ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Havyaka Mahasabha: ಹವ್ಯಕ ಮಹಾಸಭೆ ಅಧ್ಯಕ್ಷರಾಗಿ 11ನೇ ಬಾರಿಗೆ ಡಾ.ಗಿರಿಧರ ಕಜೆ ಪುನರಾಯ್ಕೆ; 16 ನಿರ್ದೇಶಕರ ಅವಿರೋಧ ಆಯ್ಕೆ

Dr. Giridhara Kaje: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭೆಯ 82ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆದಿದೆ. ಈ ವೇಳೆ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಹವ್ಯಕ ಮಹಾಸಭೆ ಅಧ್ಯಕ್ಷರಾಗಿ 11ನೇ ಬಾರಿಗೆ ಡಾ.ಗಿರಿಧರ ಕಜೆ ಅವರು ಪುನರಾಯ್ಕೆ ಆಗಿದ್ದಾರೆ.

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭೆಯ 82ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಭಾನುವಾರ ನಡೆದಿದ್ದು, ಈ ವೇಳೆ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಹವ್ಯಕ ಮಹಾಸಭೆ ಅಧ್ಯಕ್ಷರಾಗಿ 11ನೇ ಬಾರಿಗೆ ಡಾ.ಗಿರಿಧರ ಕಜೆ ಅವರು ಪುನರಾಯ್ಕೆ ಆಗಿದ್ದು, 16 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.

ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು

  1. ಡಾ. ಗಿರಿಧರ ಕಜೆ - ಅಧ್ಯಕ್ಷರು
  2. ಆರ್ ಎಂ ಹೆಗಡೆ ಬಾಳೆಸರ - ಉಪಾಧ್ಯಕ್ಷರು
  3. ಶ್ರೀಧರ ಜೆ ಭಟ್ಟ ಕೆಕ್ಕಾರು - ಉಪಾಧ್ಯಕ್ಷರು
  4. ಸಿಎ. ವೇಣುವಿಘ್ನೇಶ ಸಂಪ - ಪ್ರಧಾನ ಕಾರ್ಯದರ್ಶಿ
  5. ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ - ಕಾರ್ಯದರ್ಶಿ
  6. ಆದಿತ್ಯ ಹೆಗಡೆ ಕಲಗಾರು - ಕಾರ್ಯದರ್ಶಿ
  7. ಕೃಷ್ಣಮೂರ್ತಿ ಎಸ್ ಭಟ್ ಯಲಹಂಕ - ಕೋಶಾಧಿಕಾರಿ

2025-26ನೇ ಸಾಲಿನ ಆಡಳಿತ ಮಂಡಳಿಯ ನಾಮಾಂಕಿತ ನಿರ್ದೇಶಕರು

  1. ರಾಮಕೃಷ್ಣ ಭಟ್ಟ ಕುಕ್ಕಜೆ (ಬೆಂಗಳೂರು)
  2. ಶಶಾಂಕ ಶಾಂತರಾಮ ಹೆಗಡೆ (ಶಿರಸಿ)
  3. ವಿದ್ಯಾಧರ ಗುರುಶಕ್ತಿ (ಹೊಸನಗರ)
  4. ವಿನಾಯಕ ಭಟ್ಟ ಮುರೂರು (ಬೆಂಗಳೂರು )
  5. ಆನಂದ ಭಟ್ (ಬೆಂಗಳೂರು)
  6. ಡಾ.ಶಾರದಾ ಜಯಗೋವಿಂದ (ಬೆಂಗಳೂರು )
  7. ಶ್ರೀಧರ ಕೆ.ಎನ್ (ಸಾಗರ)
  8. ಜಿ. ಎಂ. ಭಟ್ಟ ಕಾಜಿನಮನೆ (ಸಿದ್ದಾಪುರ )
  9. ವಿ. ಎಮ್. ಹೆಗಡೆ (ಕಾರವಾರ)
  10. ಅರುಣ ಶ್ಯಾಮ್ (ಬೆಂಗಳೂರು )
  11. ಮಂಜುನಾಥ ಹೆಗಡೆ (ಬೆಂಗಳೂರು)
  12. ವಿಷ್ಣು ಭಟ್ಟ ಪಾದೇಕಲ್ಲು (ಉಡುಪಿ )
  13. ಎನ್.ಆರ್. ಹೆಗಡೆ ರಾಘೋಣ (ಬೆಂಗಳೂರು)
  14. ಕೆ. ಎನ್. ಮಂಜುನಾಥ ರಾವ್ (ಬೆಂಗಳೂರು )
  15. ಪ್ರಸನ್ನ ಹೆಗಡೆ ಕೆರೆಕೈ (ಸಾಗರ)ಎಲ್. ಆರ್. ಹೆಗಡೆ (ಬೆಂಗಳೂರು)
  16. ಎಲ್. ಆರ್. ಹೆಗಡೆ (ಬೆಂಗಳೂರು)

