ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಡವರಿಗೆ ಡಿಕೆಶಿ‌ ಸರಕಾರದಿಂದ 15 ಲಕ್ಷ ಉಚಿತ ನಿವೇಶನ ಹಂಚಿಕೆ

ಸರಕಾರಕ್ಕೆ ಗುರುವಾರ 100 ದಿನಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯ ನಂತರ ಡಿಸಿಎಂ ಪರಮೇಶ್ವರ್ ಈ ಮಾಹಿತಿಯನ್ನು ಹಂಚಿಕೊಂಡರು. ಒಂದು ಕಾಲಕ್ಕೆ ವಿದ್ಯಾರ್ಥಿ ಗಳಲ್ಲಿ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ವಿದ್ಯಾರ್ಥಿ ಸಂಘದ ಚುನಾವಣೆಯನ್ನು 3 ದಶಕಗಳ ನಂತರ ನಡೆಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ.

ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರ, ಈ ತಿಂಗಳೇ 5 ಲಕ್ಷ ನಿವೇಶನ 60 ಸಾವಿರ ಉದ್ಯೋಗ ಸೃಷ್ಟಿಗಾಗಿ 60 ಸಾವಿರ ಕೋಟಿ ರು. ಹೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರಕಾರಕ್ಕೆ 100 ದಿನಗಳು ತುಂಬಿದ ಹಿನ್ನೆಲೆ ಯಲ್ಲಿ ರಾಜ್ಯಾದ್ಯಂತ 15 ಲಕ್ಷ ಬಡವರಿಗೆ ಉಚಿತವಾಗಿ ನಿವೇಶನ ಹಂಚಲು ರಾಜ್ಯ ಸರಕಾರ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ. ಪ್ರತಿ ಜಿಲ್ಲೆಗೆ 50 ಸಾವಿರ ನಿವೇಶನ ಕೊಡಲು ನಿರ್ಧರಿಸಲಾಗಿದೆ. ಮೂರು ಹಂತಗಳಲ್ಲಿ ನಿವೇಶನ ಹಂಚಿಕೆ ನಡೆಯಲಿದ್ದು, ಸೆಪ್ಟೆಂಬರ್‌ನಲ್ಲಿ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. 2ನೇ ಮತ್ತು 3ನೇ ಹಂತದಲ್ಲಿ ತಲಾ 5 ಲಕ್ಷ ನಿವೇಶನ ಹಂಚಿಕೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಸರಕಾರಕ್ಕೆ ಗುರುವಾರ 100 ದಿನಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯ ನಂತರ ಡಿಸಿಎಂ ಪರಮೇಶ್ವರ್ ಈ ಮಾಹಿತಿಯನ್ನು ಹಂಚಿಕೊಂಡರು. ಒಂದು ಕಾಲಕ್ಕೆ ವಿದ್ಯಾರ್ಥಿ ಗಳಲ್ಲಿ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ವಿದ್ಯಾರ್ಥಿ ಸಂಘದ ಚುನಾವಣೆಯನ್ನು 3 ದಶಕಗಳ ನಂತರ ನಡೆಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ.

ಇದನ್ನೂ ಓದಿ: CM DK Shivakumar: ಸಿಎಂ ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು; ವಿಧಾನಸೌಧದಲ್ಲೇ ಚಿಕಿತ್ಸೆ

ಇದಲ್ಲದೇ ಏರೋಸ್ಪೇಸ್ ಪಾಲಿಸಿ ಹಾಗೂ ಉದ್ಯೋಗ ಪ್ರೋತ್ಸಾಹಧನ ಯೋಜನೆ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 60 ಸಾವಿರ ಉದ್ಯೋಗ ಸೃಷ್ಟಿ: ಕರ್ನಾಟಕ ಏರೋಸ್ಪೇಸ್ ಪಾಲಿಸಿ 2026-31ಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಬಾಹ್ಯಾಕಾಶ, ರಕ್ಷಣೆ, ವಿಮಾನಯಾನ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಕೇಂದ್ರವನ್ನಾಗಿ ಸ್ಥಾಪಿಸುವ ಗುರಿ ಹೊಂದಲಾಗಿದೆ. 5 ವರ್ಷಗಳಲ್ಲಿ 60 ಸಾವಿರ ಕೋಟಿ ರು. ಹೂಡಿಕೆ ಮಾಡುತ್ತಿದ್ದು, 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.

ಫೋಕಸ್ ಏರಿಯಾ ಮತ್ತು ನಾನ್ ಫೋಕಸ್ ಏರಿಯಾ ಅಂತ ಮಾಡಿದ್ದು, ಹೂಡಿಕೆದಾರರಿಗೆ ಸಬ್ಸಿಡಿ ಕೊಡಲಾಗುತ್ತದೆ. ಎಚ್‌ಎಎ‌ಲ್‌ʼನಲ್ಲಿ 40 ವಿಮಾನ ಉತ್ಪಾದನೆ ಮಾಡುವ ಯೋಜನೆಯೂ ಇದ್ದು, ಈ ರೀತಿಯ ಯೋಜನೆಗೆ ಯಾರು ಉತ್ಪಾದಕರು ಬರುತ್ತಾರೋ ಅವರಿಗೆ ಸಬ್ಸಿಡಿ ರೂಪದಲ್ಲಿ ಸಹಾಯ ಮಾಡಲು ನೀತಿಯನ್ನು ರೂಪಿಸಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ 42.83 ಕೋಟಿ ವೆಚ್ಚದಲ್ಲಿ ಡ್ರೋನ್ ಟೆಕ್ನಾಲಜಿ ಫೆಸಿಲಿಟಿ ಸೆಂಟರ್ ಸ್ಥಾಪನೆಗೆ ಸರಕಾರದ ನಿರ್ಧರಿಸಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಈ ಹಿಂದೆ ಕಾಲೇಜುಗಳಲ್ಲಿ ನಡೆಯುತ್ತಿದ್ದ ಚುನಾವಣೆಯನ್ನು ಕೆಲವು ಕಾರಣಗಳಿಂದ ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೆ ಚುನಾವಣೆ ಮಾಡಲು ತೀರ್ಮಾನ ತೆಗೆದು ಕೊಂಡಿದ್ದೇವೆ.

2026-27ನೇ ಸಾಲಿನಿಂದ ಇದನ್ನು ಜಾರಿಗೆ ತರಲಾಗುತ್ತಿದ್ದು, ಯಾವುದೇ ಪಕ್ಷ ಮತ್ತು ಸಂಘಟನೆಗಳು ಹೋಗಿ ಪ್ರಚಾರ ಮಾಡುವುಂತಿಲ್ಲ ಎಂದ ಪರಮೇಶ್ವರ್ ತಿಳಿಸಿದ್ದಾರೆ. ವಿದ್ಯಾರ್ಥಿ ನಾಯಕರು ರಾಜ್ಯವಾಳಿದರು ಬರೋಬ್ಬರಿ ಮೂರು ದಶಕಗಳ ಬಳಿಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚುನಾವಣೆ ನಡೆಯಲಿದೆ. ಮೂರು ದಶಕಗಳ ಹಿಂದೆ ರಾಜ್ಯದ ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆಗಳು ನಡೆದಿದ್ದವು. ಆ ಸಮಯದಲ್ಲಿ ಚುನಾವಣೆ ಎಂದರೆ ಕೇವಲ ಮತದಾನ ವಲ್ಲ, ಅದು ಗಂಭೀರ ರಾಜಕೀಯ ಕದನವಾಗಿತ್ತು. ಚುನಾವಣೆ ಸಮಯದಲ್ಲಿ ಗಲಾಟೆ, ದೊಂಬಿ, ಹಲ್ಲೆ ತಪ್ಪಿಸಲು ರೌಡಿ ಶೀಟರ್‌ಗಳೋನ್ನು ಮುನ್ನೆಚ್ಚರಿಕೆಯಿಂದ ವಶಕ್ಕೆ ತೆಗೆದುಕೊಳ್ಳುವ ಪರಿಸ್ಥಿತಿ ಕೂಡ ಇತ್ತು.

ವಿಶೇಷವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ ನಡೆದ ಭಾರೀ ಮಾರಾಮಾರಿ, ಹಿಂಸಾಚಾರ, ಗಲಾಟೆಗಳು ಆಗಿನ ಸರಕಾರಕ್ಕೆ ತಲೆನೋವಾಗಿದ್ದವು. ಆ ಘಟನೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಸ್ಥಗಿತಗೊಳಿಸುವ ತೀರ್ಮಾನ ಕೈಗೊಳ್ಳ ಲಾಯಿತು. 1989ರಲ್ಲಿ ಆಗಿನ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರಕಾರ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಇದೀಗ ಸಿಎಂ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಸರಕಾರ 37 ವರ್ಷದ ಬಳಿಕ ಕಾಲೇಜು, ವಿವಿ ಚುನಾವಣೆ ನಡೆಸಲು ತೀರ್ಮಾನ ಮಾಡಿದೆ. ಈಗಿನ ಹಲವು ಪ್ರಮುಖ ನಾಯಕರು ಇಂತಹ ವಿದ್ಯಾರ್ಥಿ ದೆಸೆಯಿಂದಲೇ ಚುನಾವಣೆ ಯಲ್ಲಿ ಸ್ಪರ್ಧಿಸಿ ನಾಯಕತ್ವ ರೂಢಿಸಿಕೊಂಡು ರಾಜಕೀಯ ನಾಯಕರಾಗಿದ್ದಾರೆ.

ಘೋಷಣೆಗಳು

ಮೂರು ಹಂತಗಳಲ್ಲಿ 15 ಲಕ್ಷ ನಿವೇಶನಗಳ ಹಂಚಿಕೆ, ಈ ತಿಂಗಳಲ್ಲೇ 5 ಲಕ್ಷ ನಿವೇಶನ ಬಡವರಿಗೆ ಹಸ್ತಾಂತರ

ಕರ್ನಾಟಕ ಏರೋಸ್ಪೇಸ್ ನೀತಿಗೆ ಅನುಮೋದನೆ, ಎಚ್‌ಎಎಲ್‌ನಲ್ಲಿ 40 ವಿಮಾನಗಳ ಉತ್ಪಾದನೆ

ಹೂಡಿಕೆದಾರರಿಗೆ ಸಬ್ಸಿಡಿ ನೀಡಲು ನಿರ್ಧಾರ, ಉದ್ಯೋಗ ಪ್ರಮಾಣ ಹೆಚ್ಚಳ, ಪ್ರೋತ್ಸಾಹಧನ ನೀಡಿಕೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 42.83 ಕೋಟಿ ರು. ವೆಚ್ಚದಲ್ಲಿ ಡ್ರೋನ್ ಟೆಕ್ನಾಲಜಿ ಫೆಸಿಲಿಟಿ ಸೆಂಟರ್ ಆರಂಭ

3 ದಶಕಗಳ ನಂತರ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲು ರಾಜ್ಯ ಸರಕಾರ ಒಪ್ಪಿಗೆ

image

ಶಕ್ತಿ ಯೋಜನೆ ಸಂಬಂಧ ಸ್ಮಾರ್ಟ್ ಕಾರ್ಡ್ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕೆ 237 ಕೋಟಿ ರು. ಖರ್ಚಾಗಲಿದೆ. ಸರಕಾರ 100 ಕೋಟಿ ರು. ಹಣ ನೀಡಲಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ವಿತರಣೆ ನಡೆಯಲಿದ್ದು, ಇದರಿಂದ ಮಹಿಳೆಯರ ಉಚಿತ ಪ್ರಯಾಣದ ನಿಖರ ಮಾಹಿತಿ ಸಿಗಲಿದೆ.

-ಡಾ.ಜಿ.ಪರಮೇಶ್ವರ್, ಡಿಸಿಎಂ