ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr. Rashmi Hegde: ಶಿರಸಿಯ ಡಾ. ರಶ್ಮಿ ಹೆಗಡೆ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ನೇಮಕ

ಶಿರಸಿ ತಾಲೂಕಿನ ಬೊಪ್ಪನಳ್ಳಿಯ ರೋಹಿಣಿ ಮತ್ತು ಡಾ. ಲಕ್ಷ್ಮೀನಾರಾಯಣ ಹೆಗಡೆ ಅವರ ಪುತ್ರಿ ಡಾ. ರಶ್ಮಿ ಹೆಗಡೆ ಅವರು ಭಾರತೀಯ ಸೇನೆಯ ಮಿಲಿಟರಿ ಆಸ್ಪತ್ರೆಯಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಡಾ. ರಶ್ಮಿ ಹೆಗಡೆ ಅವರು ದೇಶ ಕಾಯುವ ಸೈನಿಕರ ಮತ್ತು ಅವರ ಕುಟುಂಬದವರ ವೈದ್ಯಕೀಯ ಸೇವೆಗೆ ತಮ್ಮನ್ನು ತೊಡಗಿಸಿಕೊಂಡು ಹಲವು ಯುವ ವೈದ್ಯರಿಗೆ ಮಾದರಿಯಾಗಿದ್ದಾರೆ.

ಶಿರಸಿಯ ಡಾ. ರಶ್ಮಿ ಹೆಗಡೆ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ನೇಮಕ

-

Prabhakara R Prabhakara R Sep 21, 2025 6:19 PM

ಶಿರಸಿ: ತಾಲೂಕಿನ ಯುವತಿಯೊಬ್ಬರು ಭಾರತೀಯ ಸೇನೆಯ ಮಿಲಿಟರಿ ಆಸ್ಪತ್ರೆಯಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಆಂಧ್ರ ಪ್ರದೇಶದ ಸಿಕಂದರಾಬಾದ್‌ ಮಿಲಿಟರಿ ಆಸ್ಪತ್ರೆಯಲ್ಲಿ ಡಾ. ರಶ್ಮಿ ಹೆಗಡೆ (Dr. Rashmi Hegde) ಇದೀಗ ಸೈನಿಕರ ನೆರವಿನ ಸೇವೆಗೆ ಕಂಕಣತೊಟ್ಟಿದ್ದಾರೆ.

ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಮುಗಿಸಿ, ಕಳೆದ ಜನವರಿ ತಿಂಗಳಿನಲ್ಲಿ ಕೆಎಂಸಿ ಹುಬ್ಬಳ್ಳಿಯಿಂದ ಎಂಡಿ (ಜನರಲ್ ಮೆಡಿಸಿನ್) ಪದವಿಯನ್ನು ಗಳಿಸಿದ್ದರು. ತಾಲೂಕಿನ ಬೊಪ್ಪನಳ್ಳಿಯ ರೋಹಿಣಿ ಮತ್ತು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ವಿಶ್ರಾಂತ ಡೀನ್ (ಸ್ನಾತಕೋತ್ತರ) ಡಾ. ಲಕ್ಷ್ಮೀನಾರಾಯಣ ಹೆಗಡೆ ಅವರ ಪುತ್ರಿಯಾಗಿದ್ದಾರೆ.

ರಶ್ಮಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗೋಕಾಕ್‌ನ ಕೆ.ಎಲ್.ಇ. ಸಂಸ್ಥೆಯಲ್ಲಿಯೂ ಮತ್ತು ಪಿಯುಸಿಯನ್ನು ಶಿರಸಿಯ ಚೈತನ್ಯ ಮಹಾವಿದ್ಯಾಲಯದಲ್ಲಿ ಪೂರೈಸಿ, 2015ನೇ ಇಸವಿಯ ಪಿಯುಸಿ ಬೋರ್ಡ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯಕ್ಕೆ 4 ನೇ ಸ್ಥಾನವನ್ನು ಗಳಿಸಿದ್ದರು.

ಈ ಸುದ್ದಿಯನ್ನೂ ಓದಿ | Sirsi News: ವಿಶ್ವವಾವಾಣಿ ಹಾಗೂ ಲೋಕಧ್ವನಿಯ ಬಾಲಗೋಪಾಲ ಸ್ಪರ್ಧೆಯ ಬಹುಮಾನ ವಿತರಣೆ

ಡಾ. ರಶ್ಮಿ ಹೆಗಡೆ ಅವರು ದೇಶ ಕಾಯುವ ಸೈನಿಕರ ಮತ್ತು ಅವರ ಕುಟುಂಬದವರ ವೈದ್ಯಕೀಯ ಸೇವೆಗೆ ತಮ್ಮನ್ನು ತೊಡಗಿಸಿಕೊಂಡು ಹಲವು ಯುವ ವೈದ್ಯರಿಗೆ ಮಾದರಿಯಾಗಿದ್ದಾರೆ.