ಫೌಂಡೇಶನ್‌ನ ತಲಸೀಮಿಯಾ ಕಾರ್ಯಕ್ರಮವನ್ನು ಚಿಕಿತ್ಸಾ ವೆಚ್ಛ ಹಾಗೂ ಲಭ್ಯತೆಯ ನಡುವಿನ ಗಂಭೀರ ಅಂತರವನ್ನು ನಿವಾರಿಸಲು ವಿನ್ಯಾಸ ಗೊಳಿಸಲಾಗಿದೆ. ಇದು ಅನೇಕ ಬಾರಿ ರೋಗಿಗಳು ಗುಣಪಡಿಸುವ ಚಿಕಿತ್ಸೆ ಪಡೆಯದಂತೆ ತಡೆಯು ತ್ತದೆ. ಬೀಟಾ ತಲಸೀಮಿಯಾದಿಂದ ಬಳಲುತ್ತಿರುವ 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಎಚ್‌ಎಲ್‌ಎ ಟೈಪಿಂಗ್‌ನಂತಹ ಉಪಕ್ರಮಗಳ ಮೂಲಕ ಕಸಿ ಪ್ರಕ್ರಿಯೆಯ ಹಾದಿಯಲ್ಲಿರುವ ಕುಟುಂಬಗಳ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಬ್ಲಡ್‌ಕೇರ್ ಹೆಮಟಾಲಜಿ ಕ್ಲಿನಿಕ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ನ ಕನ್ಸಲ್ಟೆಂಟ್ ಹೆಮಟಾಕಜಿಸ್ಟ್ ಡಾ. ಸಿದ್ದೇಶ್ ಕಲಾಂತ್ರಿ ಸೇರಿದಂತೆ ಇತರರಿದ್ದರು.