ಇದೇ ವೇಳೆ ವಿವಿಧ ಪ್ರಾಂತ್ಯಗಳ 16 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ 16 ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಯಾದರು.

ಅವಿರೋಧವಾಗಿ ಆಯ್ಕೆಯಾದ ವಿವಿಧ ಪ್ರಾಂತ್ಯಗಳ 16 ನಿರ್ದೇಶಕರು

ಬೆಂಗಳೂರು ಕ್ಷೇತ್ರ

  1. ಮುರಳಿಕೃಷ್ಣ ಕುಕ್ಕುಪುಣಿ
  2. ಪ್ರಶಾಂತ ಕುಮಾರ ಭಟ್
  3. ಕೃಷ್ಣಮೂರ್ತಿ ಶ್ರೀಧರ ಭಟ್
  4. ಆದಿತ್ಯ ಹೆಗಡೆ

ಉತ್ತರ ಕನ್ನಡ ಕ್ಷೇತ್ರ

  1. ಪ್ರಶಾಂತ ಹೆಗಡೆ
  2. ಅರುಣ ನಾರಾಯಣ ಹೆಗಡೆ

ಶಿವಮೊಗ್ಗ ಕ್ಷೇತ್ರ

  1. ಗಣಪತಿ ಭಟ್ ಜೆ. ವಿ.
  2. ಡಾ. ಮೈಥಿಲಿ ಸಿ.

ದಕ್ಷಿಣ ಕನ್ನಡ ಕ್ಷೇತ್ರ

  1. ಬಿ. ಶಿವಶಂಕರ ಭಟ್
  2. ರವಿಶಂಕರ ಎ. ಎನ್.
  3. ಕೂಡೂರು ರಾಮಚಂದ್ರ ಭಟ್
  4. ಪುರೋಹಿತ ನಾಗರಾಜ ಭಟ್
  5. ಕೆ. ಈಶ್ವರ ಭಟ್

ಹಾಸನ-ಚಿಕ್ಕಮಗಳೂರು ಕ್ಷೇತ್ರ

  1. ಜಿ. ರಾಜಗೋಪಾಲ ಜೋಷಿ

ಕರ್ನಾಟಕ ಇತರೆ ಪ್ರದೇಶ

  1. ಶ್ರೀಕಾಂತ ಭಟ್

ಹವ್ಯಕ ಸಂಘ- ಸಂಸ್ಥೆಗಳಿಂದ

  1. ಕೃಷ್ಣಮೂರ್ತಿ ಡಿ. ಎನ್. (ಹವ್ಯಕ ಸಂಘ (ರಿ) ಮೈಸೂರು)

ನಾಡಿನ ವಿವಿಧ ಪ್ರಾಂತ್ಯಗಳಲ್ಲಿ ಸಂಸ್ಕಾರೋತ್ಸವ ಆಯೋಜನೆ: ಡಾ.ಗಿರಿಧರ ಕಜೆ

_Havyaka Mahasabha (2)

