ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆ ಉದ್ಘಾಟಿಸಿದ ಪುರುಷರ ಫ್ಯಾಷನ್ ಬ್ರಾಂಡ್ ಕಿಸಾಹ್

ಇಂದಿರಾನಗರದಲ್ಲಿ ಆರಂಭವಾಗಿರುವ ಕಿಸಾಹ್ ನ ಹೊಸ ಮಳಿಗೆಯ ನಿಜಕ್ಕೂ ನಮಗೆ ಮಹತ್ವದ ಮೈಲುಗಲ್ಲಾಗಿದೆ. ಬೆಂಗಳೂರು ನಮ್ಮ ಆನ್‌ ಲೈನ್ ಚಾನಲ್‌ ಗಳಲ್ಲಿ ಬಹಳ ಪ್ರೀತಿಯನ್ನು ತೋರಿದ ನಗರ. ಇಲ್ಲಿ ನಮ್ಮ ದಿರಿಸುಗಳು ಅತಿ ಹೆಚ್ಚು ಮಾರಾಟವಾಗಿವೆ. ಇಲ್ಲಿನ ತಾರುಣ್ಯಪೂರ್ಣ ಯುವಜನತೆ ಮತ್ತು ಹುಮ್ಮಸ್ಸಿನ ಸಂಸ್ಕೃತಿಯು ಕಿಸಾಹ್‌ ಫ್ಯಾಷನ್‌ ಜೊತೆ ಸಂಪೂರ್ಣವಾಗಿ ಸರಿಹೊಂದುತ್ತದೆ.

ಬೆಂಗಳೂರಿನಲ್ಲಿ ಮೊದಲ ಮಳಿಗೆ ಉದ್ಘಾಟಿಸಿದ ಕಿಸಾಹ್

-

Ashok Nayak Ashok Nayak Sep 21, 2025 12:31 PM

ಬೆಂಗಳೂರು: ಆಕರ್ಷಕ ಬಣ್ಣಗಳು ಮತ್ತು ಮನಮೋಹಕ ವಿನ್ಯಾಸಗಳಿಗೆ ಹೆಸರಾದ ಪುರುಷರ ಫ್ಯಾಷನ್ ಬ್ರಾಂಡ್ ಆಗಿರುವ ಕಿಸಾಹ್ ಇಂದು ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆಯನ್ನು ಉದ್ಘಾಟಿಸಿದೆ. ಕೊಲ್ಕತ್ತಾದಾಚೆಗೆ ರಿಟೇಲ್ ಉದ್ಯಮ ವಿಸ್ತರಿಸುವ ಕಿಸಾಹ್‌ ಬ್ರಾಂಡ್ ನ ಪಯಣದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಈ ಬ್ರಾಂಡ್ ಈಗಾಗಲೇ ಭಾರತದ ಹಲವು ನಗರಗಳಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಆನ್‌ಲೈನ್ ಡಿ2ಸಿ ಚಾನಲ್ ಮೂಲಕ ಲಭ್ಯವಿದೆ.

ಆಕರ್ಷಕ ಮತ್ತು ಪ್ರಯೋಗಾತ್ಮಕ ಎತ್ನಿಕ್ ಉಡುಗೆಗಳನ್ನು, ಹೊಸ ತಲೆಮಾರಿನವರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕಿಸಾಹ್ ಅನ್ನು ಸ್ಥಾಪಿಸಲಾಯಿತು. ಜೆನ್ ಜೀ ಮತ್ತು ಸ್ಟೈಲ್ ಅನ್ನು ಪಾಲಿಸುವ ಪುರುಷರಿಗೆಂದೇ ವಿನ್ಯಾಸಗೊಳಿಸಲಾದ ಕಿಸಾಹ್ ಸಂಸ್ಥೆ ಆನ್‌ಲೈನ್‌ ನಲ್ಲಿ ಉಪಸ್ಥಿತಿ ಹೊಂದಿದೆ ಮತ್ತು ಕೋಲ್ಕತ್ತಾದಲ್ಲಿ ಮೂರು ಮಳಿಗೆಗಳನ್ನು ಹೊಂದಿದೆ. ಇದೀಗ ಕಿಸಾಹ್ ಬೆಂಗಳೂರಿನ ಫ್ಯಾಷನ್ ಆಸಕ್ತರನ್ನು ತಲುಪಲು ಮುಂದಾಗಿದೆ.

ಇದನ್ನೂ ಓದಿ: Bangalore News: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ವತಿಯಿಂದ ಗ್ರಾಹಕರಿಗಾಗಿ "ಕ್ವಿಕ್‌ ಇಂಡಿಯಾ ಮೂವ್‌ಮೆಂಟ್‌ ಘೋಷಣೆ

ಹೊಸ ಮಳಿಗೆ ಉದ್ಘಾಟಿಸಿ ಮಾತನಾಡಿದ ಕಿಸಾಹ್ ಅಪೇರಲ್ಸ್ ಪ್ರೈ. ಲಿಮಿಟೆಡ್‌ ನ ಸಹ ಸಂಸ್ಥಾಪಕ ಯಶ್ ಸರವಗಿ ಅವರು, “ಇಂದಿರಾನಗರದಲ್ಲಿ ಆರಂಭವಾಗಿರುವ ಕಿಸಾಹ್ ನ ಹೊಸ ಮಳಿಗೆಯ ನಿಜಕ್ಕೂ ನಮಗೆ ಮಹತ್ವದ ಮೈಲುಗಲ್ಲಾಗಿದೆ. ಬೆಂಗಳೂರು ನಮ್ಮ ಆನ್‌ ಲೈನ್ ಚಾನಲ್‌ ಗಳಲ್ಲಿ ಬಹಳ ಪ್ರೀತಿಯನ್ನು ತೋರಿದ ನಗರ. ಇಲ್ಲಿ ನಮ್ಮ ದಿರಿಸುಗಳು ಅತಿ ಹೆಚ್ಚು ಮಾರಾಟವಾಗಿವೆ. ಇಲ್ಲಿನ ತಾರುಣ್ಯಪೂರ್ಣ ಯುವಜನತೆ ಮತ್ತು ಹುಮ್ಮಸ್ಸಿನ ಸಂಸ್ಕೃತಿಯು ಕಿಸಾಹ್‌ ಫ್ಯಾಷನ್‌ ಜೊತೆ ಸಂಪೂರ್ಣವಾಗಿ ಸರಿಹೊಂದುತ್ತದೆ.

ನಾವು ಈ ಮಳಿಗೆಯನ್ನು ಬೆಂಗಳೂರಿನ ಯುವಕರನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಿದ್ದೇವೆ. ಈ ಮಳಿಗೆಯು ಅವರಿಗೆ ಅತ್ಯುತ್ತಮ ಅನುಭವ ಒದಗಿಸಲಿದೆ” ಎಂದು ಹೇಳಿದರು. ಇಂದಿರಾನಗರದ 100 ಅಡಿ ರಸ್ತೆಯ ಶ್ರೇಯಸ್ ಪ್ಲಾಜಾದ ಗ್ರೌಂಡ್ ಫ್ಲೋರ್‌ ನ ಶಾಪ್ ನಂ. 2012 ಕಿಸಾಹ್ ಮಳಿಗೆ ಕಾರ್ಯಾರಂಭ ಮಾಡಿದೆ. ವೆಬ್‌ ಸೈಟ್: https://kisah.in