ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್‌ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿ

ಸುಮಾರು 10-12 ವರ್ಷಗಳ ಹಿಂದೆಯೇ ಇಟಲಿಯ ಹೈಡ್ರೋನಿಕ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ್ದ 'ಕ್ರಿಯೇಟಿವ್ ಡಿವೈಸಸ್' ಹಾಗೂ 'ಎಲಿವೇಟರ್ ಟ್ರೇಡ್ ಸೆಂಟರ್', ಈಗ ಅಲ್ಲಿನ ನೂತನ ಉತ್ಪಾದನಾ ಘಟಕ ಹಾಗೂ ಟೆಸ್ಟಿಂಗ್ ಟವರ್, ಆರ್ ಅಂಡ್ ಡಿ ವಿಭಾಗಕ್ಕೆ ಭೇಟಿ ನೀಡಿ ಹೊಸ ಆವಿಷ್ಕಾರಗಳನ್ನು ಭಾರತಕ್ಕೆ ತರುವ ಕುರಿತು ಚರ್ಚಿಸಿವೆ.

ಬೆಂಗಳೂರು / ಮಿಲಾನ್: ಇಟಲಿಯ 'ಎಚ್.ಎಲ್. ಹೈಡ್ರೋನಿಕ್' ಸಂಸ್ಥೆಯ ವಿಶೇಷ ಆಹ್ವಾನದ ಮೇರೆಗೆ, ಕರ್ನಾಟಕ ಹೈಡ್ರಾಲಿಕ್ ಮತ್ತು ಎಲಿವೇಟರ್ ತಯಾರಕರ ಒಕ್ಕೂಟದ ಅಧ್ಯಕ್ಷ ಹಾಗೂ 'ಕ್ರಿಯೇಟಿವ್ ಡಿವೈಸಸ್' ಮ್ಯಾನೇಜಿಂಗ್ ಡೈರೆಕ್ಟರ್ ಕೈಗಾರಿಕಾರತ್ನ ಡಾ.ಬಿ.ಎಂ.ಉಮೇಶ್ ಕುಮಾರ್ ಅವರು ಇಟಲಿಗೆ ಅಧಿಕೃತ ಭೇಟಿ ನೀಡಿದ್ದಾರೆ.

ಸುಮಾರು 10-12 ವರ್ಷಗಳ ಹಿಂದೆಯೇ ಇಟಲಿಯ ಹೈಡ್ರೋನಿಕ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ್ದ 'ಕ್ರಿಯೇಟಿವ್ ಡಿವೈಸಸ್' ಹಾಗೂ 'ಎಲಿವೇಟರ್ ಟ್ರೇಡ್ ಸೆಂಟರ್', ಈಗ ಅಲ್ಲಿನ ನೂತನ ಉತ್ಪಾದನಾ ಘಟಕ ಹಾಗೂ ಟೆಸ್ಟಿಂಗ್ ಟವರ್, ಆರ್ ಅಂಡ್ ಡಿ ವಿಭಾಗಕ್ಕೆ ಭೇಟಿ ನೀಡಿ ಹೊಸ ಆವಿಷ್ಕಾರಗಳನ್ನು ಭಾರತಕ್ಕೆ ತರುವ ಕುರಿತು ಚರ್ಚಿಸಿವೆ.

ಇದನ್ನೂ ಓದಿ: Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ

ಅಲ್ಲದೆ, ಇಟಲಿಯಲ್ಲಿ ನಡೆದ 'ಲಿಫ್ಟ್ ಎಕ್ಸ್‌ಪೋ ಇಟಾಲಿಯಾ 2026 ಪ್ರದರ್ಶನದಲ್ಲಿ ಭಾಗವಹಿಸಿದ ಡಾ. ಉಮೇಶ್ ಕುಮಾರ್, ಲಿಫ್ಟ್ ಪ್ರಯಾಣಿಕರ ಸುರಕ್ಷತಾ ತಂತ್ರಜ್ಞಾನ, ಹಾಗೂ ಆಧುನೀಕರಣದ ನೂತನ ಮಾನದಂಡಗಳ ಬಗ್ಗೆ ಜಾಗತಿಕ ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸಿದರು.

ಹೈಡ್ರೋನಿಕ್ ಕಂಪನಿಯ ಮಾರ್ಕೊ ಬೋಡಿಯೋ, ಕ್ರಿಸ್ಟಿನಾ ಆಲ್ಫ್ರೆಡ್ಸನ್, ಫೆಡೆರಿಕೊ ಲಾಮಾ, ಮಾಂಟೆಫೆರೊ ಇಂಡಿಯಾ ಕಂಪನಿಯ ಹರೀಶ್ ಹಾಗೂ ಪ್ರಿಯೇಶ್ ಈ ಸಂದರ್ಭದಲ್ಲಿ ಉಪಸ್ಥಿತ ರಿದ್ದರು.

ಭಾರತದಲ್ಲಿ ವಿಶ್ವ ದರ್ಜೆಯ ಲಿಫ್ಟ್ ತಂತ್ರಜ್ಞಾನವನ್ನು ವಿಸ್ತರಿಸಲು ಉಭಯ ಸಂಸ್ಥೆಗಳು ಬದ್ಧತೆ ವ್ಯಕ್ತಪಡಿಸಿವೆ.