ಬೆಂಗಳೂರು: ಹವ್ಯಕ ಸಮಾಜ ಸಂಸ್ಕಾರ ಭರಿತ ಸಮಾಜವಾಗಿದ್ದು, ನಮ್ಮ ಸಂಸ್ಕೃತಿ - ಸಂಸ್ಕಾರಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು‌ ಮಹಾಸಭೆಯಿಂದ 'ಸಂಸ್ಕಾರೋತ್ಸವ'ವನ್ನು ಆಯೋಜಿಸಲಾಗಿದ್ದು, ನಾಡಿನ ವಿವಿಧ ಪ್ರಾಂತ್ಯಗಳಲ್ಲಿ ಸಂಸ್ಕಾರೋತ್ಸವವನ್ನು ಆಯೋಜಿಸಲಾಗುವುದು ಎಂದು ಡಾ.ಗಿರಿಧರ ಕಜೆ ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಭಾನುವಾರ ನಡೆದ ಅಖಿಲ ಹವ್ಯಕ ಮಹಾಸಭೆಯ 82ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಡಾ.ಕಜೆಯವರು, ತೃತೀಯ ವಿಶ್ವ ಹವ್ಯಕ ಸಮ್ಮೇಳನ ಅಭೂತಪೂರ್ವ ಯಶಸ್ಸನ್ನು ಗಳಿಸಿದ್ದು, ನಾಡಿನ ಮೂಲೆಮೂಲೆಗಳಲ್ಲಿ ಸಮ್ಮೇಳನದ ಕುರಿತಾಗಿ ಪ್ರತಿಕ್ರಿಯೆ ಇಂದಿಗೂ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಸಮಾಜ ಸಂಘಟಿತವಾದಾಗ ಶಕ್ತಿಯುತವಾಗಲು ಸಾಧ್ಯ. ಹವ್ಯಕ ಮಹಾಸಭೆಯ ಸಮಾಜಮುಖಿ ಕಾರ್ಯಗಳಿಗೆ ಸಮಾಜದಿಂದ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗುತ್ತಿದ್ದು, ಬೇರೆ ಸಮಾಜದವರೂ ಕೂಡ ನಮ್ಮ ಸಮಾಜದ ಕಾರ್ಯಕ್ಕೆ ಅಯಾಚಿತವಾಗಿ ಸಹಕಾರ ನೀಡುತ್ತಿದ್ದಾರೆ. ಮಹಾಸಭೆಯ ಸಮಾಜೋತ್ಥಾನದ ಕಾರ್ಯಗಳನ್ನು ನಾಡಿನ ಬೇರೆ ಬೇರೆಬೇರೆ ಜನರೂ ಗುರುತಿಸುತ್ತಿದ್ದಾರೆ ಎಂದು ಹೇಳಿದರು.

ಹವ್ಯಕರು ಪ್ರಮುಖವಾಗಿ ನೆಲೆಸಿರುವ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಹಾಗೂ ಕಾಸರಗೋಡು ಭಾಗಗಳಲ್ಲಿ ಸ್ಥಳೀಯವಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘಟಿತರಾಗಲು ಪ್ರಯತ್ನ ಪಡಬೇಕಿದ್ದು, ಈ ದಿಸೆಯಲ್ಲಿ ಸಿದ್ದಾಪುರ, ಶಿರಸಿ ಮುಂತಾದ ಪ್ರದೇಶದಲ್ಲಿ ಮಹಾಸಭೆಯ ಪ್ರಾದೇಶಿಕ ಕೇಂದ್ರ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸಭೆಯನ್ನು ನಡೆಸಿ; ಸದಸ್ಯರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿ, ಮಹಾಸಭೆಯ ಕಾರ್ಯಗಳಿಗೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ನೀಡುತ್ತಿರುವ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ | ಆತ್ಮವಿಶ್ವಾಸಕ್ಕಿಂತ ದೊಡ್ಡ ಸಂಪತ್ತು ಈ ಜಗತ್ತಿನಲ್ಲಿ ಬೇರೆ ಇಲ್ಲ: ರಾಘವೇಶ್ವರ ಭಾರತೀ ಶ್ರೀ

ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಆಯವ್ಯಯ ಮಂಡಿಸಿ, ಖರ್ಚುವೆಚ್ಚಗಳ ಮಾಹಿತಿ ನೀಡಿದರು. ಮಹಾಸಭೆಯಲ್ಲಿ ಆರ್ಥಿಕ ಶಿಸ್ತಿಗಾಗಿ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು. ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ್ ಭಟ್ಟ ಮಲವಳ್ಳಿ, ಆದಿತ್ಯ ಕಲಗಾರು ಹಾಗೂ ಸಾಗರ, ಮಂಗಳೂರು, ಬೆಂಗಳೂರು, ಉತ್ತರ ಕನ್ನಡ, ಕಾಸರಗೋಡು ಸೇರಿದಂತೆ ಬೇರೆಬೇರೆ ಪ್ರಾಂತಗಳ ನಿರ್ದೇಶಕರು - ಸದಸ್ಯರು ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು.